ಕೊಟ್ಪಾ ದಾಳಿ: 30 ಪ್ರಕರಣ ದಾಖಲು

ಬಾಗಲಕೋಟೆ೨೫:  ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ಬಾಗಲಕೋಟೆ ನವನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಬಾಗಲಕೋಟೆ ನವನಗರ ಪೋಲಿಸ್ ಠಾಣೆ ವತಿಯಿಂದ ಕೋಟ್ಪಾ-2003ರ ಕಾಯಿದೆಯ ಅಡಿಯಲ್ಲಿ ಇತ್ತೀಚೆಗೆ ಕಾಯರ್ಾಚರಣೆ ನಡೆಸಲಾಯಿತು.

ಕಾಯರ್ಾಚರಣೆಯಲ್ಲಿ ತಂಬಾಕು ಉತ್ಪನ್ನಗಳ ಅಧಿನಿಯಮ-2003ರ ಸೆಕ್ಷನ್ 4 ಹಾಗೂ 6 ರಲ್ಲಿ ಒಟ್ಟು 30 ಪ್ರಕರಣಗಳನ್ನು ದಾಖಲಿಸುವ ಮೂಲಕ ಒಟ್ಟು 3350 ರೂ.ಗಳ ದಂಡವನ್ನು ಸ್ಥಳದಲ್ಲಿಯೇ ವಿಧಿಸಿ, ನಿಯಮಬಾಹಿರವಾಗಿ ಅಳವಡಿಸಿದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಯಿತು.

 ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ತಂಬಾಕು ಸಲಹೆಗಾರರಾದ ಶಶಿಕಾಂತ ಕುಮಠಳ್ಳಿ, ಶಿವಲಿಂಗ ಕರಗಣ್ಣಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾದಿಕಾರದ ಎನ್.ಡಿ ನಿಲನಾಯಕ, ಬಾಗಲಕೋಟೆ ನವನಗರ ಪೋಲಿಸ್ ಠಾಣೆಯ ಎನ್.ಎಂ ಕಾಮನ್ನವರ, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷರಾದ ಎಸ್.ಎಸ್ ಚವಡಿ ಇದ್ದರು.