ಲೋಕದರ್ಶನವರದಿ
ಗುಳೇದಗುಡ್ಡ09: ಧಾಮರ್ಿಕ ಆಚರಣೆಗಳಿಗೆ ಪ್ರಸಿದ್ದವಾಗಿರುವ ಈ ಭಾಗದ ಕೋಟೆಕಲ್ ಗ್ರಾಮದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ರಥೋತ್ಸವದ ಅಂಗವಾಗಿ ಶನಿವಾರ ಮಂಟಾ ಬಂಧುಗಳಿಂದ ಅಗ್ನಿ ಪ್ರವೇಶೋಂಲ್ಲಘನ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ಕತರ್ೃ ಗದ್ದುಗೆಗೆ ರುದ್ರಾಭೀಷೇಕ ನಡೆಯಿತು. ಸಂಜೆ ಮಂಟಾ ಪರಿವಾರದವರಿಂದ ಅಗ್ಗಿ ಹಾಯುವ ಕಾರ್ಯಕ್ರಮಕ್ಕೆ ಪೂಜೆ ನಡೆಯಿತು. ಪಲ್ಲಕಿ ಹೊತ್ತು ಅಗ್ನಿ ಹಾಯುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ನಂತರ ನೂರಾರು ಜನರು ಅಗ್ಗಿ ಹಾಯ್ದು ಹುಚ್ಚೇಶ್ವರ ದೇವರ ಆಶಿವರ್ಾದಕ್ಕೆ ಪಾತ್ರರಾದರು.
ಈ ಸಂದಭದಲ್ಲಿ ಮರಡಿಮಠದ ಕಾಡಸಿದ್ದೇಶ್ವರ ಶ್ರೀಗಳು, ಗಂಗಾವತಿಯ ಕಲ್ಮಠದ ಡಾ.ಕೊಟ್ಟೂರು ಶ್ರೀಗಳು, ಮುರುಘಾಮಠದ ಕಾಶಿನಾಥ ಶ್ರೀಗಳು, ಹೊಳೆಹುಚ್ಚೇಶ್ವರ ಶ್ರೀಗಳು, ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀಗಳು ಸಾನಿಧ್ಯವಹಿಸಿದ್ದರು.
ಭುಜಂಗರಾವ ದೇಸಾಯಿ, ಹನಮಂತ ಮಾವಿನಮರದ, ಪ್ರಭು ಮಂಟಾಗೌಡ್ರ, ಕಾಶಪ್ಪ ಮಂಟಾಗೌಡ್ರ, ತಿಪ್ಪಾಗೌಡ್ರ, ವಿಜಯಕುಮಾರ ಬೇಟಗೇರಿಗೌಡ್ರ, ಶಿವಾನಂದ ಮಂಟಾ, ಬಸವರಾಜ ಮಂಟಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.