ಕೊಪ್ಪಳ ತಾಲೂಕಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಮಾಲಾ ಬಡಿಗೇರ್ ಆಯ್ಕೆ

Koppal Taluka 10th Kannada Sahitya Sammelna: Mala Badiger elected as President

ಕೊಪ್ಪಳ 03: ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ವತಿಯಿಂದ ಹಲಗೇರಿ ಗ್ರಾಮದಲ್ಲಿ ದಿ 23/03/2025 ರಂದು ಆಯೋಜನೆ ಮಾಡಿರುವ ಕೊಪ್ಪಳ ತಾಲೂಕಾ 10 ನೇ  ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಹಿಳಾ ಲೇಖಕಿ ಮಾಲಾ ಬಡಿಗೇರ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಘಟಕದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ ಬಿ ಗೊಂಡಬಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

ವಿಜಯಲಕ್ಷ್ಮಿ ಕೊಟಗಿ , ಅನಸೂಯಾ ಜಹಗೀರದಾರ್, ವಾಯ್ ಹೆಚ್ ಹಳ್ಳಿಕೇರಿ, ಅಕ್ಬರ್ ಕಾಲಿಮಿರ್ಚಿ, ಯಲ್ಲಪ್ಪ ಹರ್ನಾಳಗಿ ಹೆಸರುಗಳು ಪ್ರಸ್ತಾಪವಾಯಿತು. ಅಂತಿಮವಾಗಿ ಮಾಲಾ ಬಡಿಗೇರ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.