ಇ-ಖಾತಾ ಅಭಿಯಾನಕ್ಕೆ ಕೊಪ್ಪಳ ನಗರಸಭೆ ಅಧ್ಯಕ್ಷರಿಂದ ಚಾಲನೆ- ಅಮ್ಜದ್ ಪಟೇಲ್‌

Koppal Municipal Council President launches e-Khata campaign - Amjad Patel

ಇ-ಖಾತಾ ಅಭಿಯಾನಕ್ಕೆ ಕೊಪ್ಪಳ ನಗರಸಭೆ ಅಧ್ಯಕ್ಷರಿಂದ ಚಾಲನೆ- ಅಮ್ಜದ್ ಪಟೇಲ್‌

ಕೊಪ್ಪಳ 03: ಸಾರ್ವಜನಿಕರು ತಮ್ಮ ಆಸ್ತಿಯ ಎ ಖಾತ ಮತ್ತು ಬಿ ಖಾತವನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹೇಳಿದರು. ಅವರು ಗುರುವಾರ ನಗರದ ಮೂರನೇ ವಾರ್ಡಿನಲ್ಲಿ ಕೊಪ್ಪಳ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕೊಪ್ಪಳ ನಗರಸಭೆ ಕಾರ್ಯಲಯದ ವತಿಯಿಂದ ಇ-ಖಾತಾ ಅಭಿಯಾನ ಮತ್ತು ಎ ಖಾತ ಮತ್ತು ಬಿ ಖಾತ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಮಾರು ವರ್ಷಗಳಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ ಖಾತಾ ಮತ್ತು ಬಿ ಖಾತ, ಎಂಬಿ ನಂಬರ್ ನಮೂನೆ 3 ನ್ನು ಪಡೆಯಲು ಸಾರ್ವಜನಿಕರು ಪರದಾಡುವಂತ ಸ್ಥಿತಿ ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಸಾರ್ವಜನಿಕರ ಅನುಕೂಲಕ್ಕಾಗಿ ಮನೆಬಾಗಿಲಿಗೆ ಎ ಖಾತ ಮತ್ತು ಬಿ ಖಾತ ಫಾರಂ ನಂಬರ್ 3ರ ವಿತರಣೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರಿಂದಾಗಿ ತುಂಬಾ ಅನುಕೂಲವಾಗಿದೆ. ನಮ್ಮ ಸರ್ಕಾರವು ಹಮ್ಮಿಕೊಂಡಿರುವ ಈ ಅಭಿಯಾನದಡಿ ಮೂರು ತಿಂಗಳ ಒಳಗಾಗಿ ಕೊಪ್ಪಳ ನಗರದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಎ ಖಾತ ಬಿ ಖಾತದಿಂದ ಜನರಿಗೆ ಸರ್ಕಾರದಿಂದ ವಿವಿಧ ಗೃಹ ಯೋಜನೆಗಳಡಿ ಸಹಾಯಧನ, ಸಾಲ ಸೌಲಭ್ಯಗಳು ಅತ್ಯಂತ ಸುಲಭವಾಗಿ ಸಿಗಲಿವೆ. ಇಂತಹ ನೂತನ ಯೋಜನೆಯನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದು, ಇದರಿಂದ ಕೊಪ್ಪಳ ನಗರಸಭೆ ವ್ಯಾಪ್ತಿಯ ಸುಮಾರು 8 ಸಾವಿರಕ್ಕೂ ಅಧಿಕ ನಿವೇಶನಗಳು, ಆಶ್ರಯ ಮನೆಗಳಿಗೆ ಅನುಕೂಲವಾಗಲಿದೆ. ಕೊಪ್ಪಳ ನಗರದ ಪ್ರತಿಯೊಬ್ಬರು ತಮ್ಮ ಮನೆಯ ಆಸ್ತಿ ದಾಖಲೆಯ ಪತ್ರಗಳನ್ನು ನೀಡಿ, ಎ ಖಾತ ಮತ್ತು ಬಿ ಖಾತ ಪಡೆದುಕೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಸಾರ್ವಜನಿಕರಿಗೆ ಅವರು ಕರೆ ನೀಡಿದರು.ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯ ಉಪಾಧ್ಯಕ್ಷರಾದ ಅಶ್ವಿನಿ ಗದುಗಿನಮಠ್, ಪೌರಾಯುಕ್ತರಾದ ಗಣಪತಿ ಪಾಟೀಲ್, ಓಣಿಯ ಹಿರಿಯರಾದ ಖಾಜಾ ಹುಸೇನ್ ರೆವಡಿ, ಸಲೀಂ ಅಳವಂಡಿ, ಹಜರತ್ ಮುಜಾವರ್ ಸೇರಿದಂತೆ ನಗರಸಭೆಯ ಕಂದಾಯ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.’ಶ್ರೇಷ್ಠ ಕೃಷಿಕ-ಸಮಗ್ರ ಕೃಷಿ ಪದ್ಧತಿ’ ಪ್ರಶಸ್ತಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ----ಕೊಪ್ಪಳ ಏಪ್ರಿಲ್ 03 (ಕರ್ನಾಟಕ ವಾರ್ತೆ): ಜಂಟಿ ಕಾರ್ಯದರ್ಶಿ, ಅಲುಮಿನಿ ಅಸೋಶಿಯೇಷನ್‌-ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು ಇವರು, ಕರ್ನಾಟಕ ರಾಜ್ಯದಲ್ಲಿ ಸುಸ್ಥಿರ ಕೃಷಿಯ ಬೆಳವಣಿಗಾಗಿ “ಸಮಗ್ರ ಕೃಷಿ ಪದ್ಧತಿ” ಯನ್ನು ಉತ್ತೇಜಿಸುವ ಸಲುವಾಗಿ 2024-25ನೇ ಸಾಲಿಗೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ, ಮಲೆನಾಡು ಪ್ರದೇಶದ “ಸಮಗ್ರ ಕೃಷಿ ಪದ್ಧತಿ” ಅಳವಡಿಸಿಕೊಂಡಿರುವ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅವಧಿ ವಿಸ್ತರಿಸಲಾಗಿದೆ.ಅರ್ಹ ರೈತರು, ಅಲುಮಿನಿ ಅಸೋಶಿಯೇಷನ್‌-ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು ರವರು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಏಪ್ರಿಲ್ 9ರ ಒಳಗೆ ‘ದಿ ಸೆಕ್ರೇಟರಿ, ಅಲುಮಿನಿ ಅಸೋಶಿಯೇಷನ್ ಯುಎಎಸ್ ಕನ್ವೆನ್ಷನ್ ಸೆಂಟರ್, ಹೆಬ್ಬಾಳ, ಬೆಂಗಳೂರು-560024’ ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ. ಪ್ರಶಸ್ತಿಯ ಮೊತ್ತವು ರೂ. 25000 ಗಳು ಇರುತ್ತದೆ. ಅರ್ಜಿ ನಮೂನೆಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.