ಏ.20 ರಂದು ಕೊಪ್ಪಳ ಕಿರು ಜಾತ್ರೆ: ಮುತ್ತುಸ್ವಾಮಿ
ಕೊಪ್ಪಳ 16: ಕೊಪ್ಪಳ ಕಿರು ಜಾತ್ರೆ 2025,ಕೊಪ್ಪಳ ಕೋಗಿಲೆ ಸೀಸನ್ -5 ಗ್ರಾಂಡ್ ಫಿನಾಲೆ ಹಾಗೂ ಕೊಪ್ಪಳ ಕಿರು ಜಾತ್ರೆ ಸೀಸನ್ -2 ರ ಮಜಾ ಭಾರತ, ಕನ್ನಡ ಕೋಗಿಲೆ, ಸರಿಗಮಪ ಹಾಗೂ ಇನ್ನೂ ಅನೇಕ ಕಲಾವಿದರಿಂದ ಅದ್ದೂರಿ ಕಾರ್ಯಕ್ರಮ ಇದೇ ಏಪ್ರಿಲ್ 20 ರ ರವಿವಾರದಂದು ಸಂಜೆ 6 ಗಂಟೆಗೆ ನಗರದ ತಾಲೂಕು ಕ್ರೀಡಾಂಗಣ ನಡೆಯಲಿದೆ ಎಂದು ಕೊಪ್ಪಳ ಕಿರುಜಾತ್ರೆ ಸಂಘಟಕರಾದ ಮುತ್ತುಸ್ವಾಮಿ ನರೇಗಲ್ ಮಠ, ಶರಣಪ್ಪ ಸಜ್ಜನ್ ಹೇಳಿದರು.
ಅವರು ಬುಧವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಸಚಿವರಾದ ಶಿವರಾಜ್ ತಂಗಡಗಿ , ಮಾಜಿ ಸಂಸದ ಸಂಗಣ್ಣ ಕರಡಿ, ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ವಹಿಸಲಿದ್ದು, ಉದ್ಘಾಟನೆಯನ್ನು ಸಂಸದ ಕೆ. ರಾಜಶೇಖರ್ ಹಿಟ್ನಾಳ್ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಜೆಡಿಎಸ್ ಮುಖಂಡ ಸಿ.ವಿ. ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಸೇರಿದಂತೆ ಅನೇಕರು ಪಾಲ್ಗೊಳ್ಳುವರು.ಕಾರ್ಯಕ್ರಮದಲ್ಲಿ ಚಲನಚಿತ್ರ ತಾರೆ ಹರ್ಷಿಕಾ ಪೂಣಚ್ಚ, ಕಾಮಿಡಿ ಕಿಲಾಡಿಗಳು, ಧಾರವಾಹಿಯ ಕಿರುತೆರೆ ನಟರು ಆಗಮಿಸಲಿದ್ದು ಡಿಕೆಡಿ, ನೃತ್ಯ ತಂಡ ಹಾಗೂ ಬಂಜಾರ ನೃತ್ಯ ತಂಡದವರು,ಕೊಪ್ಪಳದಲ್ಲಿ ್ರ್ರಥಮ ಬಾರಿಗೆ ಲೈವ್ ಮ್ಯೂಸಿಕ್ ಮಾನಸಾ ಹೊಳ್ಳ ಹಾಗೂ ಮೈಸೂರು ತಂಡದಿಂದ ಅದ್ದೂರಿ ಕಾರ್ಯಕ್ರಮಗಳು, ನೀಡಲಿದ್ದು ಜನತೆ, ಅಭಿಮಾನಿಗಳು ಕಾರ್ಯಕ್ರಮವನ್ನು ವೀಕ್ಷಿಸಿ ಯಶಸ್ವಿಗೊಳಿಸೋಣ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಕೋಣಂಗಿ, ಅಜ್ಜಪ್ಪಸ್ವಾಮಿ ಚೆನ್ನವಡಯರ ಮಠ,ಪಾಂಡು ಕೆ.ಎಸ್, ಶ್ಯಾಮ್ ಬೆಣಗಿ ಉಪಸ್ಥಿತರಿದ್ದರು.