ನೇಪಾಳದ ನೆಲದಲ್ಲಿ ಕೊಪ್ಪಳದ ಕನ್ನಡದ ಕಂಪು

ಲೋಕದರ್ಶನ ವರದಿ

ಕೊಪ್ಪಳ 29: ನೆರೆ ರಾಷ್ಟ್ರ ನೇಪಾಳ ದೇಶದ ಫೋಕಾರ್ ಮಹಾ ನಗರದಲ್ಲಿ ಜ. 12ರಿಂದ ಜರುಗಿದ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯಿಂದ ಹಲವರು ಭಾಗವಹಿಸಿ ಕಾರ್ಯಕ್ರಮ ನೀಡುವುದರ ಮೂಲಕ ನೇಪಾಳದ ನೆಲದಲ್ಲಿ ಕೊಪ್ಪಳದ ಕನ್ನಡದ ಕಂಪು ಕಾರ್ಯಕ್ರಮ ಮೂಡಿಬಂದಿತು. ಮಂಗಳೂರಿನ ಪಿ.ವಿ.ಪ್ರದೀಪ್ ಕುಮಾರ ನೇತೃತ್ವದಲ್ಲಿ ರಾಜ್ಯದಿಂದ ಈ ತಂಡ ನೇಪಾಳಕ್ಕೆ ಪ್ರಯಾಣ ಬೆಳೆಸಿತ್ತು.

ಕೊಪ್ಪಳ ಜಿಲ್ಲೆಯಿಂದ ಯಶಸ್ವಿ ಸಂಗೀತ ಸಾಹಿತ್ಯ ಸಂಸ್ಥೆಯ ಅಧ್ಯಕ್ಷರು ಹಾಗೂ ಸಂಗೀತ ಗಾಯಕಿ ಅನ್ನಪೂರ್ಣ ಮಹೇಶ ಮನ್ನಾಪೂರ (ಮುಧೋಳ) ದಂಪತಿಗಳು ಕವನ ವಾಚನ ಸಂಗೀತ ಕಾರ್ಯಕ್ರಮ ನೀಡಿ ನೇಪಾಳದ ನೆಲದಲ್ಲಿ ಕನ್ನಡದ ಕಂಪು ಮೂಡಿಸಿದರೆ, ಜಿಲ್ಲೆಯ ನಿಮಿಷಾಂಭ ಆಟರ್್ ಗ್ಯಾಲರಿಯ ಶ್ರೀನಿವಾಸ ಚಿತ್ರಗಾರ ದಂಪತಿಗಳು ಪಾಲ್ಗೊಂಡು ಕವಿಗೋಷ್ಠಿ ಮತ್ತು ಆರ್ಟ್  ಗ್ಯಾಲರಿಯಲ್ಲಿ ಕಿನ್ನಾಳದ ಕಲೆ ಅನಾವರಣಗೊಳಿಸಿ ಜಿಲ್ಲೆಯ ಕೀರ್ತಿ  ಪತಾಕಿ ಹಾರಿಸಿದ್ದಾರೆ. ಅವರ ಮಗಳು ಭರತ ನಾಟ್ಯ ಮಾಡಿ ಅಲ್ಲಿಯ ಜನರ ಜನಮನ ರಂಜಿಸಿದ್ದಾರೆ. 

ಎ.ಕೆ.ಸುಬಾದರ್ ದಂಪತಿಗಳು ಹಿರೇಮನ್ನಾಪೂರ, ಶಿಕ್ಷಕಿ ವಿಜಯಕುಮಾರಿ ಗಲಗಲಿ, ತುಮಕೂರಿನ ಟಿ.ನಾಗರಾಜ ಮತ್ತು ಅವರ ಪತ್ನಿ ಜಯಮ್ಮ ಅಲ್ಲದೇ ಕು.ವಿಜಯಕುಮಾರ ಮನ್ನಾಪೂರ, ಕು.ಭಾಸ್ಕರ್ ಚಿತ್ರಗಾರ, ಕು.ವೀಣಾ ಚಿತ್ರಗಾರ ಮತ್ತೀತರರು ಕನ್ನಡದ ಕಂಪು ಕಾರ್ಯಕ್ರಮದ ಪ್ರವಾಸ ಬೆಳೆಸಿದ್ದರು. ಸುರೇಶ ನೆಗಳಗುಡಿ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಮಹೇಶ ಮನ್ನಾಪೂರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಅನ್ನಪೂರ್ಣ ಮನ್ನಾಪೂರ ಅವರ ಸಂಗೀತ ಗಾಯನಕ್ಕೆ, ಮಹೇಶ ಮನ್ನಾಪೂರ ಅವರ ಕವನ ವಾಚನಕ್ಕೆ, ಶ್ರೀನಿವಾಸ ಚಿತ್ರಗಾರ ಅವರ ಆಟರ್್ ಗ್ಯಾಲರಿ ಅನಾವರಣಕ್ಕೆ ಅಲ್ಲಿಯ ಜನ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮದಲ್ಲಿ ಅವರೆಲ್ಲರನ್ನು ನೇಪಾಳ ದೇಶದ ಕನ್ನಡಿಗರ ಪರವಾಗಿ ಗೋಲ್ಡನ್ ಎಕ್ಷೆಲ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಮಂಗಳೂರಿನ ಪ್ರೀಯಾ ಹರ್ಷರವರು ಕಾರ್ಯಕ್ರಮ ನಿರೂಪಿಸಿದರೆ, ಪತ್ರಕರ್ತೆ  ಉಷಾ ಬೆಂಗಳೂರು ಅನೇಕರು ಪಾಲ್ಗೊಂಡಿದ್ದರು.

ಅನ್ನಪೂರ್ಣ ಮಹೇಶ ಮನ್ನಾಪೂರ ದಂಪತಿಗಳು, ಶ್ರೀನಿವಾಸ ಚಿತ್ರಗಾರ ದಂಪತಿ ಸೇರಿದಂತೆ ಮತ್ತೀತರರು ನೇಪಾಳದ ಪ್ರವಾಸ ಹಮ್ಮಿಕೊಂಡು ಅಲ್ಲಿಯ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ನಮ್ಮ ಕೊಪ್ಪಳ ಜಿಲ್ಲೆಯ ಕನ್ನಡದ ಕಂಪು ಮೂಡಿಸಿ ಜನಮನ ರಂಜಿಸಿ ಅಲ್ಲಿಯ ಕನ್ನಡಿಗರ ವಿಶ್ವಾಸ, ಪ್ರೀತಿ ಗಳಿಸಿ ಅವರಿಂದ ಮೆಚ್ಚುಗೆ ಮತ್ತು ಪ್ರಶಸ್ತಿಗಳಿಸಿ ಜಿಲ್ಲೆಯ ಕೀತರ್ಿ ತಂದಿರುವುದಕ್ಕೆ ಇಲ್ಲಿನ ವಿವಿಧ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿವೆ.