ಲೋಕದರ್ಶನ ವರದಿ
ಕೊಪ್ಪಳ 15: ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ್ ಮಹಾವಿದ್ಯಾಲಯದ ಸ್ವಸ್ಥವೃತ್ತ ವಿಭಾಗದಿಂದ ದಿ. 14ರಂದು ವಿಶ್ವಯೋಗ ದಿನಾಚರಣೆಯ ಅಂಗವಾಗಿ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಯೋಗ ತರಬೇತಿಯೊಂದಿಗೆ ಯೋಗ ಮತ್ತು ಆರೋಗ್ಯದ ಮಹತ್ವ ಕುರಿತು ಉಪನ್ಯಾಸ ನೀಡಲಾಯಿತು.
ಈ ಯೋಗ ಶಿಬಿರದಲ್ಲಿ ಸುಮಾರು 200 ವಿದ್ಯಾರ್ಥಿ ಗಳು ಭಾಗವಹಿಸಿ ತರಬೇತಿಯ ಉಪಯೋಗ ಪಡೆದರು. ಸ್ವಸ್ಥವೃತ್ತ ವಿಭಾಗದ ಉಪನ್ಯಾಸಕರಾ ಡಾ. ಚಂದ್ರಶೇಖರರಡ್ಡಿ.ಎಸ್.ಕರಮುಡಿ, ಡಾ. ಪ್ರಭು. ಸಿ. ನಾಗಲಾಪೂರ, ಡಾ. ಉಮಾಶ್ರೀ ಹಿರೇಮಠ ಯೋಗ ಕುರಿತು ತರಬೇತಿ ಮತ್ತು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಸ್ವಸ್ಥವೃತ್ತ ವಿಭಾಗದ ಸ್ನಾತಕೋತ್ತರ ವಿದ್ಯಾಥರ್ಿಗಳು ಡಾ. ಸೃಜನಾ, ಡಾ. ಚನ್ನಮ್ಮ, ಡಾ. ಸ್ಮೃತಿರೇಖಾ, ಡಾ. ಪ್ರಿಯಾಂಕ ಹಾಗೂ ಡಾ. ಅಂಕುಶ ಉಪಸ್ಥಿತರಿದ್ದರು.