ಕೊಪ್ಪಳ: ಚೌಕಿದಾರ ಮೋದಿಗೆ ದೇಶದ ಪ್ರಧಾನ ಸೇವಕರನ್ನಾಗಿ ಮಾಡಲು ಗಂಗಾವತಿ ಕಾರ್ಯಕ್ರಮ ಯಶಸ್ವಿಗೊಳಿಸಿ

ಲೋಕದರ್ಶನ ವರದಿ

ಕೊಪ್ಪಳ 11: ದೇಶದ ಪ್ರಧಾನ ಮಂತ್ರಿಯಾಗಿ ಸುಭದ್ರ ಆಡಳಿತ ನೀಡಿ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಚೌಕಿದಾರ ನರೇಂದ್ರ ಮೋದಿಯವರನ್ನು ಮತ್ತೋಮ್ಮೆ ದೇಶದ ಪ್ರಧಾನ ಸೇವಕರನ್ನಾಗಿ ಮಾಡಲು ಕೊಪ್ಪಳ ಲೋಕಸಭೆ ಚುನಾವಣೆಯ ನಿಮಿತ್ಯ ದಿ.12 ರ ಮೋದಿಯವರ ಗಂಗಾವತಿ ಬೃಹತ್ ಕಾರ್ಯಕ್ರಮ ಯಶಸ್ವೀಗೊಳಿಸುವಂತೆ ಬಿಜೆಪಿ ಹಿರಿಯ ಮುಖಂಡ ಚೌಕಿದಾರ ಮಂಜುನಾಥ ಹಳ್ಳಿಕೇರಿ ಕಾರ್ಯಕರ್ತರು, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಜಯ ಸಂಕಲ್ಪ ಗಂಗಾವತಿ ರ್ಯಾಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಕೊಪ್ಪಳ-ರಾಯಚೂರು-ಬಳ್ಳಾರಿ ಜಿಲ್ಲೆಗಳ ಚೌಕಿದಾರ ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡು ಮತ್ತೋಮ್ಮೆ ಚೌಕಿದಾರಗೆ ಬೆಂಬಲಿಸಿ ಸಮೃದ್ಧ ಭಾರತದ ನಿಮರ್ಾಣಕ್ಕಾಗಿ, ವಿಕಾಸಕ್ಕಾಗಿ, ಸ್ವಾಭಿಮಾನಕ್ಕಾಗಿ, ಸಶಕ್ತ ಭಾರತದ ನಿಮರ್ಾಣಕ್ಕಾಗಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ಕ್ಕಾಗಿ ನರೇಂದ್ರ ಮೋದಿಯವರನ್ನು ಮತ್ತೋಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ.

ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪಧರ್ಿಸಿರುವ ಸಂಸದ ಸಂಗಣ್ಣ ಕರಡಿಯವರಿಗೆ ಬೆಂಬಲಿಸಿ ಅವರನ್ನು ಜಯಶಾಲಿಯನ್ನಾಗಿ ಮಾಡಲು ಮತದಾರರ ಮತ ಕೇಳಲು ಕ್ಷೇತ್ರದ ಗಂಗಾವತಿಗೆ ಆಗಮಿಸಲಿರುವ ದೇಶದ ಹೆಮ್ಮೆಯ ಚೌಕಿದಾರ ನರೇಂದ್ರ ಮೋದಿಯವರ ಕೈ ಬಲಪಡಿಸಲು ಮತ್ತು ಶಕ್ತಿ ತುಂಬಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಜನತೆಗೆ ಚೌಕಿದಾರ ಮಂಜುನಾಥ ಹಳ್ಳಿಕೇರಿ ಪ್ರಕಟನೆ ಮೂಲಕ ಮನವಿ ಮಾಡಿದ್ದಾರೆ.