ಕೊಪ್ಪಳ: ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕಾರ್ಯ ಮಹತ್ವ: ರೇಣುಕಾ
ಕೊಪ್ಪಳ: ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕಾರ್ಯ ಮಹತ್ವ: ರೇಣುಕಾKoppal: The importance of police in maintaining peace and order: Renuka
Lokadrshan Daily
1/3/25, 9:21 AM ಪ್ರಕಟಿಸಲಾಗಿದೆ
ಲೋಕದರ್ಶನ ವರದಿ
ಕೊಪ್ಪಳ 02: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ದಿನದ ಇಪ್ಪತ್ತುನಾಲ್ಕು ತಾಸು ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಮಹತ್ವದ್ದಾಗಿದೆ, ಅವರು ತಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ, ಇದರಿಂದ ಸಮಾದಲ್ಲಿ ಶಾಂತಿ ನೆಮ್ಮದಿಯಿಂದ ಜನರು ತಮ್ಮ ಬದುಕು ಸಾಗಿಸುತ್ತಾರೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ಹೇಳಿದರು.
ಅವರು ಮಂಗಳವಾರ ಬೆಳಿಗ್ಗೆ ಕೊಪ್ಪಳ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಏರ್ಪಡಿಸಿದ ಪೊಲೀಸ್ ದ್ವಜದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪೊಲೀಸರ ಉತ್ತಮ ಸೇವೆಗಾಗಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ, ಈ ದಿಶೆಯಲ್ಲಿ ಸಾರ್ವಜನಿಕರು ಸಲಹೆ ಸೂಚನೆ ಮತ್ತು ಸಾಹಕಾರ ನೀಡಿದರೆ ಇನ್ನಷ್ಟು ಉತ್ತಮ ರೀತಿಯಲ್ಲಿ ಪೊಲೀಸ್ ಸೇವೆ ವದಗಿಸಿ ಕೊಡಲು ಸಾಧ್ಯ ಎಂದರು.
ಮುಖ್ಯ ಅಥಿತಿಗಾಳಾಗಿ ನಿವೃತ್ತ ಪಿಎಸ್ಐ ಈರಪ್ಪ ಮಾಳವಾಡ್ ಪೊಲೀಸ್ ದ್ವಜ ಕಾರ್ಯಕ್ರಮದಲ್ಲಿ ಪೊಲೀಸ್ ವಂದನೆ ಸ್ವೀಕರಿಸಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪೊಲೀಸ್ ಬಂದೂಬಸ್ತ್ ಸೇರಿದಂತೆ ವಿಶೇಷ ಕರ್ತವ್ಯದ ಮೇಲೆ ಜಿಲ್ಲಾ ಕೇಂದ್ರಕ್ಕೆ ಬಂದಾಗ ವಸತಿ ಗೃಹ, ವಿಶ್ರಾಂತಿ ಗೃಹ ಅವ್ಯಶಕವಾಗಿದ್ದು ಎಸ್ಪಿ ಮೆಡಂ ರವರು ಇದನ್ನು ನಿಮರ್ಿಸಿ ಪೊಲೀಸರಿಗೆ ಅನುಕೂಲ ಮತ್ತು ಸೌಕರ್ಯ ವದಗಿಸಿ ಕೊಡುವಂತೆ ಮನವಿ ಮಾಡಿಕೊಂಡರು. ಪೊಲೀಸರ ತುಕಡಿಗಳಿಂದ ಸಾಮೂಹಿಕ ಕವಾಯತ್ ಗೌರವ ವಂದನೆ ಜರುಗಿತು.
ಕಾರ್ಯಕ್ರಮದಲ್ಲಿ ಗಣ್ಯರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂಧಿ ವರ್ಗದವರು ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಅವರ ಕುಟುಂಬ ವರ್ಗದವರು ಪಾಲ್ಗೋಂಡಿದ್ದು, ಆರಂಭದಲ್ಲಿ ಡಿಎಸ್ಪಿ, ಎಸ್,ಎಸ್ ಹೂಲ್ಲೂರು ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು, ಎಸ್ಪಿ ರೇಣುಕಾ ಸುಕುಮಾರ್ ರವರು ಪೊಲೀಸ್ ದ್ವಜ ದಿನಾಚರಣೆ ಕಾರ್ಯಕ್ರಮದ ಬಗ್ಗೆ ವರದಿ ವಾಚನ ಮಾಡಿದರು, ಕರಿಬಸಪ್ಪ ಕಾರ್ಯಕ್ರಮ ನಿರೂಪಿಸಿದರೆ, ಬಿಜಿ. ಚಂದ್ರಶೇಖರ್ ಕೊನೆಯಲ್ಲಿ ವಂದಿಸಿದರು.