ಲೋಕದರ್ಶನ ವರದಿ
ಕೊಪ್ಪಳ 09: ಜಾನಕಿ ಒಂದು ಮನಕಲಕುವ ವಿಭಿನ್ನ ಕಿರು ಚಿತ್ರವಾಗಿದೆ. ಇರದಲ್ಲಿ ಕತೆ ವಿಶಿಷ್ಟವಾಗಿದ್ದು ಚಿತ್ರ ತಂಡ ಸಮಾಜಕ್ಕೆ ಹೊಸ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದೆ. ಕಲಾವಿದರ ಅಭಿನಯ, ಛಾಯಾಗ್ರಹಣ, ಸಂಗೀತ ಮತ್ತು ನಿದರ್ೇಶಕರ ಶ್ರಮ ಎದ್ದು ಕಾಣುತ್ತಿದ್ದು ಈ ಕಿರು ಚಿತ್ರವನ್ನು ಎಲ್ಲರು ನೋಡಲೇಬೇಕಾದದ್ದು ಎಂದು ಚಲನಚಿತ್ರದ ಗೀತೆ ರಚನೆಕಾರ ಕಿನ್ನಾಳ ರಾಜ್ ಹೇಳಿದರು.
ನಗರದ ಮಾಸ್ತಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಾನಕಿ ಎಂಬ ಕಿರು ಚಿತ್ರ ಬಿಡುಗಡೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಕುರಿ ಕಾಯುವ ಬಡ ಕುಟುಂಬದಲ್ಲಿ ಜನಿಸಿದ ಜಾನಕಿ ಎಂಬ ಬಾಲಕಿ ಹೇಗೆ ಅಡೆತಡೆಗಳನ್ನು ಎದುರಿಸಿ ಶಾಲೆಯಲ್ಲಿ ಸಾಧನೆ ಮಾಡಿ ಇತರೇ ಮಕ್ಕಳಿಗೆ ಸ್ಫೂರ್ತಿ ಆಗುತ್ತಾಳೆ ಎನ್ನುವ ಅಪರೂಪದ ಕಥಾ ಹಂದರವನ್ನು ಹೊಂದಿದೆ. ಕಲಾವಿದರು ಕೂಡಾ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಕಿರು ಚಿತ್ರದ ಗುಣಮಟ್ಟವು ಚಲನಚಿತ್ರದಲ್ಲಿ ಇರುವ ಹಾಗೇ ಉತ್ತಮ ಗುಣಮಟ್ಟದಿಂದ ಕೂಡಿದೆ. ಸಂಗೀತವು ಕೂಡಾ ಸುಂದರವಾಗಿ ಮೂಡಿಬರುವುದರ ಜೊತೆಗೆ ಚಿತ್ರದಲ್ಲಿ ಒಂದು ಗೀತೆಯು ಮತ್ತೆ ಮತ್ತೆ ಗುನುಗುವಂತಿದೆ. ವಿಶೇಷವಾಗಿ ಸ್ಥಳಿಯ ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಯನ್ನು ಒದಗಿಸಿಕೊಡುವ ಕೆಲಸ ಸರಕಾರವು ಮಾಡಬೇಕಾಗಿತ್ತು.ಆದರೆ ಸರಕಾರ ಮಾಡಬೇಕಾದ ಕೆಲಸವನ್ನು ಜಾನಕಿ ಚಿತ್ರ ತಂಡವು ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಎಂದು ಹೇಳಿದೆ.
ಜಾನಕಿ ಕಿರು ಚಿತ್ರದ ಕಥೆ ಮತ್ತು ಸಾಹಿತ್ಯ ರಚನೆಕಾರರಾದ ಸುರೇಶ ಕಂಬಳಿ ಮಾತನಾಡುತ್ತ,ಶಿಕ್ಷಕ ವೃತ್ತಿಯು ಎಲ್ಲಾ ವೃತ್ತಿಗಿಂತ ಪವಿತ್ರವಾದ ವೃತ್ತಿಯಾಗಿದೆ.ಸಮಾಜದಲ್ಲಿ ಬದಲಾವಣೆಯನ್ನು ಮಾಡುವವರೇ ಶಿಕ್ಷಕರಾಗಿದ್ದು,ಅದರಲ್ಲೂ ವಿಶೇಷವಾಗಿ ನಾನು ಶಿಕ್ಷಕ ವೃತ್ತಿಗೆ ಸೇರಿದ ಮೇಲೆ ವೃತ್ತಿಯಲ್ಲಿ ಏನಾದರೂ ಹೊಸತನವನ್ನು ಮಾಡಬೇಕು ಎಂಬ ಹಂಬಲದಿಂದ ಈಗಾಗಲೇ ಶಾಲೆಯ ಮಕ್ಕಳ ದಾಖಲಾತಿ ಹೆಚ್ಚಳಕ್ಕಾಗಿ ಗೀತೆಯನ್ನು ರಚನೆ ಮಾಡಿದ್ದು, ಅದನ್ನು ರಾಜ್ಯದ ವಿವಿಧ ಜಿಲ್ಲೆಯ ಶಾಲೆಯಲ್ಲಿ ಬಳಕೆ ಮಾಡುವುದರ ಜೊತೆಯಲ್ಲಿ ಅನೇಕ ಶಾಲೆ ಬಿಟ್ಟ ಮಕ್ಕಳು ಪುನಃ ಶಾಲೆಗೆ ಸೇರಿದ್ದಾರೆ.
ಕಾರ್ಯಕ್ರಮದಲ್ಲಿ ಮೂರನೇ ಕಣ್ಣು ಚಲನಚಿತ್ರದ ನಿದರ್ೇಶಕರಾದ ನಜೀರ.ಕೆ.ಎನ್, ಸಾಹಿತಿ ಬಿ.ಎನ್.ಹೊರಪೇಟೆ, ಬಸವರಾಜ ಮರದೂರ, ಜಾನಕಿ ಕಿರು ಚಿತ್ರದ ಪಾತ್ರಧಾರಿಗಳಾದ ಹಷರ್ಿತಾ ಸೂಳಿಕೇರಿ, ರೇಣುಕಾ, ದುರಗಪ್ಪ, ರೇವಣ್ಣ ಕೋಳೂರ,ನಾಗರಾಜ ಕನ್ಯಾಳ, ಶಿವಕುಮಾರ ಪಾಟೀಲ, ರಮೇಶ ಬನ್ನಿಕೊಪ್ಪ, ಮಂಜುನಾಥ ಗೌಡರ,ಹನುಮಕ್ಕ ಕಂಬಳಿ,ಶರಣಪ್ಪ ರಡ್ಡೆರ,ಪ್ರಾಣೇಶ ಪೂಜಾರ,ಹುಲುಗಪ್ಪ ಕಟ್ಟಿಮನಿ.ಕರಿಯಪ್ಪ ಕಂಬಳಿ ಮುಂತಾದವರು ಹಾಜರಿದ್ದರು. ಶಿಕ್ಷಕರಾದ ಅಣ್ಣಪ್ಪ ಹಳ್ಳಿ ಸ್ವಾಗತಿಸಿ,ಈರಪ್ಪ ಬಿಜ್ಜಲಿ ವಂದಿಸಿದರು.