ಕೊಪ್ಪಳ : ತಾಯ್ನಾಡಿಗಾಗಿ ಹೋರಾಡಿ ಮಡಿದ ರಾಜ ಟಿಪ್ಪು: ನಂಜುಂಡಸ್ವಾಮಿ

ಲೋಕದರ್ಶನ ವರದಿ

ಕೊಪ್ಪಳ 06: ರಾಜರು ಯುಧ್ಧಭೂಮಿಯಲ್ಲಿ ಸತ್ತಿರುವುದು ವಿಪರೀತ ಕಡಿಮೆ, ಆದರೆ, ನಮ್ಮ ಕನ್ನಡ ತಾಯ್ನಾಡನ್ನು ರಕ್ಷಿಸಲು ರಣಭೂಮಿಯಲ್ಲಿ ಹೋರಾಡಿ ಮಡಿದ ಅಪರೂಪದ ರಾಜ ಟೀಪ್ಪು ಸುಲ್ತಾನರಾಗಿದ್ದಾರೆ ಎಂದು ಪೋಲಿಸ್ ಇಲಾಖೆ ಬಳ್ಳಾರಿ ವಲಯದ ಪೋಲಿಸ್ ಮಹಾ ನಿದರ್ೇಶಕ (ಐಜಿಪಿ) ಎಂ. ನಂಜುಂಡಸ್ವಾಮಿ ಹೇಳಿದ್ದಾರೆ.

ನಗರದ ಪಂಜುಂ ಪಲ್ಟನ್ ಓಣಿಯಲ್ಲಿರುವ ಹಜರತ್ ಸಯ್ಯದ್ ಪೀರ್ಪಾಷಾ ಖಾದ್ರಿ ದಗರ್ಾ ಆವರಣದಲ್ಲಿ ನವಜವಾನ ಕಮೀಟಿ ಎರ್ಪಡಿಸಿದ ಹಜರತ್ ಟೀಪ್ಪು ಸುಲ್ತಾನ್ರವರ 220ನೇ ಪುಣ್ಯತಿಥಿ (ಯೌಮೇ-ಶಹಾದತ್) ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ವಿವಿಧ ಸಂಘಟನೆಗಳಿದ ಸನ್ಮಾನ ಸ್ವೀಕರಿಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು "ಮೊದಲು ನಾವೆಲ್ಲ ಭಾರತಿಯರು ನಮ್ಮ ಧರ್ಮ ಭಾರತಿಯ ಧರ್ಮ, ನಮ್ಮ ಧರ್ಮ ಗ್ರಂಥ ಭಾರತದ ಸಂವಿಧಾನ" ಎಂದು ನಾವು ಅಥರ್ೈಸಿಕೊಂಡು ಅದರಂತೆ ಜೀವನ ಸಾಗಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದರು, ಟೀಪ್ಪು ಸುಲ್ತಾನ ತನ್ನ ಆಡಳಿತದಲ್ಲಿ ಎಕರೂಪತೆ ಕಾಪಾಡಲು ಫರಮಾನು ಹೋರಡಿಸಿದ್ದರು, ಕೃಷಿ ಮತ್ತು ಹೈನುಗಾರಿಕೆ ಬೆಳೆಸಲು ಪ್ರೋತ್ಸಾಹ ನೀಡಿದ್ದರು, ಅಮೃತ್ ಮಹಲ್ ತಳಿಯನ್ನು ಅಭಿವೃದ್ಧಿ ಪಡಿಸಿದ್ದರು, ಆಣೆಕಟ್ಟುಗಳ ನಿಮರ್ಾಣಕ್ಕೆ ಮುಂದಾಗಿದ್ದರು, ಕ್ಷೀಪಣೆ ರಾಕೇಟ್ ತಂತ್ರಙ್ಞನ ಪ್ರಯೊಗಿಸಿದ್ದರು, ಆತನ ಆಡಳಿತದಲ್ಲಿನ ಸುಧಾರಣ ಕ್ರಮಗಳೂ ಇಂದಿಗೂ ಮಾದರಿಯಾಗಿವೆ, ದೇವಾಲಯಗಳಿಗೆ ದತ್ತಿ ನೀಡಿ, ಸಹಿಷ್ಣುತೆ ಮೆರೆದಿದ್ದರು ಎಂದು ಹೇಳಿದರು.

ಆತ ಕನ್ನಡದ ಹೆಮ್ಮೆಯ ವೀರಪುತ್ರ ಎಂಬುವುದನ್ನು ಮರೆಯಬಾರದ ಆತನ ಆಡಳಿತದ ಆಯಕಟ್ಟಿನ ಸ್ಥಳಗಳಲ್ಲಿ ದೀವಾನ ಪೂರ್ಣಯ್ಯನವರು ಸೇರಿದಂತೆ ಅನೇಕ ಹಿಂದು ಮಂತ್ರಿಗಳೇ ಇದ್ದರು, ಶೃಂಗೇರಿ, ಮೇಲುಕೊಟೆ, ನಂಜನಗೂಡು ಮುಂತಾದ ದೇವಸ್ಥಾನಗಳಿಗೆ ದೇಣಿಗೆ ನೀಡಿ ಸಹಿಷ್ಣುತೆ ಮರೆದಿದ್ದಾರೆ, ಯುಧ್ಧದಲ್ಲಿ ತೊಡಗಿದ್ದರೂ ಪ್ರಜೆಗಳ ಹಿತ ಕಾಯುವ ಆಡಳಿತ ಪದ್ದತಿ ಜಾರಿಗೊಳಿಸಿದ್ದರು. ತನ್ನ ಧರ್ಮದ ಬಗ್ಗೆ ಶ್ರಧ್ಧೆ ಇದ್ದು, ಅನ್ಯಧರ್ಮಗಳನ್ನು ಸಹನೆಯಿಂದ ಕಂಡವನು ಟೀಪ್ಪು ಸುಲ್ತಾನ, ಆತ ನಮ್ಮ ಕನ್ನಡ ನಾಡಿನ ಹೆಮ್ಮೆಯ ಪುತ್ರ, ಆತನ ಕಡೂ ವಿರೋಧಿಯಾಗಿರುವ ಬ್ರೀಟಿಷ್ ಇತಿಹಾಸಕಾರರೇ ಆತನನ್ನು ಮುಕ್ತ ಕಂಠದಿಂದ ಶ್ಲ್ಯಾಘಿಸಿದ್ದಾರೆ ಎಂದ ಅವರು ಟೀಪ್ಪು ಸುಲ್ತಾನ ಅನುಯಾಯಿಗಳು ಜಯಂತಿ ಆಚರಣೆ ಮಾಡುವವರು, ಟೀಪ್ಪು ಹುತಾತ್ಮ ದಿನಕೂಡ ಆಚರಣೆ ಮಾಡುತ್ತಿರುವ ಇಲ್ಲಿನ ನವ್ಜವಾನ ಕಮೀಟಿಯ ಕಾರ್ಯ ಶ್ಷ್ಯಾಘನಿಯವಾಗಿದೆ ಎಂದು ಪೋಲಿಸ್ ಇಲಾಖೆ ಬಳ್ಳಾರಿ ವಲಯದ ಪೋಲಿಸ್ ಮಹಾ ನಿದರ್ೇಶಕ (ಐಜಿಪಿ) ಎಂ. ನಂಜುಂಡಸ್ವಾಮಿ ಹೇಳಿದ್ದಾರೆ.

ಸಮಾರಂಭದಲ್ಲಿ ಮೌಲಾನ ನೂರುಲ್ಲ ತಹ್ಸೀನ್ ಖಾದ್ರಿ ನಕ್ಷಬಂದಿ ಸಾನಿಧ್ಯ ವಹಿಸಿದ್ದರು, ಹಾಪೀಜ್ ಮೊಹಮ್ಮದ್ ನಾಸೀರ್ ಖಾದ್ರಿ ರವರು ಸಾಮೂಹಿಕ ವಿಶೇಷ ಪ್ರಾರ್ಥನೆ ನಡೆಸಿದರು, ಪಂಜುಂ ಪಲ್ಟನ್ ಮಸೀದಿ ಕಮೀಟಿಯ ಅಧಯಕ್ಷ ಇಸ್ಮಾಯಿಲ್ ಸಾಬ್, ರಾಬಿತ್-ಎ-ಮಿಲ್ಲತ್ ಸಂಸ್ಥೆಯ ಅಧ್ಯಕ್ಷ ಎಂ. ಲಾಯಖ್ ಅಲಿ, ಸಯ್ಯದ್ ಖಾದರ್ ಸಾಬ್ ಖಾದ್ರಿ, ಅನ್ವರ ಹುಸೇನ್, ಸಲಿಂ ಮಂಡಲಗೇರಿ, ಸಲಿಂ ಖಾದ್ರಿ, ಸಲಿಂ ಬೆಲ್ದು, ಎಂ ತಾಹಿರ್ ಅಲಿ, ಭರ್ಮಪ್ಪ ಬೆಲ್ಲದ್, ಹಬೀಬ್ ಖಾನ್, ಅಬ್ದುಲ್ ಅಜೀಜ್ ಮಾನ್ವಿಕರ, ಎಂ. ಸಾಧಿಕ ಅಲಿ, ಸೇರಿದಂತೆ ಹಿಂದು ಮುಸ್ಲಿಂ ಸಮಾಜ ಬಾಂಧವರು ಅಲ್ಲದೇ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕು ಮುನ್ನ ಟೀಪ್ಪು ಸುಲ್ತಾನ ಸರ್ಕಲ್ಗೆ ತೆರಳಿ ಟೀಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಡಾ|| ಬಿ.ಆರ್.ಅಂಬೇಡ್ಕರ್ ಸರ್ಕಲ್ಗೆ ತೆರಳಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.