ಕೊಪ್ಪಳ: ಸಹಕಾರಿ ಸಂಘ ಬಲಪಡಿಸಲು ಮೊದಲ ಆದ್ಯತೆ: ಶೇಖರಗೌಡ

ಲೋಕದರ್ಶನ ವರದಿ

ಕೊಪ್ಪಳ 09: ಆಡು ಮುಟ್ಟದ ಸೊಪ್ಪಿಲ್ಲ, ಸಹಕಾರಿ ಕ್ಷೇತ್ರ ತಲುಪದ ಕ್ಷೇತ್ರವಿಲ್ಲ. ಆದರೂ  ಇನ್ನಷ್ಟು ಸಹಕಾರಿ ಸಂಘವನ್ನು ಬಲವರ್ಧನೆಗೊಳಿಸಲು ಮೊದಲೆ ಆದ್ಯತೆ ನೀಡುವೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೇಖರಗೌಡ ಮಾಲಿಪಾಟೀಲ್ ಹೇಳಿದರು.

ನಗರದ ವಾಲ್ಮೀಕಿ ಭವನ ಪಕ್ಕದಲ್ಲಿರುವ ಕಸಾಪ ಜಿಲಾಧ್ಯಕ್ಷ ರಾಜಶೇಖರ ಅಂಗಡಿ ಅವರ ಅನುಪಮ ಟ್ರೆಡಿಂಗ್ 

ಕಂಪನಿಯ ಆವರಣದಲ್ಲಿ  ಗುರುವಾರ  ಜಿಲ್ಲಾ ಸಹಕಾರ ಯೂನಿಯನ್ ಚುನಾವಣೆಯಲ್ಲಿ  ಅಧ್ಯಕ್ಷ, ಉಪಾಧ್ಯಕ್ಷರು, ನಿರ್ದೇಶಕರಾಗಿ  ಆಯ್ಕೆಯಾದ ಪದಾಧಿಕಾರಿಗಳಿಗ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ  

ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೊಪ್ಪಳ ಜಿಲ್ಲೆ ಸಾಹಿತ್ಯ, ಸಹಕಾರ, ಕೃಷಿಯಲ್ಲಿ  ಅಪಾರ ಹೆಸರು ಮಾಡಿದೆ.  ಸಹಕಾರ ಕ್ಷೇತ್ರದಲ್ಲಿ ಈ ಹಿಂದೆ ಸ್ವಲ್ಪ 

ಹಿಂದೆಯಿತ್ತು. ಆದರೆ, ಪ್ರಸ್ತುತ ಬಹಳ ಮುಂದುವರೆದಿದ್ದೇವೆ. ಆದರೂ ಜಿಲ್ಲೆಯಲ್ಲಿ ಮತ್ತಷ್ಟು ಈ ಕ್ಷೇತ್ರವನ್ನು ಬಲಪಡಿಸುವುದಕ್ಕೆ  ಮೊದಲ ಆದ್ಯತೆ ನೀಡುವೆ. ಸಹಕಾರಿ ಸಂಘದಲ್ಲಿ  ಎಲ್ಲ ಪಕ್ಷದವರಿದ್ದೇವೆ. ನಮಗೆ ಇಲ್ಲಿ  ರಾಜಕೀಯ ಮುಖ್ಯವಲ್ಲ. ಸಹಕಾರಿ  ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದು ಮಾತ್ರ ಮುಖ್ಯವಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ. ಎಲ್ಲಾ ಸಹಕಾರಿಗಳು ಒಟ್ಟುಗುಡುವ ಮೂಲಕ ಸಹಕಾರಿ ಸಂಘವನ್ನು ಎತ್ತರಕ್ಕೆ ಕೊಂಡ್ಯುಯೋಣ ಎಂದರು.

ಉಪಾಧ್ಯಕ್ಷರಾಗಿ ಆಯ್ಕೆಯಾದ ತೋಟಪ್ಪ ಕಾಮನೂರು ಮಾತನಾಡಿ, ನೂತನ ಸಹಕಾರಿ ಸಂಘಕ್ಕೆ ಸೇವೆ ಸಲ್ಲಿಸಲು 

ಉಪಾಧ್ಯಕ್ಷನಾಗಿ ಅಣಿ ಮಾಡಿಕೊಟ್ಟಿದ್ದಕ್ಕೆ  ಮೊದಲು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಈ ಸ್ಥಾನಕ್ಕೆ  ಯಾವುದೇ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಿಕೊಂಡು ಹೋಗುವೆ, ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಪದಾಧಿಕಾರಿಗಳು ಅಧ್ಯಕ್ಷರಾಗಿ ಶೇಖರಗೌಡ ಮಾಲಿಪಾಟೀಲ್, ಉಪಾಧ್ಯಕ್ಷರಾಗಿ ತೋಟಪ್ಪ ಕಾಮನೂರು, ನಿರ್ದೇಶಕರಾಗಿ ಅಮರೇಶ ಉಪಲಾಪೂರ, ಬಸನಗೌಡ ದಿಡ್ಡಿಮನಿ, ಶಕುಂತಲಾ ಹುಡೇಜಾಲಿ, ಸಾವಿತ್ರಮ್ಮ ಮಲ್ಲಪ್ಪ,  ಮಾರುತಿ ಅಂಗಡಿ, ರಾಮಣ್ಣ ವಡ್ಡರ್, ಸುರೇಶ ಗೋಟುರು, ಸಿ.ಎಚ್. ಸತ್ಯನಾರಾಯಣ, ಭೀಮರಾವ ಕುಲಕಣರ್ಿ ಅವರು ಜಿಲ್ಲಾ ಸಹಕಾರಿ ಯೂನಿಯನ್ಗೆ ಆಯ್ಕೆಯಾಗಿದ್ದಾರೆ.