ಕೊಪ್ಪಳ: ಸರ್ವಾಕ್ಷರ ಜವಾಬ್ದಾರಿ ನಿಭಾಯಿಸಲು ಹಿರಿಯರ ಸಹಕಾರ ಅಗತ್ಯ: ಸಮಾಜ ಸೇವಕ ನಾಯಕ್

ಲೋಕದರ್ಶನ ವರದಿ

ಕೊಪ್ಪಳ 27: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಹಾಗೂ ಹೈ.ಕ. ನಾಗರಿಕರ ವೇದಿಕೆ ವತಿಯಿಂದ ಜಿಲ್ಲಾ ಉತ್ಸವದ ಸಂದರ್ಭದಲ್ಲಿ 3ನೇ ಬಾರಿಗೆ ಅಗಷ್ಟ 24ರ ಸಂಜೆಗೆ 05:30ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಜರುಗಲಿರುವ ಉದರ್ು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದಲ್ಲಿಸರ್ವಾಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಲು ಹಿರಯರ ಮತ್ತು ಸಾಹಿತಿಗಳ ಸಹಕಾರ ಮತ್ತು ಮಾರ್ಗದರ್ಶನ ಅಗತ್ಯವಾಗಿದೆ ಎಂದು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಇಲ್ಲಿನ ಸಮಾಜ ಸೇವಕ ಹುಜೂರ್ ಅಹ್ಮದ್ ನಾಯಕ್ರವರು ಹೇಳಿದರು.

ಈ ಕುರಿತು ಹೇಳಿಕೆ ನೀಡಿದ ಅವರು ವೇದಿಕೆ ಅವರು ನನಗೆ ದೊಡ್ಡದಾದ ಜವಾಬ್ದಾರಿ ನೀಡಿ ಸವರ್ಾಧ್ಯಕ್ಷನಾಗಿ ಆಯ್ಕೆಮಾಡಿದ್ದಾರೆ, ಕೊಪ್ಪಳದಲ್ಲಿ ಜರುಗುವ ಉದರ್ು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದಲ್ಲಿ ಕೈಲಾದಷ್ಟು ಒಳ್ಳೆಯ ಕಾರ್ಯ ಮಾಡುವೆ ಹಾಗೂ ಸಮಾಜದಲ್ಲಿ ಸಾರ್ವಜನಿಕರಲ್ಲಿ ಒಳ್ಳೆಯ ಸೌಹಾರ್ದತೆ ಭಾವನೆ ಮೂಡಿಸುವಲ್ಲಿ ಪರಸ್ಪರ ಉತ್ತಮ ಭಾಂಧವ್ಯ ನಿರಂತರವಾಗಿ ನೆಡೆಯಲು ಮತತು ಈ ಸಮ್ಮೇಳನ ಮಾದರಿ ಸಮ್ಮೇಳನಯಾಗಿ ಪರಿವರ್ತನೆಗೊಳಿಸಲು ವೇದಿಕೆಯ ಎಲ್ಲ ಕಾರ್ಯಗಳಿಗೆ ಸಹಕಾರ ನೀಡುವದಾಗಿ ಅವರು ಹೇಳಿದರು.

ಮುಂದುವರೆದು ಮಾತನಾಡಿದ ಅವರು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಹಾಗೂ ಹೈ.ಕ. ವೇದಿಕೆ ವತಿಯಿಂದ ಹೈ.ಕ. ಪ್ರದೇಶದ ಈ ಭಾಗದಲ್ಲಿ ಉರ್ದು  ಕನ್ನಡಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಕಳೆದ 2 ವರ್ಷಗಳಿಂದ ಯಶಸ್ವಿಯಾಗಿ ಉರ್ದು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ನೆಡೆಸಲಾಗಿದ್ದು, ಈ ಸಲ 3ನೇ ಬಾರಿಗೆ ಸದರಿ ಸಮ್ಮೇಳನದ ಸರ್ವಧ್ಯಕ್ಷರಾಗಿ ನನ್ನನ್ನು ಆಯ್ಕೆಮಾಡಿರುವದಕ್ಕೆ ಹುಜೂರ್ ಅಹ್ಮದ್ ನಾಯಕ್ ರವರು ವೇದಿಕೆ ಪದಾಧಿಕಾರಿಗಳಿಗೆ ಅಭಿನಂದಿಸಿದರು.