ಕೊಪ್ಪಳ: ಸ್ವಚ್ಛತಾ ಜಾಥಾ ರಥಕ್ಕೆ ಬಾಲಚಂದ್ರನ್ ಅವರಿಂದ ಚಾಲನೆ

ಕೊಪ್ಪಳ 13: ಸ್ಚಚ್ಛ ಮೇವ ಜಯತೆ ಕಾರ್ಯಕ್ರಮ ಮತ್ತು ಜಲಾಮೃತ ಜನಾಂದೋಲನ, ವಿಶ್ವ ಪರಿಸರ ದಿನಾಚರಣೆ ಹಾಗೂ ಸ್ವಚ್ಛತಾ ಜಾಥಾ ರಥಕ್ಕೆ ತಾಲೂಕ ಪಂಚಾಯತಿಯ ಅಧ್ಯಕ್ಷರಾದ ಮಾನ್ಯ ಶ್ರೀ ಬಾಲಚಂದ್ರನ್ ರವರು, ಚಾಲನೆ ನೀಡಿದರು.

ಕೊಪ್ಪಳ ತಾಲೂಕ ಪಂಚಾಯತ್ ವತಿಯಿಂದ ಸ್ಚಚ್ಛ ಮೇವ ಜಯತೆ ಕಾರ್ಯಕ್ರಮ ಮತ್ತು ಜಲಾಮೃತ ಜನಾಂದೋಲನ, ವಿಶ್ವ ಪರಿಸರ ದಿನಾಚರಣೆ ಹಾಗೂ ಸ್ವಚ್ಛತಾ ಜಾಥಾ ಕಾರ್ಯಕ್ರಮವನ್ನು ತಾ.ಪಂ. ಆವರಣದಲ್ಲಿ ಮಂಗಳವಾರದಂದು (ಜೂ.11 ರಂದು) ಆಯೋಜಿಸಲಾಗಿತ್ತು.  

ಕಾರ್ಯಕ್ರಮದಲ್ಲಿ ಡಾ. ಗಿರೀಶ ಕಾರ್ನಡರವರು ನಿದರಾದ ನಿಮಿತ್ಯ ಎಲ್ಲರೂ ಮೌನಾಚರಣೆ ಮಾಡಲಾಯಿತು.  ತಾಲೂಕ ಪಂಚಾಯತ ಸಭಾಂಗಣದಲ್ಲಿ ಸ್ಚಚ್ಛ ಮೇವ ಜಯತೆ ಕಾರ್ಯಕ್ರಮ ಮತ್ತು ಜಲಾಮೃತ ಜನಾಂದೋಲನ ಹಾಗೂ ವಿಶ್ವ ಪರಿಸರ ದಿನಾಚರಣೆ ಹಾಗೂ ಸ್ವಚ್ಛತಾ ಜಾಥಾ ರಥ ಚಾಲನೆ ನೀಡಿ ಆಚರಿಸಲಾಯಿತು.  ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ವೈಯಕ್ತಕ ಸ್ವಚ್ಛತೆ , ಸಮುದಾಯದ ಸ್ವಚ್ಛತೆ ಹಾಗೂ ಪರಿಸರದ ಕಾಳಜಿಯನ್ನು ಹಾಗೂ ವೈಯಕ್ತಿಕ ಶೌಚಾಲಯಗಳ ಬಳಕೆ, ಘನ ತ್ಯಾಜ್ಯ ವಿಲೇವಾರಿ ಕುರಿತು ಹಾಗೂ ಎರಡು ಗುಂಡಿ ಶೌಚಾಲಯಗಳ ನಿರ್ಮಾಣ ಮತ್ತು ಪ್ರಾಮುಖ್ಯತೆ ಹಾಗೂ ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಸ್ವಚ್ಛತೆ, ಸಮುದಾಯದ ಸ್ವಚ್ಛತೆ ಹಾಗೂ ಪರಿಸರದ ಕಾಳಜಿ ಮತ್ತು ನೀರಿನ ಮಹತ್ವ & ಜಲವನ್ನು ಸಂರಕ್ಷಿಸುವ ಅಂಶಗಳನ್ನು ಇಟ್ಟುಕೊಂಡು, ಜರುಗಿಸಿದ ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ಮತ್ತು ಜನಾಂದೋಲನ ಹಾಗೂ ವಿಶ್ವ ಪರಿಸರ ದಿನಾಚರಣೆ ಹಾಗೂ ಜಲಾಮೃತ ಜನಾಂದೋಲನ ಹಾಗೂ ಸ್ವಚ್ಛ ಮೇವ ಜಯತೆ ಮಾಹಿತಿ ಜಾಥಾ ರಥಕ್ಕೆ ಚಾಲನೆ ನೀಡಿ ಸಾಂಕೇತಿಕವಾಗಿ ಆಚರಿಸಲಾಯಿತು.

ಸ್ವಚ್ಛ ಮೇವ ಜಯತೆಯ ಪ್ರತಿಜ್ನಾವಿಧಿಯನ್ನು ತಾ.ಪಂ. ಸಹಾಯಕ ನಿರ್ದೇಶಕ ಶರಣಯ್ಯ ಶಸಿಮಠರವರು ಬೋಧಿಸಿದರು.  ವಿಶ್ವ ಪರಿಸರ ದಿನಾಚರಣೆ ಹಾಗೂ ಜಲಾಮೃತ ಜನಾಂದೋಲನ ಆಚರಣೆ ನಿಮಿತ್ಯ ತಾಲೂಕ ಪಂಚಾಯತಿಯ ಆವರಣದಲ್ಲಿ ವಿವಿದ ತಳಿಗಳ ಸಸಿಗಳನ್ನು ನೆಡುವ ಮೂಲಕ ಸ್ವಚ್ಛ ಮೇವ ಜಯತೆ ಕಾರ್ಯಕ್ರಮವನ್ನು ಹಾಗೂ ವಿಶ್ವ ಪರಿಸರ ದಿನಾಚರಣೆ ಅನುಷ್ಟಾನ ಮಾಡಲಾಯಿತು.  

       ತಾಲೂಕ ಪಂಚಾಯತಿಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಪ್ಪ ಮುದಿಯಪ್ಪ ಹೊಸಳ್ಳಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ  ಹಾಗೂ ತಾ.ಪಂ. ಸರ್ವ ಸದಸ್ಯರು, ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯತಿಯ ಸಿಬ್ಬಂದಿ ವರ್ಗದವರು, ಸ್ವಚ್ಛ ಭಾರತ ಮಿಷನ್ (ಗ್ರಾ) ತಾಲೂಕ ಯೂನಿಸೆಪ್ ಸಂಯೋಜಕರು ಹಾಗೂ ಮತ್ತಿತರರು ಹಾಜರಿದ್ದರು.