ಕೊಪ್ಪಳ: ಬಿಜೆಪಿ ಅಭ್ಯರ್ಥಿ ಸಂಗಣ್ಣ ದಂಪತಿಯಿಂದ ನಾಗದೇವತೆಗೆ ಹರಕೆ ಸಲ್ಲಿಕೆ

ಲೋಕದರ್ಶನ ವರದಿ

ಕೊಪ್ಪಳ 30: ಹಾಲಿ ಸಂಸದ ಸಂಗಣ್ಣ ಕರಡಿಗೆ ಶುಕ್ರವಾರದಂದು ಬಿಜೆಪಿ ಹೈಕಮಾಂಡ್ ತನ್ನ ಕೊನೆ ಪಟ್ಟಯಲ್ಲಿ ಟಿಕೇಟ್ ಘೋಷಣೆ ಮಾಡಿ ಬಿ ಫಾರಂ ನೀಡಿತು.

ಅಸಲಿಗೆ ಸಂಗಣ್ಣ ಕರಡಿಗೆ ಟಿಕೇಟ್ ಸಿಗಲು ನಾಗದೇವತೆಗೆ ಹರಕೆ ಹೋತ್ತ ಫಲ ಎಂದರೆ ನೀವು ನಂಬುತ್ತಿರಾ? ಹೌದು ನಾಗದೇವತೆಗೂ ಲೋಕಸಭಾ ಟಿಕೇಟ್ಗೂ  ಏನು ಸಂಬಂಧ ಅನ್ನುತ್ತಿರಾ? ಇಲ್ಲೆ ಇರುವುದು ರಹಸ್ಯ ಟಿಕೇಟ್ ಘೋಷಣೆ ವಿಳಂಬವಾಗಿ ಆನೇಕ ಊಹಪೋಹಗಳು ಕ್ಷೇತ್ರದಲ್ಲಿ ಹರಿದಾಡಿದವು ಆಗ ಸಂಗಣ್ಣ ಕರಡಿ ಪತ್ನಿ ನಿಂಗಮ್ಮ ಕರಡಿ ಪತಿಯ ಟಿಕೇಟ್ಗಾಗಿ ನಾಗದೇವತೆಯ ಮೋರೆ ಹೋಗಿದ್ರಂತೆ ದೋಷ ನಿವಾರಣೆಯಾಗಿ ಪತಿಗೆ ಬೇಗ ಟಿಕೇಟ್ ಸಿಗಲಿ ಎಂದು ಹರಕೆ ಹೊತ್ತರಂತೆ. ನಾಗದೇವತೆಗೆ ಅವರ ಪ್ರಾಥನೆಯಂತೆಯೇ ಸಂಗಣ್ಣ ಕರಡಿಗೆ ಟಿಕೇಟ್ ಲಭಿಸಿದೆ. 

ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಟಿಕೇಟ್ ಘೋಷಣೆಯಾದರೂ ಕೊಪ್ಪಳ ಕ್ಷೇತ್ರಕ್ಕೆ ಘೋಷಣೆ ಮಾಡದೆ ತಡೆಹಿಡಿದ್ದರು. ಈ ಕುರಿತು ಸಂಗಣ್ಣ ಪತ್ನಿಗೂ ಆತಂಕವಾಗಿತ್ತು, ಹಾಗಾಗಿ ನಾಗದೇವತೆಯ ಮೋರೆ ಹೋಗಿದ್ದರು, ಇದೀಗ ಅಚ್ಚರಿಯ ಸತ್ಯ ಹೋರಬಿದ್ದಿದೆ. ಸಂಗಣ್ಣ ಅವರಿಗೆ ನಾಗದೋಷ ಇದೆ ನಿವಾರಣೆ ಮಾಡಿ ಖಂಡಿತ ಟಿಕೇಟ್ ಸಿಗುತ್ತದೆ ಎಂದು ಸ್ವಾಮಿಜಿಯೊಬ್ಬರು ಸಂಗಣ್ಣ ಅವರ ಪತ್ನಿಗೆ ಹೇಳಿದ್ದರಂತೆ, ಸ್ವಾಮಿಜೀಯ ಮಾತು ಅನುಸರಿಸಿದ ಸಂಗಣ್ಣ ಪತ್ನಿ ನಿಂಗಮ್ಮ ಕಳೆದ ಎರಡು ದಿನದಿಂದ ಪಕ್ಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ಇರುವ ನಾಗದೇವತೆಗೆ ಪೂಜೆ ಸಲ್ಲಿಸಿದ್ದಾರೆ. ಈ ನಾಗದೇವತೆಯ ಪೂಜಾ ಫಲದಿಂದ ಬಿಜೆಪಿ ಟಿಕೇಟ್ ಅಧಿಕೃತವಾಗಿ ಘೋಷಣೆ ಗೊಂಡಿತು. ಟಿಕೇಟ್ ಘೋಷಣೆಯಾಗುತಿದ್ದಂತೆ ಸಂಗಣ್ಣ ಕರಡಿ ಅವರು ಕುಟುಂಬ ಸಮೇತ ಶನಿವಾರ ಬೆಳಿಗ್ಗೆ ತೆರಳಿ ನಾಗದೇವತೆಗೆ ಪೂಜೆ ಸಲ್ಲಿಸಿ ತಮ್ಮ ಹರಿಕೆ ತೀರಿಸಿದ್ದಾರೆ.