ಸಾಧಿಕ್ ಅಲಿ
ಕೊಪ್ಪಳ 31: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಇದ್ದ ಎಲ್ಲಾ ಊಹಾಪೋಗಳಿಗೆ ತೆರೆ ಎಳೆದ ಬಿಜೆಪಿ ಕೊನೆಗೂ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ನೀಡಿ ಬಿ ಫಾರಂ ಕೊಟ್ಟಿದೆ. ಮೊದಲೆ ನಿರೀಕ್ಷೆಯಂತೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಹೋದರ ಕಾಂಗ್ರೆಸ್ನ ಜಿ.ಪಂ.ಮಾಜಿ ಅಧ್ಯಕ್ಷ ಕೆ.ರಾಜಶೇಖರ್ ಹಿಟ್ನಾಳಗೆ ಘೋಷಣೆ ಮಾಡಿದ್ದು ಈಗ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ.
ಬಿಜೆಪಿ ಟಿಕೆಟ್ಗೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿಂದ ಅನೇಕ ಊಹಪೋಹ ಮಾತುಗಳು ಬಿಜೆಪಿಯ ಚಚರ್ೆಯು ಮುಂಚೂಣಿಯಲ್ಲಿತ್ತು, ಕುಷ್ಟಗಿಯ ಮಾಜಿ ಶಾಸಕ ಕೆ.ಶರಣಪ್ಪ ಅವರ ಪುತ್ರ ಡಾ.ಕೆ. ಬಸವರಾಜಗೆ ಸಿಗುವುದು ಗ್ಯಾರೆಂಟಿ ಫೆನಲ್ ಆಗಿದೆ, ಇಲ್ಲ ಸಿ.ವಿ. ಚಂದ್ರಶೇಖರ್ಗೆ ಟಿಕೆಟ್ ಸಿಗಲಿದೆ, ಕ್ಷೇತ್ರಕ್ಕೆ ಪ್ರಧಾನಿ ಮೋದಿ, ಶ್ರೀರಾಮುಲು, ರಾಯರಡ್ಡಿ ಬರುತ್ತಾರೆ ಇತ್ಯಾದಿ ಸುದ್ದಿಗಳು ದಿನನಿತ್ಯ ಹರಿದಾಡುತ್ತಿದ್ದವು, ಕೊನೆಗೂ ಹಾಲಿ ಸಂಸದ ಸಂಗಣ್ಣ ಕರಡಿಗೆ ಬಿಜೆಪಿ ವರಿಷ್ಠರು ಮತ್ತೊಮ್ಮೆ ಸ್ಪಧರ್ೆಗೆ ಅವಕಾಶ ನೀಡಿ ಊಹಪೋಹಗಳಿಗೆ ತೆರೆ ಎಳೆದಿದ್ದಾರೆ.
ಕರಡಿ - ಟಗರು ಮಧ್ಯೆ ಪೈಪೋಟಿ: ರಾಜಕೀಯ ಸಂಪ್ರದಾಯ ಬದ್ಧ ವೈರಿಗಳಾದ ಕರಡಿ ಸಂಗಣ್ಣ ಹಾಗೂ ಬಸವರಾಜ ಹಿಟ್ನಾಳ ಕರಡಿ-ಟಗರು ಕುಟುಂಬಗಳು ಜಿಲ್ಲಾ ಕೇಂದ್ರವಾದ ಕೊಪ್ಪಳ ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರಗಳಲ್ಲಿ ಸದಾ ಸೆಣಸಾಟ ಸಾಮಾನ್ಯ, ಗೆದ್ದರೆ, ಸೋತರೆ ಇವರೆಡೆ ಕುಟುಂಬಗಳು ಇಲ್ಲಿ ಮೂರನೇಯ ವ್ಯಕ್ತಿಗಳು ಅವಕಾಶ ಪಡೆಯಲ್ಲ ಹೆಣಗಾಡಿ ಸೋತು ಸುಣ್ಣಾಗಿರುವರು ಇವರ ಎರಡೇ ಕುಟುಂಬಗಳು. ಎನ್ನುವುದು ಸವರ್ೇ ಸಾಮಾನ್ಯ ಅದು ಏನಿದ್ದರೂ ಕರಡಿ ಮತ್ತು ಹಿಟ್ನಾಳ ಕುಟುಂಬ ರಾಜಕೀಯ ಅಸ್ತಿತ್ವ ಪಡೆದುಕೊಳ್ಳಲು ಸಾಧ್ಯ ಎಂಬ ಮಾತು ಸತ್ಯವಾಗಿದೆ ಎಂದು ಹೇಳಲಾಗಿದೆ.
ಇದನ್ನು ಈ ಸಾರಿ ತಪ್ಪಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಎಲ್ಲಾ ತಂತ್ರಗಾರಿಕೆಗಳು, ರಣತಂತ್ರಗಳು, ಮಾಟ ಮಂತ್ರ, ತಂತ್ರಗಳು ನಡೆದರೂ ಸಹ ಬಿಜೆಪಿಯಲ್ಲಿ ಕರಡಿ ಮತ್ತು ಕಾಂಗ್ರೆಸ್ನಲ್ಲಿ ಹಿಟ್ನಾಳ ಕುಟುಂಬಗಳು ಮತ್ತೇ ತಮ್ಮ ಪ್ರಾಬಲ್ಯವನ್ನು ಸಾಬೀತುಪಡಿಸಿ ರಣಕಣಕ್ಕೆ ಸಿದ್ಧರಾಗಿದ್ದು, ಕಳೆದ 2014 ರ ಲೋಕಸಭೆ ಮತ್ತು 2018 ರ ವಿಧಾನಸಭೆಯಲ್ಲಿನ ಪರಸ್ಪರ ಸೋಲು-ಗೆಲುವು ಈ ಚುನಾವಣೆಯಲ್ಲಿ ಅದರ ಸೇಡು ತೀರಿಸಿಕೊಳ್ಳಲು ಅತ್ಯಂತ ಪ್ರತಿಷ್ಠೆಯನ್ನಾಗಿ ಸ್ವೀಕಾರ ಮಾಡಿದ್ದು ಚುನಾವಣಾ ಯುದ್ಧಕ್ಕೆ ಕಣ ಸಿದ್ಧವಾಗಿದೆ, ಚುನಾವಣಾ ಯುದ್ಧ ವೀರರರಿಗೆ ಹಬ್ಬವೇ ಹೊರತು ಭಯವಲ್ಲ ಎಂಬ ಲೆಕ್ಕಾಚಾರ ಇಬ್ಬರದ್ದಾಗಿದೆ.
ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿ ಯಡಿಯೂರಪ್ಪಗೆ ಅಜರ್ಿ ಸಲ್ಲಿಸಿದ್ದು ಸಿ.ವಿ. ಚಂದ್ರಶೇಖರ್, ಬಿಜೆಪಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಹಾಗೂ ಡಾ.ಕೆ. ಬಸವರಾಜ ಅವರು ಮಾತ್ರ. ಹಾಲಿ ಸಂಸದರಿಗೆ ಟಿಕೆಟ್ ಎಂದು ಹೇಳಿದ ಕಾರಣ ಸಂಗಣ್ಣ ಸಲ್ಲಿಸಿರಲಿಲ್ಲ. ಆದರೂ ಈ ಸಾರಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಲು ಬಿಜೆಪಿಯೊಳಗಿನ ಒಂದು ಸಣ್ಣ ಗುಂಪು ಆರ್.ಎಸ್.ಎಸ್. ನಂಟಿನೊಂದಿಗೆ ಮಾಡಬಾರದ ತಿಪ್ಪರಲಾಗ ಹಾಕಿದರೂ ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ವಲಯದಲ್ಲಿ ಕೈ ಟಿಕೆಟ್ಗೆ ಬರೋಬ್ಬರಿ ಐದಾರು ಜನ ಆಕಾಂಕ್ಷಿಗಳು ರೇಸ್ನಲ್ಲಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ಕೊನೆಗೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತನ್ನ ಸಹೋದರನಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತರೆ ಆಕಾಂಕ್ಷಿಗಳಲ್ಲಿ ಮುನಿಸು ಮುಂದುವರೆದಿದ್ದು, ಒಂದೇ ಕುಟುಂಬಕ್ಕೆ ಮಣೆ ಹಾಕಿದ್ದು ಸರಿಯಲ್ಲ ಎಂದು ಹೇಳುವ ಮೂಲಕ ಒಳಗೊಳಗೆ ಕಾಂಗ್ರೆಸ್ನಲ್ಲಿ ಬೇಗುದಿ ಶುರುವಾಗಿದೆ.
ಹಾಲಿ ಸಂಸದರಿಗೆ ಕೊಡಿ ಇಲ್ಲ ನಮಗೆ ಕೊಡಿ ಎಂಬ ಒಂದೇ ಒತ್ತಡದ ಮಾತಿನಲ್ಲಿದ್ದ ಬಿಜೆಪಿಗರಿಗೆ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಅಸಮಾಧಾನ ಕಂಡು ಬಂದಿಲ್ಲ, ಶುಕ್ರವಾರದಂದು ಸಂಗಣ್ಣ ಕರಡಿ ಟಿಕೆಟ್ ಘೋಷಣೆಯಾದ ಕೂಡಲೇ ಕ್ಷೇತ್ರದ ತುಂಬಾ ಬಿಜೆಪಿಯವರು ಸಂಭ್ರಮಿಸಿದರು, ಬಿ ಫಾರಂನೊಂದಿಗೆ ಬೆಂಗಳೂರಿನಿಂದ ವಾಪಸ್ಸು ಬಂದಿರುವ ಸಂಗಣ್ಣ ಕರಡಿ ಕ್ಷೇತ್ರ ಸಂಚಾರಕ್ಕೆ ತೆರಳಿದ್ದಾರೆ, ಬಹುಶಃ ಇವರು ಏ-03 ರ ಬುಧುವಾರ ನಾಮಪತ್ರ ಸಲ್ಲಿಕೆಗೆ ಸಿದ್ಧತೆಯಲ್ಲಿದ್ದಾರೆ.
ಕ್ಷೇತ್ರ ಸುತ್ತಾಡಿದ ಕಾಂಗ್ರೆಸ್ ಅಭ್ಯಥರ್ಿ: ವಾರದ ಹಿಂದೆಯೇ ಕಾಂಗ್ರೆಸ್ ಅಭ್ಯಥರ್ಿ ಟಿಕೇಟ್ ಘೋಷಣೆಯ ಹಿನ್ನಲೆಯಲ್ಲಿ ಆ ಪಕ್ಷದ ಅಭ್ಯಥರ್ಿ ಕೆ.ರಾಜಶೇಖರ್ ಹಿಟ್ನಾಳ ಈಗಾಗಲೇ ಕೊಪ್ಪಳ ಕ್ಷೇತ್ರವನ್ನು ಸುತ್ತಾಡಿ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗಿ ಬಂದಿದ್ದಾರೆ, ಅಲ್ಲದೇ ಪಕ್ಷದ ಪ್ರಮುಖ ಮುಖಂಡರ ಸಭೆಗಳು ನಡೆದಿದ್ದು, ಮತ್ತೆ ವಿಧಾನಸಭಾ ಕ್ಷೇತ್ರವಾರು ಸಭೆಗಳು ನಡೆದಿವೆ ಕಾಂಗ್ರೆಸ್ ನಿಂದ ಏ-04 ರಂದು ಕಾಂಗ್ರೆಸ್ ಅಭ್ಯಥರ್ಿ ನಾಮಪತ್ರ ಸಲ್ಲಿಸುವುದಾಗಿ ತಿಳಿದುಬಂದಿದೆ,
ಬಿಜೆಪಿ ಟಿಕೆಟ್ ಘೋಷಣೆ ಮೂಲಕ ಕ್ಷೇತ್ರದಲ್ಲಿ ಇದೀಗ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದ್ದು, ಕಾಂಗ್ರೆಸ್ ಅಭ್ಯಥರ್ಿ ಹೊಸಮುಖ ಆಗಿದ್ದು, ಎರಡೂ ಪಕ್ಷಗಳ ರಣತಂತ್ರಗಳು ಯಾವ ರೀತಿ ಇರಲಿವೆ ಎಂಬುದೇ ಕುತೂಹಲ ಮೂಡಿಸಿವೆ. ಸಂಗಣ್ಣಗೆ ಟಿಕೆಟ್ ನೀಡಬೇಕು ಇಲ್ಲವಾದರೆ ಬಿಜೆಪಿ ಗೆಲುವು ಕಷ್ಟ, ಏಕೆ ಸಂಗಣ್ಣಗೆ ಟಿಕೆಟ್ ನೀಡುತ್ತಿಲ್ಲ ಎನ್ನುವ ಮಾತುಗಳು ಕ್ಷೇತ್ರದ ಜನಸಾಮಾನ್ಯರ ಬಾಯಿಯಲ್ಲಿ ಕೇಳಿಬಂದಿವೆ. ಕೊಪ್ಪಳ ಕ್ಷೇತ್ರದಲ್ಲಿ ಇದೇ ಅರ್ಧ ಪ್ರಚಾರ ಆಗಿದೆ. ಇನ್ನೇನಿದ್ದರು ಅಧಿಕೃತ ಪ್ರಚಾರ ಬಾಕಿ ಇದೆ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು, ಒಟ್ಟಾರೆ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಕೊಪ್ಪಳ ಕ್ಷೇತ್ರದಲ್ಲಿ ಕಂಡು ಬಂದಿದೆ ಮುಂದಿನ ದಿನಮಾನಗಳಲ್ಲಿ ಏನೋನು ಏರು-ಪೇರಾಗಿ ಯಾವ ರೀತಿ ಕಣ ರಂಗು ಏರುವುದು ಎಂಬುದು ಕಾದುನೋಡಬೇಕಾಗಿದೆ.