ಕೊಪ್ಪಳ : ಕಳಪೆ ಕಾಮಗಾರಿ ವಿರೋಧಿಸಿ ಮನವಿ

ಲೋಕದರ್ಶನ ವರದಿ

ಕೊಪ್ಪಳ 01: ಗಾಂಗವತಿ ತಾಲೂಕಿನ ಕೇಸರಹಟ್ಟಿ ಗ್ರಾಮದಿಂದ ಗುಡದಾಳ, ಕೇಸಕ್ಕಿ, ಹಂಚಿನಾಳ, ಹಂಚಿನಾಳ ಕ್ಯಾಂಪ ಮಾರ್ಗವಾಗಿ ಹಣವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿಮರ್ಾಣವಾಗುತ್ತಿರುವ ರಸ್ತೆ ಕಾಮಗಾರಿಯೂ ಸಂಪೂರ್ಣ ಕಳೆಪೆ ಕಾಮಗಾರಿಯಾಗಿದೆ ಎಂದು ಕರ್ನಾಟಕ್  ರಕ್ಷಣಾ ವೇದಿಕೆ ಕನ್ನಡಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿ ಕೊಪ್ಪಳದ ಜಿಲ್ಲಾ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 

ಪ್ರಧಾನ ಮಂತ್ರಿ ಗ್ರಾಮಿಣ ರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸುಮಾರು 13 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ಆರಂಭಿಸಿದ್ದು, ಸುರೇಶ ಸಜ್ಜನ ಎಂಬ ಗುತ್ತಿಗೆದಾರರು ಈ ಕಾಮಗಾರಿಯ ಒಟ್ಟು ಪ್ಯಾಕೇಜ್ನ್ನು ಟೆಂಡರ್ ಪಡೆದಿದ್ದು ರಸ್ತೆ ನಿಮರ್ಾಣ, ಸೇತುವೆ ಹಾಗೂ ಸಿ.ಡಿಗಳನ್ನು ನಿಮರ್ಿಸಬೇಕಾಗಿದೆ. ಸಿ.ಡಿ ನಿಮರ್ಾಣಕ್ಕೆ ಸಿಮೆಂಟ್ ಪೈಪಗಳನ್ನು ಬಳಸಲಾಗುತ್ತಿದ್ದು, ಎಡ-ಬಲ ರಕ್ಷಣಾ ಗೋಡೆಗಳನ್ನು ಅಂದಾಜು ಪಟ್ಟಿಯಂತೆ ನಿರ್ವಹಿಸದೆ ಕಳಪೆ ಗುಣಮಟ್ಟದ ಕಾಮಗಾರಿ ಮಾಡಲಾಗುತ್ತಿದೆ. ಈ ಕಾಮಗಾರಿಯನ್ನು ಉಪಗುತ್ತಿಗೆಯಾಗಿ ಬಸವರಾಜ ಎಂಬುವರು ಪಡೆದುಕೊಂಡಿದ್ದು ಈ ಕಳಪೆ ಕಾಮಗಾರಿ ಕುರಿತು ಸ್ಥಳೀಯ ರೈತರು ತುಂಬಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾರಣ ಕಳಪೆ ರಸ್ತೆ ಕಾಮಗಾರಿಯನ್ನು ತಕ್ಚಣವೇ ನಿಲ್ಲಿಸಿ ಬಿಲ್ ತಡೆಹಿಡಿದು ಸ್ಥಳ ಪರಿಶೀಲನೆ ನಡೆಸಿ ಸುತ್ತಮುತ್ತಲಿನ ರೈತರು ಹಾಗೂ ಗ್ರಾಮಸ್ಥರು ಅಭಿಪ್ರಾಯ ಪಡೆದು ಕಳಪೆ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡ ಕಳಪೆ ಕಾಮಗಾರಿಯಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಶಿಸ್ತು ಕಾನೂನು ಕ್ರಮ ಜರುಗಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಜಿಲ್ಲಾಧಿಕಾರಿಯ ಕಛೇರಿಯ ಮುಂದೆ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸುವ ಮೂಲಕ ಜಿಲ್ಲಾ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜೇಶ ರೆಡ್ಡಿ, ಜಿಲ್ಲಾಧ್ಯಕ್ಷ ನಾಗರಾಜ ಭ ಹ್ಯಾಟಿ, ಸಿದ್ದರಾಮ್ ದೊಡ್ಡಮನಿ, ಕೋಟೇಶ ಮ್ಯಾಗಳಮನಿ, ಸೇರಿದಂತೆ ಇತರರು ಇದ್ದರು.