ಲೋಕದರ್ಶನ ವರದಿ
ಕೊಪ್ಪಳ 23: ಕೊಪ್ಪಳ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಸಂಗಣ್ಣ ಕರಡಿಯವರು ಕಾಂಗ್ರೆಸ್ ಅಭ್ಯಥರ್ಿ ಕೆ.ರಾಜಶೇಖರ ಹಿಟ್ನಾಳಗಿಂತ 38,397 ಅಧಿಕ ಮತ ಪಡೆದು 2ನೇ ಬಾರಿಗೆ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದಾರೆ. ಈ ಮೂಲಕ ಕೊಪ್ಪಳದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಜಯ ಸಿಕ್ಕಿದೆ. 2009ರ ಚುನಾವಣೆವರೆಗೂ ಕಾಂಗ್ರೆಸ್ ಕೈಯಲ್ಲಿದ್ದ ಜಿಲ್ಲೆ ನಂತರ ಬಿಜೆಪಿ ತೆಕ್ಕೆಗೆ ಜಾರಿಕೊಂಡಿತು. ಕ್ಷೇತ್ರದಲ್ಲಿ ಕೇಸರಿ ಪಕ್ಷದ ಅಧಿಪತ್ಯ ಕೊನೆಗೊಳಿಸುವಲ್ಲಿ ಈ ಬಾರಿಯ ಮೈತ್ರಿ ಸಕರ್ಾರವೂ ಯಶಸ್ಸು ಕಾಣಲಿಲ್ಲ.
ಹಿಟ್ ಆಗದ ಮಾಜಿ ಸಿಎಂ ಸಿದ್ದರಾಮಯ್ಯ ತಂತ್ರಗಾರಿಕೆ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹಿಟ್ನಾಳ್ ಬ್ರದಸರ್್ಗೆ ಚುನಾವಣೆಯ ಫಲಿತಾಂಶ ಹಿನ್ನೆಡೆ ಉಂಟುಮಾಡಿದೆ. ಮೈತ್ರಿ ಅಭ್ಯಥರ್ಿ ಕೆ.ರಾಜಶೇಖರ್ ಹಿಟ್ನಾಳ್ ಗೆಲುವಿಗೆ ನಾನಾ ತಂತ್ರಗಳನ್ನು ಮಾಜಿ ಸಿದ್ದರಾಮಯ್ಯ ಹೆಣೆದರೂ ಅವು ಯಾವುದೂ ನಿರೀಕ್ಷಿತ ಫಲಿತಾಂಶ ಕೊಟ್ಟಿಲ್ಲ. ಬಿಜೆಪಿ ಸಂಗಣ್ಣ ಮತ್ತೆ ಆರಿಸಿ ಬಂದ್ರಣ್ಣ ವಕರ್ೌಟ್ ಆಯ್ತಾ ಮೋದಿ ಮೇನಿಯಾ? ಬಿಜೆಪಿಯ ಕರಡಿ ಸಂಗಣ್ಣ ಮತ್ತೊಮ್ಮೆ ಸಂಸದರಾಗಲು ಮೋದಿ ಮೇನಿಯಾ ಕಾರಣ ಎನ್ನಲಾಗುತ್ತಿದೆ.
ಮೋದಿ ಗುಂಗಲ್ಲಿರುವ ಜಿಲ್ಲೆಯ ಯುವ ಸಮುದಾಯ ಹಾಗೂ ಹೊಸ ಯುವ ಮತದಾರರು ಕರಡಿ ಸಂಗಣ್ಣರ ಕೈ ಹಿಡಿದಿದ್ದಾರೆ. ಇದರ ಜೊತೆಗೆ ಲಿಂಗಾಯತ ಸಮುದಾಯದ ಮತಗಳು, ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡ ಅಲ್ಪಸಂಖ್ಯಾತ ಸಮುದಾಯದ ಒಂದಿಷ್ಟು ಮತಗಳೂ ಈ ಬಾರಿ ಸಂಗಣ್ಣ ಕರಡಿ ಮತಬುಟ್ಟಿಗೆ ಬಿದ್ದಿವೆ ಎನ್ನಲಾಗುತ್ತಿದೆ. ಇದರ ಜೊತೆಗೆ ಹಿಟ್ನಾಳ್ ಕುಟುಂಬದ ಬಗ್ಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗಿದ್ದ ಅಸಮಾಧಾನ ಸಹ ಕರಡಿ ಸಂಗಣ್ಣ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಹೇಳಬಹುದು. ಕೊಪ್ಪಳದ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಇದು ಸಹ ಕೇಸರಿ ಪಕ್ಷದ ಕ್ಯಾಂಡಿಡೇಟ್ ಗೆಲುವಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ ಎಂಬುದು ರಾಜಕೀಯ ವಿಶ್ಲೇಷಣೆ.
ಬಿಜೆಪಿ ಅಭ್ಯಥರ್ಿ ಸಂಗಣ್ಣ ಕರಡಿಯವರು ಆಯ್ಕೆಗೊಳ್ಳುತ್ತಿದ್ದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು,ಅಭಿಮಾನಿಗಳು ಪಟಾಕಿ ಸಿಡಿಸಿ ಪರಸ್ಪರ ಬಣ್ಣ ಎರಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿ.ವ್ಹಿ.ಚಂದ್ರಶೇಖರ,ಅಮರೇಶ ಕರಡಿ, ನವೀನಕುಮಾರ ಗುಳಗಣ್ಣನವರ್, ಕಳಕನಗೌಡ ಕಲ್ಲೂರು, ಬಸವರಾಜ್ ಭೋವಿ, ದೇವರಾಜ್ ಹಾಲಸಮುದ್ರ, ಶರಣಪ್ಪ ನಿಟ್ಟಾಲಿ, ಕೊಟ್ರಪ್ಪ ಕೋರಿ, ವಸಂತ ನಾಯಕ್ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.