ದುತ್ತರಗಿ ಟ್ರಸ್ಟ್ ಅಧ್ಯಕ್ಷರಾಗಿ ಕೊನೆಸಾಗರ ಅಧಿಕಾರ ಸ್ವೀಕಾರ
ಬಾಗಲಕೋಟೆ 20: ಕನ್ನಡ ರಂಗಭೂಮಿಯ ಹಿರಿಯ ನಾಟಕಕಾರ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ದಿ.ಪಿ.ಬಿ.ದುತ್ತರಗಿ ಅವರ ಹೆಸರಿನಲ್ಲಿ ಕರ್ನಾಟಕ ಸರಕಾರ ಸ್ಥಾಪಿಸಿರುವ ಪಿ.ಬಿ.ದುತ್ತರಗಿ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಹುನಗುಂದದ ರಂಗ ಸಂಘಟಕ ಎಸ್.ಕೆ.ಕೊನೆಸಾಗರ ಇಂದು ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಾಲಯದಲ್ಲಿ ಅಧಿಕಾರ ಸ್ವೀಕರಿಸಿದರು. ಟ್ರಸ್ಟ್ ಕಾರ್ಯದರ್ಶಿ ಹಾಗೂ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಅಧಿಕಾರ ಹಸ್ತಾಂತರಿಸಿದರು.
ಟ್ರಸ್ಟ್ ನೂತನ ಸದಸ್ಯರಾದ ಕಲಾವಿದೆ ಸುನಂದಾ ಕಂದಗಲ್ಲ, ಇಬ್ರಾಹಿಂಸಾಬ ಕನಸಾವಿ, ಚಿದಾನಂದ ಧೂಪದ ಹಾಗೂ ಹಿಂದಿನ ಟ್ರಸ್ಟ್ ಸದಸ್ಯರಾದ ಡಾ.ಪ್ರಕಾಶ ಖಾಡೆ, ಸಾಹಿತಿ ಸಿದ್ದಲಿಂಗಪ್ಪ ಬೀಳಗಿ, ಗ್ರಾ.ಪಂ. ಸದಸ್ಯ ಆನಂದ ಉಪಸ್ಥಿತರಿದ್ದರು.