ಬಾಗಲಕೋಟೆ: ರೀಚ್ ಸಂಸ್ಥೆ ಹಾಗೂ ಮಕ್ಕಳ ಸಹಾಯವಾಣಿ-1098 ಸಹಯೋಗದಲ್ಲಿ ನವನಗರದ ಕಾಳಿದಾಸ ಪದವಿ ಪೂರ್ವ ಕಾಲೇಜ್ನಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಕೋಮಲ್ ಕಿರುಚಿತ್ರ ಪ್ರದರ್ಶನ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಪ್ರತಿಯೊಬ್ಬ ವ್ಯಕ್ತಿಗೂ ಮಾನವ ಹಕ್ಕುಗಳು ಅವಲಂಬಿಸುತ್ತದೆ. ಕೋಮಲ್ ವಿಡಿಯೋ ಪ್ರದರ್ಶನದ ಉದ್ದೇಶವೇನೆಂದರೆ ಸಮಾಜದಲ್ಲಿ ಸಾಕಷ್ಟು ರೀತಿಯಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳು ಆಗುತ್ತಿರುವುದು ಕೂಡಾ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರರಾದ ಸುಚಿತ್ರಾ ವಾಡಕರ್ ಮಾತನಾಡಿ ಪ್ರತಿಯೊಬ್ಬರಿಗೂ ಹಕ್ಕುಗಳು ಬೇಕು ಎಂದರೆ ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು ಅಂದಾಗ ಮಾತ್ರ ಹಕ್ಕುಗಳು ಕೂಡಾ ಉಲ್ಲಂಘನೆಯಾಗುವುದಿಲ್ಲ, ಎಲ್ಲರಿಗೂ ಮಾನವ ಹಕ್ಕುಗಳು ದೊರೆಯಬೇಕಾದರೆ ಎಲ್ಲರೂ ಕಾನೂನಿನ ಚೌಕಟ್ಟಿನಲ್ಲಿ ಸರಿಯಾಗಿದ್ದರೆ ಯಾರೂ ಅಪರಾಧಿ ಸ್ಥಾನಕ್ಕೆ ಬರುವುದಿಲ್ಲ ಎಲ್ಲರೂ ಜಾಗೃತರಾಗಿ ಭಾರತವನ್ನು ಒಂದು ಒಳ್ಳೆಯ ಸಂಸ್ಕೃತಿದಾಯಕವಾಗಿ ಬೆಳೆಯಲು ನಾವೂ ಕೂಡ ಒಂದು ಹೆಜ್ಜೆ ಮುಂದೆ ಹಾಕಿ ಎಲ್ಲರೂ ಮಾನವ ಹಕ್ಕುಗಳನ್ನು ಬಳಸಿ ಮತ್ತು ಗೌರವಿಸಿ ಎಂದು ತಿಳಿಸಿದರು.ಅಧ್ಯಕ್ಷತೆವಹಿಸಿದ್ದ ಕಾಳಿದಾಸ ಪದವಿಪೂರ್ವ ಕಾಲೇಜ್ನ ಪ್ರಾಚಾರ್ಯರಾದ ಜಿ.ಆರ್.ಹೊಸಮನಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಕಾಲೇಜ್ಗಳಲ್ಲಿ ಜರುಗಬೇಕುಹೇಳಿದರು.