ಕಾರವಾರ,ಅಗಸ್ಟ 6: ಭಾರೀ ಮಳೆಯಿಂದಾಗಿ ಕೊಂಕಣ ರೈಲ್ವೆ ವ್ಯಾಪ್ತಿಯ ಕಾರವಾರ ವಲಯದ ಪೆರ್ನೆಂ ಬಳಿ ಸುರಂಗದ ಒಳಭಾಗದ ಗೋಡೆ ಕುಸಿದಿದ್ದು ಮುಂದಿನ ಸೂಚನೆ ವರೆಗೆ ರೈಲು ಸಂಚಾರ ರದ್ದುಪಡಿಸಲಾಗಿದೆ.
ಮದುರೆ ಹಾಗೂ ಪೆರ್ನೆಂ ಮಧ್ಯೆ ಈ ಘಟನೆ ಗುರುವಾರ ಮುಂಜಾನೆ ನಡೆದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕುಸಿತವಾದ ಕಡೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಆ.5ರ ನಂ.02617 ಎರ್ನಾಕುಳಂ-ಹಜರತ್ ನಿಜಾಮುದ್ದೀನ್ ಸೂಪರ್ ಫಾಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಹಾಗೂ ಅದೇ ದಿನದ ನಂ.06346 ತಿರುವನಂತಪುರಂ ಸೆಂಟ್ರಲ್-ಲೋಕಮಾನ್ಯ ತಿಲಕ್ ವಿಶೇಷ ರೈಲನ್ನು ಮಡಗಾಂವ್-ಲೋಂಡ-ಮೀರಜ್-ಪುಣೆ-ಪನ್ವೇಲ್-ಕಲ್ಯಾಣ್ ಮೂಲಕ ಕಳುಹಿಸಲಾಗಿದೆ.
ಅದೇ ರೀತಿ ಆ.5ರ ನಂ.02432 ನವದೆಹಲಿ-ತಿರುವನಂತಪುರಂ ಸೆಂಟ್ರಲ್ ರಾಜಧಾನಿ ವಿಶೇಷ ಎಕ್ಸ್‌ಪ್ರೆಸ್, ನಂ.02618 ಹ.ನಿಜಾಮುದ್ದೀನ್-ಎರ್ನಾಕುಳಂ ಸೂಪರ್‌ಫಾಸ್ಟ್, ಗುರುವಾರದ ನಂ.06345 ಲೋಕಮಾನ್ಯ ತಿಲಕ್-ತಿರುವನಂತಪುರಂ ಸೆಂಟ್ರಲ್ ರೈಲುಗಳನ್ನು ಪನ್ವೆಲ್-ಪುಣೆ-ಮೀರಜ್-ಲೋಂಡ-ಮಡಗಾಂವ್ ಮೂಲಕ ಕಳುಹಿಸಲಾಗಿದೆ.
ಪ್ರಯಾಣಿಕರಿಗೆ ಯಾವುದೇ ಸಂಶಯಗಳಿದ್ದರೆ ಸಂಪರ್ಕ: 022-27587939, 10722.