ಸಿಡ್ನಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ನ ಡೊನಾಲ್ಡ್ ಟ್ರಂಪ್ ಎಂದು ಕರೆದಿದ್ದ ಆಸ್ಟ್ರೇಲಿಯಾ ಮಾಧ್ಯಮಗಳು ಇದೀಗ ಮತ್ತೊಮ್ಮೆ ಅನಗತ್ಯವಾಗಿ ಕೊಹ್ಲಿ ಕಾಲೆಳೆದಿವೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ವಿರುದ್ಧ ಆಸ್ಟ್ರೇಲಿಯಾ ಮಾಧ್ಯಮಗಳು ಲೇಖನಗಳನ್ನು ಪ್ರಕಟಿಸಿವೆ.
ಇಂಗ್ಲೆಂಡ್ ನಲ್ಲಿ ಕೊಹ್ಲಿಯ ನೆಚ್ಚಿನ ಹೊಡೆತ ಯಾವುದೆಂದರೆ, ಆಫ್ ಸ್ಟಂಪ್ ನಿಂದ ಆಚೆ ಹೋಗುವ ಚೆಂಡನ್ನು ಕೆಣಕಿ, ಸ್ಲಿಪ್ ನಲ್ಲಿ ಕ್ಯಾಚ್ ನೀಡವುದು ಎಂದು ಫಾಕ್ಸ್ ಸ್ಪೋಟ್ರ್ಸ ಆಸ್ಟ್ರೇಲಿಯಾ ಸುದ್ದಿ ಪ್ರಕಟಿಸಿದೆ.
ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ನಡುವಿನ ಐದು ಪಂದ್ಯಗಳು ಟೆಸ್ಟ್ ಸರಣಿ ಇಂದಿನಿಂದ ಆರಂಭಗೊಳ್ಳಲಿದೆ.