ಅಂಟಿಗುವಾ, ಅಜಿಂಕ್ಯಾ ರಹಾನೆ ( ಔಟಾಗದೆ 53 ರನ್) ಹಾಗೂ ವಿರಾಟ್ ಕೊಹ್ಲಿ (ಔಟಾಗದೆ 51 ರನ್) ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ಗೆ ಬೃಹತ್ ಮೊತ್ತದ ಗುರಿ ನೀಡುವತ್ತ ದಾಪುಗಾಲು ಇಟ್ಟಿದೆ. ಇಲ್ಲಿನ ಸರ್ ವಿವಿಯನ್ ರಿಚಡ್ರ್ಸ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ತಂಡ 222 ರನ್ಗಳಿಗೆ ಆಟ ಮುಗಿಸಿದ ಬಳಿಕ 75 ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಮೂರನೇ ದಿನದಾಟದ ಮುಕ್ತಾಯಕ್ಕೆ 72 ಓವರ್ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿದ್ದು, 260 ರನ್ ಮುನ್ನಡೆ ಪಡೆದಿದೆ. ಆರಂಭಿಕರಾಗಿ ಕಣಕ್ಕೆ ಇಳಿದ ಕೆ.ಎಲ್ ರಾಹುಲ್ (38 ರನ್) ಹಾಗೂ ಮಯಾಂಕ್ ಅಗರ್ವಾಲ್ (16 ರನ್) ಜೋಡಿ ಮತ್ತೆ ಮೂರು ಅಂಕಿಗಳ ಜತೆಯಾಟವಾಡುವಲ್ಲಿ ವಿಫಲವಾಯಿತು. ಇವರಿಬ್ಬರನ್ನೂ ರೋಸ್ಟನ್ ಚೇಸ್ ಕಡಿವಾಣ ಹಾಕಿದರು. ಕಳೆದ ಇನಿಂಗ್ಸ್ನಲ್ಲೂ ವಿಫಲರಾಗಿದ್ದ ಚೇತೇಶ್ವರ ಪೂಜಾರ ಈ ಇನಿಂಗ್ಸ್ನಲ್ಲೂ 25 ರನ್ಗಳಿಗೆ ತಮ್ಮ ಆಟ ಮುಗಿಸಿದರು. ಕೇಮರ್ ರೋಚ್ ಅವರ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದರು. ಕೊಹ್ಲಿ-ರಹಾನೆ ಜುಗಲ್ಬಂದಿ: ತಂಡದ ಮೊತ್ತ 81 ರನ್ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ಬಳಿಕ ಜತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ ಜೋಡಿ ಮುರಿಯದ ನಾಲ್ಕನೇ ವಿಕೆಟ್ಗೆ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಯಿತು. ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಈ ಜೋಡಿ 104 ರನ್ ಜತೆಯಾಟವಾಡುವ ಮೂಲಕ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಿತು. ಪಿಚ್ ಅರ್ಥಮಾಡಿಕೊಂಡು ಬ್ಯಾಟಿಂಗ್ ಮಾಡಿದ ಕೊಹ್ಲಿ ಹಾಗೂ ರಹಾನೆ ವೆಸ್ಟ್ ಇಂಡೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿತು. ಇವರಿಬ್ಬರೂ ಕ್ರಮವಾಗಿ 51 ರನ್ ಮತ್ತು 53 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಪರ ಉತ್ತಮ ಬೌಲಿಂಗ್ ಮಾಡಿದ ರೋಸ್ಟನ್ ಚೇಸ್ ಎರಡು ವಿಕೆಟ್ ಪಡೆದರೆ, ಕೇಮರ್ ರೋಚ್ ಒಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಎಂಟು ವಿಕೆಟ್ ಕಳೆದುಕೊಂಡು 189 ರನ್ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ವೆಸ್ಟ್ ಇಂಡೀಸ್ 222 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಪ್ರಥಮ ಇನಿಂಗ್ಸ್ನಲ್ಲಿ 75 ರನ್ ಹಿನ್ನಡೆ ಅನುಭವಿಸಿತು. ಕೊನೆಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಜೇಸನ್ ಹೋಲ್ಡರ್ 65 ಎಸೆತಗಳಲ್ಲಿ 39 ರನ್ ಗಳಿಸಿದರು. ಸಂಕ್ಷಿಪ್ತ ಸ್ಕೋರ್ ಭಾರತ ಪ್ರಥಮ ಇನಿಂಗ್ಸ್: 297 ದ್ವಿತೀಯ ಇನಿಂಗ್ಸ್: 72 ಓವರ್ಗಳಲ್ಲಿ 185/3 (ಅಜಿಂಕ್ಯಾ ರಹಾನೆ ಔಟಾಗದೆ 53. ವಿರಾಟ್ ಕೊಹ್ಲಿ ಔಟಾಗದೆ 53; ರೋಸ್ಟನ್ ಚೇಸ್ 69 ಕ್ಕೆ 2, ಕೇಮರ್ ರೋಚ್ 18 ಕ್ಕೆ 1) ವೆಸ್ಟ್ ಇಂಡೀಸ್ ಪ್ರಥಮ ಇನಿಂಗ್ಸ್: 74.2 ಓವರ್ಗಳಲ್ಲಿ 222/10 (ರೋಸ್ಟನ್ ಚೇಸ್ 48, ಜೇಸನ್ ಹೋಲ್ಡರ್ 39, ಶಿಮ್ರಾನ್ ಹೆಟ್ಮೇರ್ 35; ಇಶಾಂತ್ ಶರ್ಮಾ 43 ಕ್ಕೆ 5, ಮೊಹಮ್ಮದ್ ಶಮಿ 48 ಕ್ಕೆ 2, ರವೀಂದ್ರ ಜಡೇಜಾ 64 ಕ್ಕೆ