ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳ ಜ್ಞಾನ ಬೇಕು: ಕುನ್ನೂರ

ಲೋಕದರ್ಶನವರದಿ

ಶಿಗ್ಗಾವಿ : ವಿದ್ಯಾಥರ್ಿಗಳ ಪರಿಪೂರ್ಣ ಜ್ಞಾನಕ್ಕೆ ಪಠ್ಯ ಜ್ಞಾನದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಜ್ಞಾನ ಬೇಕು ಅಂದಾಗ ಉತ್ತಮ  ಜ್ಞಾನವಂತರಾಗಿ  ಅವರ ಅಮೂಲ್ಯ  ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.

ಪಟ್ಟಣದ  ಚನ್ನಪ್ಪ ಕುನ್ನೂರ ಪದವಿ ಪೂರ್ವ  ಕಲಾ  ಮತ್ತು  ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾವೇರಿ ಹಾಗೂ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ಸಹಯೋಗದಲ್ಲಿ 2019-20ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪಧರ್ೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಾರ್ವಜನಿಕರ ಮತ್ತು ವಿದ್ಯಾಥರ್ಿಗಳ ಸಹಕಾರ ಮುಖ್ಯವಾಗಿದ್ದು ಮಾನವೀಯ ಮೌಲ್ಯಗಳ ಜೊತೆಗೆ ಶಿಕ್ಷಣ ರೂಪಗೊಳ್ಳಬೇಕಿದೆ  ಮತ್ತು  ಜ್ಞಾನದ ಚಟುವಟಿಕೆಗಳಲ್ಲಿ ಸಾಂಸ್ಕೃತಿಕತೆ ಮೂಡಿಬರಬೇಕಿದೆ ಆ ನಿಟ್ಟಿನಲ್ಲಿ ಶಿಗ್ಗಾವಿಯಲ್ಲಿ ಸರಸ್ವತಿ ಸಂಗೀತ ವಿದ್ಯಾ ಶಾಲೆಯನ್ನು ತೆರೆಯುವ ಉದ್ದೇಶವಿದೆ ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾ  ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎಸ್ ಸಿ ಫಿರಜಾದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜ್ಞಾನದ ಹಸಿವಿಗೆ ವಿದ್ಯಾಥರ್ಿಗಳಲ್ಲಿ ಆಟ, ಪಾಠ ಮತ್ತು ಪೂರಕ ಸುಂದರ ಲೋಕ ಬೇಕು ಅಂದಾಗ ಪರಿಪೂರ್ಣತೆಯ ಶಿಕ್ಷಣದ ಜ್ಞಾನ ಸಿಗಲು ಸಾಧ್ಯವಿದೆ, ಜೀವನದಲ್ಲಿ ಸಫಲರಾಗಬೇಕಾದರೆ ತಂದೆ ತಾಯಿಯನ್ನು ಗೌರವಿಸುವ, ಗುರುಗಳನ್ನು ಗೌರವಿಸುವ ಮತ್ತು  ಸಮಾಜವನ್ನು ಗೌರವಿಸುವ ಈ  ಮೂರು ಗುಣಗಳನ್ನು ಅವಶ್ಯವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು, ವಿದ್ಯಾಥರ್ಿಗಳು ಸದಾ ಚಿಂತನಾಶೀಲರಾಗಿರಬೇಕು  ಜೊತೆಗೆ ಯೋಜನಾ ರೀತಿಯ ಅಧ್ಯಯನ ಮಾಡಬೇಕು ಅಂದಾಗ ಸಾಧನೆ ಸನಿಹವಾಗುತ್ತದೆ,

        ನಮ್ಮ ಸಂಸ್ಕೃತಿಯಲ್ಲಿ ಭಾರತ ಮುಂದಿದೆ ಇದಕ್ಕೆ ಯುವ ಸಮೂಹದ ಕೊಡುಗೆ ಅಪಾರವಾಗಿದ್ದು ಶುದ್ದ ಭಾರತಿಯ ಸಾಂಸ್ಕೃತಿಕ ಚಿಂತನೆಗಳು ನಮ್ಮ ವಿದ್ಯಾಥರ್ಿಗಳನ್ನು ಇಮ್ಮಡಿಗೊಳಿಸಿವೆ, ಇತಿಹಾಸ ಸೃಷ್ಟಿಸಲು ಪ್ರಯತ್ನ ಬೇಕು ಇದಕ್ಕೆ ವಿದ್ಯಾಥರ್ಿಗಳು ಮನಸ್ಸು ಮಾಡಬೇಕು ಅಂದಾಗ ಉತ್ತಮ ಇತಿಹಾಸ ಕಾಣಲು ಸಾಧ್ಯವಿದೆ  ಎಂದು ಸ್ಪಧರ್ಾ ವಿದ್ಯಾಥರ್ಿಗಳಿಗೆ ಶುಭ ಹಾರೈಸಿದರು.

ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳ್ಳಾಡಿದರು, ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ಭಾಗವಹಿಸಿ ಆಶಿರ್ವಚಿಸಿದರು

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಎಚ್ ಬಿ ಲಿಂಗಯ್ಯ ಹಾಗೂ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎಸ್ ಸಿ ಫಿರಜಾದೆ ಅವರನ್ನು ಸನ್ಮಾನಿಸಲಾಯಿತು.ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್ ಎಚ್ ಕಬ್ಬಿನಕಂತಿಮಠ,  ಪ್ರೋ ಎಸ್ ಜಿ ಉಮಾಪತಿ, ಪ್ರೋ. ಎಸ್ ಎಸ್ ನಿಸ್ಸಿಮಗೌಡ್ರ, ಪ್ರೋ ಪ್ರಕಾಶ ಬಾರಕೆರ, ಪ್ರೋ ರಾಜೇಂದ್ರಕುಮಾರ ಕರೆಗೌಡ್ರ, ಪ್ರೋ ಎಮ್ ಕೆ ಕಲ್ಲಜ್ಜನವರ, ಪ್ರೋ ಪ್ರಭು ಹಲಗೇರಿ, ಪ್ರೋ ಎಚ್ ಡಿ ಕಂಟೆರ, ಪ್ರೋ ಆರ್ ಎಸ್ ಭಟ್, ಪ್ರೋ ಎಸ್ ಸಿ ಪಾಟೀಲ್ ಸೇರಿದಂತೆ ಜಿಲ್ಲೆಯ ವಿವಿದ ಕಾಲೇಜುಗಳಿಂದ ಆಗಮಿಸಿದ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ವಿದ್ಯಾಥರ್ಿಗಳು ಇದ್ದರು.ಕಾರ್ಯಕ್ರಮವನ್ನು ಪ್ರೋ ಕೆ ಎಸ್ ಬರದೇಲಿ ನಿರ್ವಹಿಸಿಜದರು,  ಪ್ರೋ ಕೆ ಬಸಣ್ಣ ವಂದಿಸಿದರು.