ಜ್ಞಾನ ಅತ್ಯುತ್ಮವಾದದ್ದು, ಜ್ಞಾನವಿದ್ದರೆ ಎಲ್ಲವೂ ಇದೆ: ಸಂಜಯ ತಳವಳಕರ

Knowledge is supreme, if there is knowledge, everything is there: Sanjay Talavalakkar...

ಸಂಬರಗಿ 12: ಜ್ಞಾನ ಅತ್ಯುತ್ಮವಾದದ್ದು, ಜ್ಞಾನವಿದ್ದರೆ ಎಲ್ಲವೂ ಇದೆ, ತಮ್ಮ ವೈರಿ ಇದ್ದರೂ ಜ್ಞಾನದಲ್ಲಿ ಚಾನಾಕ್ಷನಿದ್ದರೆ ಜ್ಞಾನ ಕಲ್ಪಿಸಲು ಅವರಿಗೆ ಶರಣಾದರೆ ಯಾವುದೇ ತಪ್ಪಿಲ್ಲ ಎಂದು ಬೆಳಗಾವಿ ಜಿಲ್ಲಾ ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಚಾಲಕರಾದ ಸಂಜಯ ತಳವಳಕರ ಹೇಳಿದರು. 

ಶಿರೊಳ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ, ಫುಲೆ, ಛತ್ರಪತಿ ಶಿವಾಜಿ ಮಹಾರಾಜ ಇವರ ಸಂಯುಕ್ತ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿ ಅವರು ಮಾನವ ಧರ್ಮ ಉದ್ಧಾರಕ್ಕಾಗಿ ಜ್ಞಾನದಲ್ಲಿ ಶ್ರೇಷ್ಠವಾಗಿ ಮಾನವ ಕುಲಕ್ಕೆ ಹುಟ್ಟಿ ಬಂದಂತಹ ಏಕೈಕ ವ್ಯಕ್ತಿ ಗೌತಮ ಬುದ್ಧ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಕ್ರಿಸ್ತಿಯನ್ ಹಾಗೂ ಇನ್ನೀತರ ಜಾತಿಯಲ್ಲಿ ತಮಗೆ ಉಚ್ಚ ಪದವಿ ನೀಡುತ್ತೇನೆಂದು ಹೇಳಿದಾಗ ಅದಕ್ಕೆ ಅವರು ಒಪ್ಪಲಿಲ್ಲ. ನಾನು ಬೌದ್ಧ ಧರ್ಮ ಮಾಡುವ ಗುರಿ ಹೊಂದಿದ್ದೆನೆ. ನಾನು ಹುಟ್ಟುವಾಗ ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ನಾನು ಸಾಯುವಾಗ ಬೌದ್ಧನಾಗಿ ಸಾಯುತ್ತೇನೆ ಎಂದು ಅವರು ಹೇಳಿದರು. ಅವರ ಆಚಾರ, ವಿಚಾರ ಸಾಮಾನ್ಯ ಜನರಿಗೆ ತಲುಪಿಸಬೇಕು. ಅಂತಹ ಮಹಾನ್ ವ್ಯಕ್ತಿ ಇಂತಹ ಯುವಾ ಪೀಳಿಗೆಯಲ್ಲಿ ನಿರ್ಮಾಣವಾಗಬೇಕೆಂದು ಅವರು ಹೇಳಿದರು.

ಈ ವೇಳೆ ದಲಿತ ಸಂಘರ್ಷ ಸಮೀತಿ ಮುಖಂಡರಾದ ಬಾಳಕೃಷ್ಣ ಬಜಂತ್ರಿ, ದಲಿತ ಸಂಘರ್ಷ ಸಮೀತಿ ಮುಖಂಡರಾದ ಮಚೇಂದ್ರ ಖಂಡೆಕರ, ಕುಮಾರ ಬನಸೋಡೆ, ಪ್ರಕಾಶ ಕಾಂಬಳೆ, ಸುಭಾಸ ಕಾಂಬಳೆ, ವಿಜಯ ಅಠವಲೆ, ಸುನೀಲ ಖಂಡೆಕರ, ಸದಾಶಿವ ಖಂಡೆಕರ, ಸದಾಶಿವ ಗಟಕಾಂಬಳೆ, ಜಯವಂತ ಕಾಂಬಳೆ, ಕಿರಣ ಗಸ್ತಿ, ಅಭಿಜಿತ ಖಂಡೆಕರ ಸೇರಿದಂತಹ ಅನೇಕ ಗಣ್ಯಮಾನ್ಯರು ಕಾರ್ಯಕರ್ತರು ಉಪಸ್ಥಿತ ಇದ್ದರು.