ಜ್ಞಾನ ಬದುಕಿಗೆ ಬೆಳಕು ನೀಡುತ್ತದೆ: ಸಿದ್ದೇಶ್ವರ ಸ್ವಾಮಿಗಳು

ಮುಧೋಳ 12: ಜ್ಞಾನ ಬದುಕಿಗೆ ಬೆಳಕು ನೀಡುತ್ತದೆ, ಮಹಿಳೆಯರು ಶಿಕ್ಷಣವನ್ನು ಕಲಿತರೆ ದೇಶದ ಚಿತ್ರಣವೇ ಬದಲಾವಣೆಯಾಗಲಿದೆ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಾಗವಹಿಸಬೇಕು ಇದರಿಂದ ದೇಶದ ಅಭಿವೃದ್ದಿಗೆ ಅನುಕೂಲವಾಗಲಿದೆ, ಸೀಯರು ಸ್ವಾವಲಂಬಿಯಾಗಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ತಂದಿದೆ ಅವುಗಳನ್ನು ಸಮರ್ಪಕವಾಗಿ ಬಳಸಿ ಕೊಳ್ಳಬೇಕು, ವಿದ್ಯಾರ್ಥಿನಿಯರು ನಿರಂತರ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರಸ್ವಾಮಿಗಳು ಹೇಳಿದರು. 

  ಮಂಗಳವಾರ ಸ್ಥಳೀಯ ಆರ್.ಎಂ.ಜಿ ಪ.ಪೂ ಕಾಲೇಜಿನ ಶ್ರೀ ಗುರುಬಸವ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಬಾಗಲಕೋಟ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಮುಧೋಳದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಶಾಸಕ,ಡಾ.ವೀರಣ್ಣ ಸಿ.ಚರಂತಿಮಠ ಅವರು ಬಿ.ವ್ಹಿ.ವ್ಹಿ ಸಂಘದ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಸಾಕಷ್ಟು ಶಾಲಾ-ಕಾಲೇಜುಗಳನ್ನು ತೆರೆಯುವ ಮೂಲಕ ಪ್ರತಿಯೊಬ್ಬರು ಶಿಕ್ಷಣ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ.

  ಬಿ.ವ್ಹಿ.ವ್ಹಿ ಸಂಘದ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಅಸಂಖ್ಯಾತ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉನ್ನತ ಸ್ಥಾನ-ಮಾನದಲ್ಲಿದ್ದಾರೆ ಇವರ ಮೂಲಕ ಈ ಶಿಕ್ಷಣ ಸಂಸ್ಥೆಯ ಹೆಸರು ರಾಷ್ಟ್ರಮಟಕ್ಕೆ ತಲುಪಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಗತಿ ಎಂದು ಹೇಳಿದ ಅವರು ಮುಧೋಳ ಸಾಹಿತ್ಯಮತ್ತು ಶಿಕ್ಷಣ ಕ್ಷೇತ್ರದಲ್ಲಿ ತನ್ನದೆಯಾದ ಹೆಸರು ಇದೆ ಎಂದರು. 

  ಉಪ-ಮುಖ್ಯಮಂತ್ರಿ ಗೋವಿಂದ ಕಾರಜೋಳ ದಾನಮ್ಮದೇವಿ ಮಹಿಳಾ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಜಗತ್ತಿನಲ್ಲಿ ಎಲ್ಲಾ ದಾನಗಳಿಂತ ವಿದ್ಯಾದಾನ ಶ್ರೇಷ್ಠವಾದುದು, ಅಂತಹ ಶ್ರೇಷ್ಠವಾದ ಕೆಲಸವನ್ನು ಮಾಡುತ್ತಿರುವ ಬಿ.ವಿ.ವಿ ಸಂಘವು ಮಾನವ ಕುಲಕೋಟಿಗೆ ವರದಾನವಾಗಿದೆ.

  ಡಾ.ವೀರಣ್ಣ ಚರಂತಿಮಠ ಅವರು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ನಂತರ ಬಿವಿವಿ ಸಂಘವು ವಿಸ್ತಾರವಾಗಿ ಬೆಳೆದು,ರಾಜ್ಯದ ವಿವಿಧ ಪ್ರದೇಶಗಳಲ್ಲಿ 158 ಶಾಲಾ- ಕಾಲೇಜುಗಳನ್ನು ತೆರೆದಿದ್ದಾರೆ,ಈ ಕಾಲೇಜುಗಳಲ್ಲಿ 50ಸಾವಿರಕ್ಕೂ ಅಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, 10 ಸಾವಿರಕ್ಕೂ ಹೆಚ್ಚು ನೌಕರರು ಸೇವೆ ಸಲ್ಲಿಸುತ್ತಿದ್ದಾರೆ,ಪ್ರತಿ ವರ್ಷ ಸಂಸ್ಥೆಯನ್ನು ಅಭ್ಯೂದಯದತ್ತ ಕೊಂಡೊಯ್ಯವುದರ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ.

  ಈ ಸಂಸ್ಥೆಯ ಏಳ್ಗಿಗಾಗಿ ಡಾ.ವೀರಣ್ಣ ಸಿ.ಚರಂತಿಮಠ ಹಾಗೂ ಅವರ ತಂಡವು ಕ್ರೀಯಾಶೀಲವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಅವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು,ಮುಧೋಳ ನಗರದಲ್ಲಿ ವಿವಿಧ ಶಾಲಾ-ಕಾಲೇಜುಗಳನ್ನು ತೆರೆಯುವ ಮೂಲಕ ಬಿವ್ಹಿವ್ಹಿ ಸಂಘವು ಅಘಾದ ಕೊಡುಗೆ ನೀಡಿದೆ ಅದಕ್ಕಾಗಿ ತಾವು ಕ್ಷೇತ್ರದ ಶಾಸಕರಾಗಿ ಕೃತಜ್ಞತೆ ಸಲ್ಲಿಸುವದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಹಣಮಂತ ಆರ್.ನಿರಾಣಿ ಮುಖ್ಯ ಅತಿಥಿಸ್ಥಾನವಹಿಸಿ ಮಾತನಾಡಿ ನಾನೂ ಕೂಡಾ ಇದೆ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ,ನಾನು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅಷ್ಟೊಂದು ಸೌಲಭ್ಯಗಳು ಇರಲಿಲ್ಲ ಈಗ ಸಂಸ್ಥೆಯು ಎಲ್ಲ ಸೌಲಭ್ಯಗಳನ್ನು ಒದಗಿಸಿದೆ ಕಾರಣ ವಿದ್ಯಾರ್ಥಿಗಳು ಸಂಸ್ಥೆಯ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿ ಒಳ್ಳೇಯ ಹುದ್ದೆಗಳನ್ನು ಪಡೆದುಕೊಳ್ಳಬೇಕೆಂದರು. 

  ಬಿ.ವ್ಹಿ.ವ್ಹಿ ಸಂಘದ ಕಾರ್ಯಾಧ್ಯಕ್ಷ,ಶಾಸಕ ಡಾ.ವೀರಣ್ಣ ಸಿ.ಚರಂತಿಮಠ ಅವರು ಅಧ್ಯಕ್ಷತೆವಹಿಸಿ ಮಾತನಾಡಿ ಇಲ್ಲಿ ಮಹಿಳಾ ಕಾಲೇಜು ತೆರೆಯಬೇಕೆಂಬ ಬೇಡಿಕೆ ಇತ್ತು ಅದು ಈಗ ಕೂಡಿ ಬಂದಿದೆ,ಶ್ರೀ ಸಿದ್ದೇಶ್ವರ ಸ್ವಾಮಿಜಿಯವರಿಂದಲೇ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಬೇಕೆಂಬುದು ಸಂಸ್ಥೆಯ ಆಶಯವಾಗಿತ್ತು ಅದೂ ಕೂಡಾ ಈಗ ಈಡೇರಿದೆ, ಮುಧೋಳ ತಾಲೂಕಿನ ನಾಗರಿಕರ ಪ್ರೊತ್ಸಾಹ ಮತ್ತು ಬೆಂಬಲ ದಿಂದ ಈ ಸಂಸ್ಥೆ ಬೆಳೆಯಲು ಸಾದ್ಯವಾಗಿದೆ,ಮುಂಬರುವ ಶೈಕ್ಷಣಿಕ ವರ್ಷದಿಂದ ಮುಧೋಳದಲ್ಲಿ ಸಿ.ಬಿ.ಎಸ್.ಇ ಸ್ಕೂಲ್ ಆರಂಭಿಸಲಾಗುವುದು ಎಂದು ಘೋಷಿಸಿದರು. ಡಿಸಿಎಂ ಗೋವಿಂದ ಕಾರಜೋಳ,ಕನರ್ಾಟಕ ಕಾನೂನು ಮಹಾವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕ ವಾಗಿರುವ ನ್ಯಾಯವಾದಿ ಬಿ.ಎಚ್.ಪಂಚಗಾಂವಿ,ವಿಧಾನ ಪರಿಷತ್ ಸದಸ್ಯ ಹಣಮಂತ ಆರ್.ನಿರಾಣಿ ಅವರನ್ನು ಬಿ.ವ್ಹಿ.ವ್ಹಿ ಸಂಘದ ವತಿಯಿಂದ ಡಾ.ವೀರಣ ಚರಂತಿಮಠ ಅವರು ಸನ್ಮಾನಿಸಿದರು. 

   ಬಿ.ವ್ಹಿ.ವ್ಹಿ ಸಂಘದ ಗೌರವ ಕಾರ್ಯದಶರ್ಿ ಮಹೇಶ ಎನ್.ಅಥಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು, ಬಿ.ವ್ಹಿ.ವ್ಹಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್. ಸಜ್ಜನ(ಬೇವೂರ) ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ದಾನಮ್ಮದೇವಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ನೀಲಮ್ಮ ಎಮ್.ತೋಟದ ವಂದಿಸಿದರು, ವಿದ್ಯಾಥರ್ಿನಿಯರು ಪ್ರಾರ್ಥನೆ ಹೇಳಿದರು.