ತಾಳಿಕೋಟಿ, 23; ಆಧುನಿಕ ಯುಗದಲ್ಲಿ ಡಿಜಿಟಲ್ ಕೌಶಲ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಉಪಯೋಗವಾಗಲಿದೆ ಈ ನಿಟ್ಟಿನಲ್ಲಿ ಶಿಕ್ಷಣದ ಜೊತೆಗೆ ಕೌಶಲ್ಯ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ವಿಜಯಪುರದ ಸಂಚಾಲಕ ದಿನೇಶ ರಾಥೋಡ ಹೇಳಿದರು.ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಆಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ, ಅಡೂಬ ಕಂಪನಿ, ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ಕೌಶಲ್ಯ ತರಬೇತಿ ಘಟಕದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಕೌಶಲ್ಯ ಸ್ಪರ್ಧೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಇಂದಿನ ಯುವ ವಿದ್ಯಾರ್ಥಿಗಳು ಕೌಶಲ್ಯ ತರಬೇತಿ ನೀಡುವಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿ.ವಿ. ಸಂಘದ ಸಹ ಕಾರ್ಯದರ್ಶಿಗಳು ಹಾಗೂ ಎಸ್. ಕೆ. ಶಿಕ್ಷಣ ಮಹಾವಿದ್ಯಾಲಯದ ಚೇರ್ಮನ್ನರಾದ ಕಾಶಿನಾಥ ಎಸ್ ಮುರಾಳ ಉಪಸ್ಥಿರಿದ್ದರು ಪ್ರಾಚಾರ್ಯರಾದ ಡಾ. ಆರ್.ಎಂ. ಬಂಟನೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಪರ್ಧೆಯಲ್ಲಿ ಬಹುಮಾನಗಳಿಸುವುದು ಅತಿ ಮುಖ್ಯವಲ್ಲ ನಾವು ಪಡೆದುಕೊಳ್ಳುವ ಜ್ಞಾನ ಕೌಶಲ ಅನುಭವಗಳು ಮುಖ್ಯ, ಇದನ್ನು ನಿಮ್ಮ ಜೀವನದಲ್ಲಿ ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಐಕ್ಯುಎಸಿ ಘಟಕದ ಸಂಯೋಜಕರಾದ ಉಮೇಶ ಮಂಗೊಂಡ ಕೌಶಲ್ಯ ತರಬೇತಿ ಘಟಕದ ಮುಖ್ಯಸ್ಥರಾದ ಸುರೇಶ ಬಡಿಗೇರ್ ಹಾಗೂ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಹುಬ್ಬಳ್ಳಿಯ ಸಂಚಾಲಕ ಗೀತಾ ನಾಯಕ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆರು ವಿದ್ಯಾರ್ಥಿಗಳ ಎಂಟು ಗುಂಪುಗಳನ್ನು ರಚಿಸಲಾಯಿತು. ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿಜಯಪುರ. ಹಾಗೂ ಶ್ರೀ ಖಾಸ್ಗತೇಶ್ವರ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು
ಪ್ರಥಮಸ್ಥಾನ ತಂಡ : ಇಂಕ್ ಐಂಡ್ ಇಮ್ಯಾಜಿನೇಶನ್ 7000 ನಗದು ಬಹುಮಾನವನ್ನು ದ್ವಿತೀಯಸ್ಥಾನ ತಂಡ : ಕಲರ್ ಟೈಟನ್ಸ್ 5000 ನಗದು ಬಹುಮಾನವನ್ನುತೃತೀಯಸ್ಥಾನ ತಂಡ : ಡಿಸ್ಗ್ ಡೈನಾಮಸ್ 3000 ನಗದು ಬಹುಮಾನವನ್ನು. ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಅಸ್ತ್ಯವತಿಯಿಂದ ಬ್ಯಾಗುಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಐಶ್ವರ್ಯ ಚೌಹಾಣ್ ಪ್ರಾರ್ಥಿಸಿದರು. ಕುಮಾರಿ ನಕ್ಷತ್ರ ಅಚನೂರ್ ಸ್ವಾಗತಿಸಿದರು. ತಯ್ಯಬಾ ಮೋಮಿನ್ ನಿರೂಪಿಸಿದರು.