ಹಾವೇರಿ03: ವಿದ್ಯಾಥರ್ಿಗಳಾದವರು ಕಲಿಕೆಯ ಹಂತದಲ್ಲಿಯೇ ಉತ್ತಮ ಶಿಕ್ಷಣ ಪಡೆದರೆ ಉತ್ತಮ ಜ್ಞಾನ ಹೊಂದಲು ಸಾಧ್ಯವಾಗುತ್ತದೆ ಎಂದು ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಬಿಸಿಎ ಮಹಾವಿದ್ಯಾಲಯವು ಆಯೋಜಿಸಿದ್ದ ಪ್ರಥಮ ಬಿಸಿಎ ವಿದ್ಯಾಥರ್ಿಗಳ ಸ್ವಾಗತ ಸಮಾರಂಭದಲ್ಲಿ ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ಹೇಳಿದರು.
21 ನೇ ಶತಮಾನದಲ್ಲಿ ಎಲ್ಲಿ ನೋಡಿದರೂ ತಂತ್ರಜ್ಞಾನ ತಲೆಎತ್ತಿದೆ. ತಾಂತ್ರಿಕಾಂಶ ಇಲ್ಲದೇ ಇರುವ ಜಾಗವೇ ಇಲ್ಲ ಎಂಬುವಂತಾಗಿದೆ. ವೈಜ್ಞಾನಿಕವಾಗಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ವಿದ್ಯಾಥರ್ಿಗಳು ದಕ್ಷ ಕಾರ್ಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಣಕಯಂತ್ರದ ಮಹತ್ವವೂ ಕೂಡಾ ಅತ್ಯಮೂಲ್ಯವಾಗಿದ್ದು, ಪ್ರತಿಯೊಬ್ಬರೂ ತಾಂತ್ರಿಕಮಟ್ಟವನ್ನು ಹೆಚ್ಚಿಸಿಕೊಂಡು ಉನ್ನತ ಚಿಂತನೆಗಳ ಮೂಲಕ ನವ್ಯತಂತ್ರಾಂಶವನ್ನು ಪರಿಚಯಿಸಿ ಡಾ|| ಅಬ್ದುಲ್ ಕಲಾಂರವರು ಕಂಡ 20-20 ಕನಸ್ಸಿನ ಜಗದ್ಗುರು ಭಾರತವನ್ನು ನಿಮರ್ಾಣ ಮಾಡಬೇಕಿದೆ ಎಂದರು.
ಮುಖ್ಯ ಅತಿಥಿಗಳಾದ ಪ.ಪೂ. ಪ್ರಾಚಾರ್ಯ ಪ್ರೊ. ಜೆ. ಆರ್. ಸಿಂಧೆ ಮಾತನಾಡಿ ಬೆಳೆಯುತ್ತಿರುವ ಪರಿಸರಕ್ಕೆ ಹೊಂದಿಕೊಂಡಂತೆ ವಿದ್ಯಾಥರ್ಿಗಳು ಮೇಲ್ಮಟ್ಟದ ಶಿಕ್ಷಣ ಪಡೆದುಕೊಂಡು ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವತ್ತ ಮುಖ ಮಾಡಬೇಕಿದೆ.
ಜೀವನದಲ್ಲಿ ಪರಿಣಾಮಕಾರಿ ಮೈಲುಗಲ್ಲಿನಂತಿರುವ ಕಾಲೇಜು ಶಿಕ್ಷಣ ಮಹತ್ವ ಪಡೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಸಿಎ ಪ್ರಾಚಾರ್ಯ ಪ್ರೊ. ವೆಂಕಟೇಶ ಕಲಾಲ ಮಾತನಾಡಿ ವಿನೂತನ ರೀತಿಯಲ್ಲಿ ತಾಂತ್ರಿಕ ದತ್ತಾಂಶಗಳು, ಎಲೆಕ್ಟ್ರಾನಿಕ್ಸ್ ಮಾಧ್ಯಮಗಳ ಮೂಲಕ ಎಲ್ಲರಿಗೂ ಪ್ರೇರಕ ಸರತಿಗಳನ್ನು ಒದಗಿಸುತ್ತಿವೆ.
ಈ ನಿಟ್ಟಿನಲ್ಲಿ ಬಿಸಿಎ ವಿದ್ಯಾಥರ್ಿಗಳು ವರ್ತಮಾನದ ವಾತಾವರಣಕ್ಕೆ ಹೊಂದಿಕೊಂಡಂತೆ ಕಾರ್ಯನಿರ್ವಹಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ|| ಎಸ್. ವಿ. ಮಡವಾಳೆ, ಪ್ರೊ. ಗುರುಪಾದಯ್ಯ ಸಾಲಿಮಠ, ಪ್ರೊ. ನಾಯ್ಕರ, ಪ್ರೊ. ಸಂಗಮೇಶ ವಿ., ಪ್ರೊ. ಆರತಿ ಹುಟಗಿ, ಪ್ರೊ. ಪ್ರದೀಪ ಕುಲಕಣರ್ಿ, ಪ್ರೊ. ಪೂಜಾ ನೆಲೋಗಲ್, ಪ್ರೊ. ಶೋಭಾ ಅಗಸಿಬಾಗಿಲ, ಪ್ರೊ. ಅನಿಲ ದೋತಿಸಾಲ, ಪ್ರೊ. ಪ್ರದೀಪ ಕುಲಕಣರ್ಿ ಉಪಸ್ಥಿತರಿದ್ದರು.
ಆರಂಭದಲ್ಲಿ ಪಲ್ಲವಿ ಪ್ರಾಥರ್ಿಸಿದರು. ಪ್ರಪೂಜ ಇಚ್ಚಂಗಿ ಸ್ವಾಗತಿಸಿದರು. ಕಿರಣಕುಮಾರ ದೊಡ್ಡಮನಿ, ಪವಿತ್ರ ನಿರ್ವಹಿಸಿದರು. ಚೈತ್ರಾ ವೀರಾಪುರ ವಂದಿಸಿದರು.