ಕಿಚ್ಚ ಸುದೀಪ್ ಇಸ್ ಬೆಸ್ಟ್, ಕ್ಲೀನ್ ಮ್ಯಾನ್: ಸಲ್ಮಾನ್ ಖಾನ್

ಬೆಂಗಳೂರು, ಅ 23:     ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕನ್ನಡದ ಅಭಿನಯ ಚಕ್ರವರ್ತಿ ಅಭಿನಯದ ಬಹುನಿರೀಕ್ಷೆಯ ದಬಾಂಗ್ 3 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ 

ನಿರೀಕ್ಷೆಯಂತೆ ಟ್ರೈಲರ್ ಅದ್ಭುತವಾಗಿ ಮೂಡಿಬಂದಿದ್ದು, ಚುಲ್ ಬುಲ್ ಪಾಂಡೆಯಾಗಿ ಸಲ್ಲು ಭಾಯ್ ಅಬ್ಬರಿಸಿದ್ದಾರೆ. ಈ ಹಿಂದಿನ ಆವೃತ್ತಿಗಿಂತ ಹೆಚ್ಚು ಮಜಾ ಕೊಡ್ತಾರೆ ಎಂಬ ಭರವಸೆ ಮೂಡಿಸಿದೆ 

ಡಿಸೆಂಬರ್ 20 ರಂದು ದಬಾಂಗ್ 3 ಸಿನಿಮಾ ತೆರೆಗೆ ಬರ್ತಿದ್ದು, ಹಿಂದಿ ಜೊತೆಗೆ ಕನ್ನಡದಲ್ಲೂ ಈ ಸಿನಿಮಾ ಬಿಡುಗಡೆಯಾಗ್ತಿದೆ. ಪ್ರಭುದೇವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸೋನಾಕ್ಷಿ ಸಿನ್ಹಾ, ಸಾಯಿ ಮಂಜ್ರೇಕರ್ ಪ್ರಮುಖ ಪಾತ್ರದಲ್ಲಿದ್ದಾರೆ  

ಜುಹು ಮುಂಬೈನಿಂದ ಬೆಂಗಳೂರು, ಹೈದರಾಬಾದ್, ಚೆನ್ನೈನಲ್ಲಿ ಏಕಕಾಲಕ್ಕೆ ಟ್ರೈಲರ್ ಬಿಡುಗಡೆಯ ಬಳಿಕ ಮಾತನಾಡಿದ ಸಲ್ಮಾನ್ ಖಾನ್ ಕಿಚ್ಚ ಸುದೀಪ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ 

ಖಳನಟನ ಪಾತ್ರಕ್ಕೆ ಸುದೀಪ್ ಅವರನ್ನೇ ಏಕೆ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆಗೆ, ಸುದೀಪ್ ಇಸ್ ಬೆಸ್ಟ್, ಕ್ಲೀನ್ ಮ್ಯಾನ್, ಅತ್ಯುತ್ತಮ ನಟ  ನನಗೆ ಸಹೋದರನಿದ್ದಂತೆ ಎಂದರು 

ಕನ್ನಡ ಆವೃತ್ತಿಗೆ ಸ್ವತಃ ಸಲ್ಮಾನ್ ಖಾನ್ ಡಬ್ಬಿಂಗ್ ಮಾಡಿದ್ದು, ಈ ಕುರಿತು ತಮ್ಮ ಅನುಭವ ಹಂಚಿಕೊಳ್ಳುತ್ತ ಕನ್ನಡದಲ್ಲಿ ಡಬ್ಬಿಂಗ್ ತುಂಬಾ ಕಷ್ಟವಾಯ್ತು ಎಂದು ಹೇಳಿದರು 

ಸಲ್ಮಾನ್ ಖಾನ್ ಎದುರು ಖಳನಾಯಕನಾಗಿ ಕಾಣಿಸಿಕೊಂಡಿದ್ದ ಸುದೀಪ್ ಹೇಗೆ ನಟಿಸಿರಬಹುದು, ಅವರ ಪಾತ್ರ ಹೇಗೆ ಬಂದಿರಬಹುದು ಎಂಬ ಕುತೂಹಲ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿತ್ತು. ಈಗ ಟ್ರೈಲರ್ ನೋಡಿದ್ಮೇಲೆ ಕಿಚ್ಚನ ಫ್ಯಾನ್ಸ್ ದೀಪಾವಳಿ ಹಬ್ಬವನ್ನ ಜೋರಾಗಿ ಆಚರಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಸಲ್ಲು ಎದುರು ಸುದೀಪ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಹೀರೋ ಅಷ್ಟೇ ಪ್ರಾಮುಖ್ಯತೆ ಸುದೀಪ್ ಪಾತ್ರಕ್ಕೂ ಇದೆ. ಚುಲ್ ಬುಲ್ ಪಾಂಡೆ ಮತ್ತು ಕಿಚ್ಚ ಜುಗಲ್ ಬಂದಿ ನೋಡಲು ಸಖತ್ ಇರುತ್ತೆ ಎನ್ನುವುದಕ್ಕೆ ಈ ಟ್ರೈಲರ್ ಸಾಕ್ಷಿಯಾಗಿದೆ.