ಕಿನ್ನಾಳ : ಇಂದಿನಿಂದ ಅಹೋರಾತ್ರಿ ಪುರಾಣೋತ್ಸವ, ಸಂಗೀತೋತ್ಸವ ಕಾರ್ಯಕ್ರಮ

ಕಿನ್ನಾಳ : ಇಂದಿನಿಂದ ಅಹೋರಾತ್ರಿ ಪುರಾಣೋತ್ಸವ, ಸಂಗೀತೋತ್ಸವ ಕಾರ್ಯಕ್ರಮ  Kinnal: Nightly mythological festival, music festival program from today

ಕೊಪ್ಪಳ 14:  ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೊಪ್ಪಳ ಇವರ ಕೃಪಾಶೀರ್ವಾದದಿಂದ ಸುಕ್ಷೇತ್ರ ಚಿಕ್ಕಬೆಣಕಲ್ ಶಿವಶರಣರಾದ ಶ್ರೀ ಬೆಟ್ಟದಲಿಂಗೇಶ್ವರ ಸ್ವಾಮಿಯ 20ನೇ ವರ್ಷದ ಅಹೋರಾತ್ರಿ ಪುರಾಣೋತ್ಸವ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಇಂದು ದಿನಾಂಕ ಆಗಸ್ಟ್‌15 ರಿಂದ ಆಗಸ್ಟ್‌ 25ರವರೆಗೆ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಕೌಲ್ ಪೇಟೆಯ ಶ್ರೀ ಕಾಶಿ ವಿಶ್ವನಾಥನ ದೇವಸ್ಥಾನದ ಆವರಣದಲ್ಲಿ ಜರುಗುವುದು.     

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಇದೇ ಶ್ರೀ ಶಾಲಿವಾಹನ ಶಕೆ 1947ನೇ ವಿಶ್ವಾವಸುನಾಮ ಸಂವತ್ಸರ ಶ್ರಾವಣಮಾಸ ಬಹುಳ ಅಷ್ಟಮಿ ಶ್ರೀ ಕೃಷ್ಣಜನ್ಮಾಷ್ಟಮಿದಿನ ದಿನಾಂಕ : 15.08.2025 ರಂದು ಶುಕ್ರವಾರ ಸಂಜೆ : 6 ಗಂಟೆಗೆ ವೇ. ಮೂ. ಶ್ರೀ ಶಿವಲಿಂಗಪ್ಪಯ್ಯ ಶಾಸ್ತ್ರಿಗಳು ವಿರಚಿತ ಶ್ರೀ ಬೆಟ್ಟದಲಿಂಗೇಶ್ವರ ಸ್ವಾಮಿಯ ಪುರಾಣ ಪ್ರಾರಂಭವಾಗುವುದು.ಪುರಾಣ ಪಠಣಕಾರರು :  ಚಿದಾನಂದಪ್ಪ ಹಳೆಪೇಟೆ ಕಿನ್ನಾಳ,ಪುರಾಣ ಪ್ರವಚನಕಾರರು :  ವಿನಾಯಕ ಹೆಚ್‌. ಕಿನ್ನಾಳ ಸಂಗೀತ: ಶ್ರೀ ಶಾರದಾ ಸಂಗೀತ, ಕಲಾ, ಶಿಕ್ಷಣ ಸಂಸ್ಥೆ ಕೌಲ್ಪೇಟೆ ಕಿನ್ನಾಳ ಇವರಿಂದ ಹಾರ್ಮೋನಿಯಂ ಲಚ್ಚಪ್ಪ ಗೋವಿಂದಪ್ಪ ಹಳೆಪೇಟೆ ಕೌಲ್ಪೇಟೆ ಕಿನ್ನಾಳ,ಬಾಬಾ ಸಾಥ್‌:  ಶ್ರೀನಿವಾಸ್ ಜೋಷಿ, ಶ್ ಶಿವಲಿಂಗಪ್ಪ ಹಳೆಪೇಟೆ ಗುರುರಾಜ ಯಲಬುರ್ಗಿ, ಪಾವಣಸ್ಪರ ಕೊಪ್ಪಳತಾಳವಾದ್ಯ:  ಕೃಷ್ಣ ಆರ್‌.ಸೊರಟೂರ ಕೊಪ್ಪಳ, ಗೋವಿಂದರಾಜ ಕಿನ್ನಾಳ ಪವನಕುಮಾರ ಕಿನ್ನಾಳತಾನ್ಪುರ: ಶ್ರೀಮತಿ ಗೀತಮ್ಮ ಹೆಚ್‌. ಕಿನ್ನಾಳ. ಕು.ಭವಾನಿ ಸಿ. ಕಿನ್ನಾಳ, ವರ್ಷಿಣಿ ಎಸ್‌. ಕಿನ್ನಾಳಗೆಜ್ಜೆ:ಕು.ಅಭಿಷೇಕ ಎಸ್‌. ಕಿನ್ನಾಳ, ನಿಜತಾ ಕಿನ್ನಾಳದಿನಾಂಕ : 25 -8-20 25 25-08-2025 ರಂದು ಸೋಮವಾರ ಸಂಜೆ:7-00 ಗಂಟೆಗೆ ಪುರಾಣಮಹೋತ್ಸವವು ಮಹಾಮಂಗಲಗೊಳ್ಳುವುದು.ದಿನನಿತ್ಯ ಜರುಗುವ ಕಾರ್ಯಕ್ರಮಗಳು ದಿನಾಂಕ : 15.08.2025 ರಂದು ಶುಕ್ರವಾರ ಸಾನಿಧ್ಯ : ಪರಮಪೂಜ್ಯ ಶ್ರೀ ಚೈತನ್ಯಾನಂದ ಸ್ವಾಮೀಜಿಕು.ನಿಖಿತಾ ಅಧ್ಯಕ್ಷರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಕೊಪ್ಪಳ ಪ್ರಾರ್ಥನೆ : ಶ್ರೀ ಶಾರದಾ ಸಂಗೀತ, ಕಲಾ, ಶಿಕ್ಷಣ ಸಂಸ್ಥೆ ಕೌಲ್ಪೇಟೆ ಕಿನ್ನಾಳ ವಿದ್ಯಾರ್ಥಿಗಳಿಂದ ಉದ್ಘಾಟನೆಯನ್ನು ವೇ.ಮೂ.ಶ್ರೀ ಈಶಯ್ಯ ಸ್ವಾಮಿಗಳು ಕಿನ್ನಾಳ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ಗಾಲಿ ಜನಾರ್ಧನರಡ್ಡಿಯವರು ಶಾಸಕರು, ಗಂಗಾವತಿ, ಲಿಂಗಪ್ಪ ಮಠದ, ಕರ್ಣಕುಮಾರ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕೊಪ್ಪಳ,ನಾರಾಯಣಪ್ಪ ಕಲಾಲಅಧ್ಯಕ್ಷರು ಶ್ರೀ ಮಾರುತೇಶ್ವರ ಸೇವಾ ನಾಟ್ಯಸಂಘ, ಕಿನ್ನಾಳ, ನಾಗಮುನಿಯ್ಯ ಅವಾರ,ಸುಜಾತ ಕ್ಲಾಥ್ ಎಂಪೋರಿಯಂ, ಗಂಗಾವತಿ,ಲಕ್ಷ್ಮಣಪ್ಪ ಬಡಗಲ್ಸಮಾಜ ಸೇವಕರು, ಗಂಗಾವತಿ ರಾಮಣ್ಣ ಪೂಜಾರ (ಸಿಂದೋಗಿ) ಸೇರಿದಂತೆ ಕಿನ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪಾಲ್ಗೊಳ್ಳುವರು ಶ್ರೀ ಉದಯ್ ಡೆಕೋರೇಟರ್ ಅವರಿಂದ ವೇದಿಕೆಯು ಜಗಮಗಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ