ಹೈದ್ರಾಬಾದ್ : ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ
ಟೆಸ್ಟ್
ಫಾರ್ಮೆಟ್ನಲ್ಲಿ
ಆಡ್ಲಿ
ಬಿಡ್ಲಿ
ಆದರೆ
ಪ್ರತಿ ಪಂದ್ಯದಲ್ಲೂ ಒಂದಿಲ್ಲ ಒಂದು ದಾಖಲೆ ಬರೆಯುತ್ತಿದ್ದಾರೆ. ಮೊನ್ನೆಯಷ್ಟೆ ರಾಜ್ ಕೋಟ್ ಟೆಸ್ಟ್ ನಲ್ಲಿ
24ನೇ
ಶತಕ ಬಾರಿಸಿ ಹಲವಾರು
ದಾಖಲೆಗಳನ್ನ
ಮುಡಿಗೇರಿಸಿಕೊಂಡಿದ್ದ
ಟೀಂ ಇಂಡಿಯಾ ನಾಯಕ
ಇದೀಗ
ವಿಂಡೀಸ್
ವಿರುದ್ಧ
ಹೈದ್ರಾಬಾದ್
ಟೆಸ್ಟ್
ಪಂದ್ಯದಲ್ಲೂ
ಮತ್ತೊಂದು
ದಾಖಲೆ ಬರೆದಿದ್ದಾರೆ.
ಅತಿ ಹೆಚ್ಚು ರನ್ ಗಳಿಸಿದ ಏಷ್ಯಾದ ಮೊದಲ ನಾಯಕ ಕೊಹ್ಲಿ
ನಿನ್ನೆ ವಿಂಡೀಸ್
ವಿರುದ್ಧ
ಮೊದಲ
ಇನ್ನಿಂಗ್ಸ್ ನಲ್ಲಿ ಕ್ಯಾಪ್ಟನ್
ಕೊಹ್ಲಿ
ಬಾರಿಸಿದ್ದು
ಕೇವಲ 45 ರನ್. ಆದರೆ ಈ
ಇನ್ನಿಂಗ್ಸ್ ನಲ್ಲೂ ದಾಖಲೆ ಬರೆದು ವಿಶ್ವ ಕ್ರಿಕೆಟ್ ನ ಗಮನ ಸೆಳೆದಿದ್ದಾರೆ. 45 ರನ್ ಗಳಿಸೋದ್ರೊಂದಿಗೆ ವಿರಾಟ್ ಕೊಹ್ಲಿ
ಏಷ್ಯಾ
ನಾಯಕರ ಪೈಕಿ ಅತಿ ಹೆಚ್ಚು ರನ್
ಗಳಿಸಿದ
ಏಷ್ಯಾ
ತಂಡಗಳ ಮೊದಲ ನಾಯಕ ಎಂಬ ಗೌರವಕ್ಕೆ ಕಿಂಗ್ ಕೊಹ್ಲಿ
ಪಾತ್ರರಾಗಿದ್ದಾರೆ.
ಮಿಸ್ಬಾ ದಾಖಲೆ ಸರಿಗಟ್ಟಿದ
ಟೀಂ ಇಂಡಿಯಾ ನಾಯಕ
ಉಪ್ಪಾಳ ಅಂಗಳದಲ್ಲಿ ನಿನ್ನೆ
ವಿಂಡೀಸ್
ವಿರುದ್ದ 45 ರನ್ ಗಳಿಸುವ ಮೂಲಕ ವಿರಾಟ್
ಕೊಹ್ಲಿ
ಪಾಕಿಸ್ತಾನ ಮಾಜಿ ನಾಯಕ ಮಿಸ್ಬಾ- ಉಲ್- ಹಕ್
ಅವರ ದಾಖಲೆ ಸರಿಗಟ್ಟಿದ್ರು.
ಮಿಸ್ಬಾ-ಉಲ್- ಹಕ್
ನಾಯಕನಾಗಿ ಟೆಸ್ಟ್ ನಲ್ಲಿ 8 ಶತಕ ಬಾರಿಸಿದ್ರೆ. ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಾಯಕನಾದ ನಂತರ 17 ಶತಕ
ಬಾರಿಸಿದ್ದಾರೆ.
ಮಿಸ್ಬಾ ದಾಖಲೆ ಸರಿಗಟ್ಟಿದ
ಟೀಂ ಇಂಡಿಯಾ ನಾಯಕ
ಪಾಕಿಸ್ತಾನ ಕ್ರಿಕೆಟ್
ತಂಡದ ಮಾಜಿ ನಾಯಕ ಮಿಸ್ಬಾ-ಉಲ್-ಹಕ್ 56 ಟೆಸ್ಟ್
ಪಂದ್ಯಗಳಿಂದ
4,214 ರನ್ ಬಾರಿಸಿ
51.39 ಎವರೇಜ್
ಹೊಂದಿದ್ದಾರೆ.
ಇನ್ನು
ಟೀಂ ಇಂಡಿಯಾ ನಾಯಕ ವಿರಾಟ್
ಕೊಹ್ಲಿ
42 ಟೆಸ್ಟ್
ಪಂದ್ಯಗಳಿಂದ
4, 233 ರನ್ ಬಾರಿಸಿ
65.12 ಎವರೇಜ್ ಹೊಂದಿದ್ದಾರೆ.
ಇಲ್ಲಿ
ವಿರಾಟ್
ಕೊಹ್ಲಿ
ಮಾಜಿ ನಾಯಕ ಮಿಸ್ಬಾ -ಉಲ್-ಹಕ್ಗಿಂತ
14 ಪಂದ್ಯಗಳ ಮುನ್ನವೇ
ದಾಖಲೆಯನ್ನ
ಸರಿ
ಗಟ್ಟಿದ್ದಾರೆ.