ಮೊದಲ ಪಂದ್ಯದಿಂದ ಕಿಮೋ ಪಾಲ್ ಔಟ್: ಕಮಿನ್ಸ್ ಇನ್

ಅಂಟಿಗುವಾ, ಆ 22      ಗಾಯಕ್ಕೆ ತುತ್ತಾಗಿರುವ ವೆಸ್ಟ್ ಇಂಡೀಸ್ ತಂಡದ ಆಲ್ರೌಂಡರ್ ಕಿಮೋ ಪಾಲ್ ಅವರು ಭಾರತದ ವಿರುದ್ಧ ಇಂದಿನಿಂದ ಆರಂಭವಾಗುವ ಮೊದಲನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇವರ ಸ್ಥಾನಕ್ಕೆ ವೇಗಿ ಮಿಗುಯೆಲ್ ಕಮ್ಮಿನ್ಸ್ಅವರಿಗೆ ಸ್ಥಾನ ಕಲ್ಪಿಸಲಾಗಿದೆ. 

 ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಕೀಮೋ ಪಾಲ್ ಅವರ ಎಡ ಪಾದಕ್ಕೆ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಬಲಿಷ್ಟ ಭಾರತದ ವಿರುದ್ಧ ಮೊದಲ ಪಂದ್ಯಕ್ಕೂ ಮುನ್ನವೇ ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತವಾಗಿದೆ. ಅವರ ಬದಲು 28ರ ಪ್ರಾಯದ ಕಮಿನ್ಸ್ಗೆ ಅವಕಾಶ ನೀಡಲಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.  

ಮೊದಲ ಟೆಸ್ಟ್ ಪಂದ್ಯ ಅಂಟಿಗುವಾದ ಸರ್ ವಿವಿಯನ್  ರಿಚಡ್ರ್ಸ ಕ್ರೀಡಾಂಗಣದಲ್ಲಿ ಇಂದಿನಿಂದ ಮೊದಲ ಪಂದ್ಯ ಶುರುವಾಗಲಿದೆ. ಕಿಮೋ ಪಾಲ್ ಅವರು ದ್ವಿತೀಯ ಟೆಸ್ಟ್ಗೆ ಲಭ್ಯರಾಗುವ ಸಾಧ್ಯತೆಯಿದೆ ಎಂದು ತಂಡ ನಿರ್ವಹಣಾ ಸಮಿತಿ ತಿಳಿಸಿದೆ.  

28ರ ಹರೆಯದ ಕಮ್ಮಿನ್ಸ್ 3 ವರ್ಷಗಳ ಹಿಂದೆ ಭಾರತ ವಿರುದ್ಧ ಟೆಸ್ಟ್ಗೆ  ಪದಾರ್ಪಣೆ ಮಾಡಿದ್ದರು. ಆ ಸರಣಿಯಲ್ಲಿ ಸೇಂಟ್ ಲೂಸಿಯಾದಲ್ಲಿ ನಡೆದಿದ್ದ ದ್ವಿತೀಯ  ಟೆಸ್ಟ್ನಲ್ಲಿ 102 ರನ್ಗೆ 9 ವಿಕೆಟ್ ಪಡೆದಿದ್ದರು.