ಸೆ, 04 ಗುರುವಾರದಂದು ಚಿಮ್ಮಡದ ಶ್ರೀ ಪ್ರಭುಲಿಂಗೇಶ್ವರರ ಕಿಚಡಿ ಜಾತ್ರೆ ಹಾಗೂ ರಥೋತ್ಸವ
Khichdi Fair and Chariot Festival of Sri Prabhulingeshwara of Chimmada
ಮಹಾಲಿಂಗಪುರ 03: ಈ ಭಾಗದ ಚಿಮ್ಮಡ ಗ್ರಾಮದ ಆರಾದ್ಯ ದೈವ ಶ್ರೀ ಪ್ರಭುಲಿಂಗೇಶ್ವರರ "ಕಿಚಡಿ" ಜಾತ್ರೆ ಸೆ, 04 ಗುರುವಾರದಂದು ವಿಜ್ರಂಭನೆಯಿಂದ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ 9 ಘಂ.ಗೆ ಷಟಸ್ಥಲ ಧ್ವಜಾರೋಹಣ ನೆರವೇರಲಿದೆ ಅದೇದಿನ ರಾತ್ರಿ 10ಘಂಗೆ ನೂರಾರು ಅಲಂಕೃತ ಟ್ರಾಕ್ಟರ್‌ಗಳ ಮೂಲಕ ಅಕ್ಕಿ, ಬೇಳೆ, ಮಸಾಲೆಖಾರ ಸೇರಿದಂತೆ ಪ್ರಸಾದ ಸಾಮಗ್ರಿಗಳನ್ನು ಗುಡ್ಡದ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ಸಾಗಿಸಲಾಗುತ್ತದೆ.
ಗುರುವಾರ ಬೆಳಿಗ್ಗೆ4 ಘಂ.ಗೆ ಪ್ರಭುಲಿಂಗೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮುಂ.9 ಕ್ಕೆ ಪಲ್ಲಕ್ಕಿ ಮಹೋತ್ಸವ 10 ಕ್ಕೆ ನಡೆಯಲಿರುವ ಕಿಚಡಿ ಪ್ರಸಾದ ಲೋಕಾರೆ್ಣಯಲ್ಲಿ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಶ್ರೀಮಠಗಳ ಪೂಜ್ಯ ಮಠಾಧೀಶರು ಪಾಲ್ಗೋಳ್ಳುವರು ನಂತರ ವಚನ ಚಿಂತನಗೋಷ್ಠಿ ಹಾಗೂ ಜನಪದ ಜಾತ್ರೆ ನಡೆಯಲಿದೆ ಎಂದು ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ. ಮುಂ 10 ಘಂ.ಗೆ ಕಿಚಡಿ ಪ್ರಸಾದ ವಿತರಣೆ ಪ್ರಾರಂಭವಾಗಲಿದ್ದು ಸಂಜೆ 6:30 ರವರೆಗೆ ನಿರಂತರವಾಗಿ ನಡೆಯಲಿದೆ.
ಸಂಜೆ 7 ಘಂಟೆಗೆ ಜೋಡಿ ನಂದಿಕೋಲ ಉತ್ಸವದೊಂದಿಗೆ ನೂತನವಾಗಿ ನಿರ್ಮಿಸಲಾಗಿರುವ ಪ್ರಭುಲಿಂಗೇಶ್ವರರ ರಥೋತ್ಸವ ಸಕಲ ವಾದ್ಯ ವೃಂದಗಳೊಂದಿಗೆ ವಿಜ್ರಂಬನೆಯಿಂದ ನಡೆಯಲಿದೆ. ರಾತ್ರಿ ಶ್ರೀ ಪ್ರಭುಲಿಂಗೇಶ್ವರ ಕಲೆ ಮತ್ತು ಸಂಸ್ಕೃತಿಕ ಯುವ ನಾಟ್ಯ ಸಂಘದ ಕಲಾವಿದರು ಅಭಿನಯಿಸುವ "ಶೆರೆ ಅಂಗಡಿ ಸಂಗವ್ವ" ಹಾಗೂ ಶ್ರೀ ಕರಿಸಿದ್ದೇಶ್ವರ ಯುವಕ ನಾಟ್ಯ ಸಂಘದಿಂದ ಕಿರು ತೆರೆ ತಾರೆಯರಾದ ಕಾಮಿಡಿ ಕಿಲಾಡಿಗಳು ವಿಜೇತ ಹರೀಶ ಹಿರಿಯೂರು, ದಾನಪ್ಪ ಮೂಡಲಗಿ ಸೇರಿದಂತೆ ಪ್ರಮುಖ ತಾರೆಯರಿಂದ ಅಭಿನಯಿಸಲಾಗುವ "ಕಲಿತ ಜೀವಕ್ಕೆ ಬೆರೆತ ಜೀವ"ಎಂಬ ಸಾಮಾಜಿಕ ನಾಟಕಗಳ ಪ್ರದರ್ಶನ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಈ ಜಾತ್ರಾ ಮಹೋತ್ಸವಕ್ಕೆ ಈ ಭಾಗದ ಪ್ರಮುಖ ಪೀಠಗಳ ಪೂಜ್ಯ ಪೀಠಾಧಿಪತಿಗಳು ಹಾಗೂ ಪ್ರಮುಖ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಆಗಮಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಿಚಡಿ ಪ್ರಸಾದ ಸ್ವೀಕರಿಸಬೇಕೆಂದು ಪ್ರಭುಲಿಂಗೇಶ್ವರ ಟ್ರಷ್ಟ ಸಮೀತಿಯ ಪ್ರಮುಖರು ಮನವಿ ಮಾಡಿದ್ದಾರೆ. ಸ್ಥಾನ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 