ಲೋಕದರ್ಶನ ವರದಿ
ಹಾವೇರಿ30 : ದೇಶಕ್ಕೆ ವಿಜಯ ತಂದುಕೊಟ್ಟು ವಿಶ್ವದಲ್ಲಿ ಭಾರತದ ಸಾಥ್ರ್ಯವನ್ನು ತೋರಿಸಿಕೊಟ್ಟ ಕಾಗರ್ಿಲ್ ವಿಜಯೋತ್ಸವದ ಅಂಗವಾಗಿ ಆ ಯದ್ಧದಲ್ಲಿ ಪಾಲ್ಗೊಂಡು ಈಗ ನಿವೃತ್ತರಾಗಿರುವ ಮೊಹ್ಮದ್ ಜಾಹಾಂಗೀರ ಖವಾಸ್ ಅವರನ್ನು ಹಾವೇರಿಯ ಸಾಹಿತಿ ಕಲಾವಿದರ ಬಳಗದವರು ಸನ್ಮಾನಿಸಿದರು.
ಇಂಗಳೆ ಮಾರ್ಗ ಎಂಬ ದಲಿತ ಹೋರಟಪರ ಚಲನಚಿತ್ರದ ನಿಮರ್ಾಪಕ ಬಾಗಲಕೋಟೆಯ ಘನಶ್ಯಾಮ ಭಾಂಡಗೆ ಕಾಗರ್ಿಲ್ ವೀರ ಮೊಹ್ಮದ್ ಖವಾಸ್ ಅವರಿಗೆ 25.000 ರೂಪಾಯಿ ಚೆಕ್ ನೀಡಿ ಗೌರವಿಸಿದರು.
ಬಾಗಲಕೋಟೆಯ ಶಿವಬಸಯ್ಯ ಕುಲಕಣರ್ಿ ಕಾಗರ್ಿಲ್ ಯುದ್ಧದಲ್ಲಿ ಮಡಿದ ಮೊದಲ ಕನ್ನಡಿಗ. ಅನೇಕರು ಆ ಯುದ್ಧದಲ್ಲಿ ಜೀವ ಬಲಿದಾನ ಮಾಡಿದರು. ಯೋಧರಿಗೆ ಜಾತಿಯಿಲ್ಲ. ದೇಶವೇ ಅವರ ಕುಲ. ಇಂಥ ಭಯಾನಕ ಯುದ್ಧದಲ್ಲಿ ಗೆದ್ದುಳಿದು ಬಂದ ಖವಾಸವರ ಬಗ್ಗೆ ಪತ್ರಿಕೆಯಲ್ಲಿ ಓದಿ ರೋಮಾಂಚನಗೊಂಡೆ. ಅವರನ್ನು ಜುಲೈ 27ರ ಕಾಗರ್ಿಲ್ ವಿಜಯೋತ್ಸದ ದಿನ ಸನ್ಮಾನಿಸಲೆಂದೇ ಹಾವೇರಿಗೆ ಬಂದೆ ಎಂದು ಭಾಂಡಗೆ ಹೇಳಿದರು.
ಈ ಸಂದರ್ಭದಲ್ಲಿ ಮೊಹ್ಮದ್ ಖವಾಸ್ ಅವರನ್ನು ವಿಜಯಕುಮಾರ ಮುದಕಣ್ಣನವರ, ಸಿ ಎ ಕೂಡಲಮಠ ಹಾಗೂ ಭಾಂಡಗೆ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಸ್ಥಳದಲ್ಲಿಯೇ ಪ್ರೇರಣೆಗೊಂಡ ಹೆಸ್ಕಾಂ ಕಿರಿಯ ಇಂಜನೀಯರ್ ಎ ಕೆ ಯಮನೂರವರು 1000 ರೂ ಗಳನ್ನು ನೀಡಿದರು.
ತಮ್ಮ ಸನ್ಮಾನಕ್ಕೆ ಕೃತಜ್ಞತೆಗಳನ್ನು ಹೇಳಿದ ಖವಾಸ್ ಅವರು ದೇಶ ದೊಡ್ಡದು ಅದಕ್ಕಿಂತ ದೊಡ್ಡದು ದೇಶಪ್ರೇಮ ನಾನು ಜೋಧ ಪುರದಲ್ಲಿದ್ದಾಗ, ಪೋಕ್ರಾನ್ ಅಣು ಸ್ಪೋಟಗೊಂಡಿತು. ಪ್ರಧಾನಿ ವಾಜಪೇಯಿಯವರು ಮತ್ತು ಕಲಾಂ ಸಾಹೇಬರು ಕಾಗರ್ಿಲ್ ಕದನಕ್ಕೆ ಮುನ್ನುಡಿ ಬರೆದಿದ್ದರು. 1999 ಮೇ ತಿಂಗಳಲ್ಲಿ ಶುರುವಾದ ಯುದ್ಧ ಜುಲೈ 27 ರಂದು ವಿಜಯದೊಂದಿಗೆ ಮುಕ್ತಾಯಗೊಂಡಿತು. ದೇಶದ ಇತಿಹಾಸದಲ್ಲಿಯೇ ಮರೆಯದ ಯುದ್ಧವಿದು. ಭಾರತದ ಸಾಮಥ್ರ್ಯಕ್ಕೆ ಸಾಕ್ಷಿಯಾಗಿತ್ತು ಎಂದರು.
ಸಮಾರಂಭದಲ್ಲಿ ಸರ್ವಶ್ರೀ ಪೃಥ್ವಿರಾಜ ಬೆಟಗೇರಿ, ಹನುಮಂತಗೌಡ ಗೊಲ್ಲರ. ಶಿವಯೋಗಿ ಚರಂತಿಮಠ, ಎಂ ಬಿ ನಾಗಲಾಪೂರ, ಎಸ್ ಆರ್ ಹಿರೇಮಠ, ಎ ಕೆ ಯಮನೂರ, ವಿಜಯಕುಮಾರ ಮುದಕಣ್ಣನವರ ಹಾಗೂ ಸಿ ಎ ಕೂಡಲಮಠ ವಿಜಯೋತ್ಸವ ಕುರಿತು ಮಾತನಾಡಿದರು.
ಕೆ ಎನ್ ಅಗಡಿ, ಬಸನಗೌಡ, ಕೆ ಎನ್ ಜಾನ್ವೇಕರ, ಬಿ ಪಿ ಬನ್ನೀಹಳ್ಳಿ, ಜಗದೀಶ ಚೌಟಗಿ, ಕೆ ಆರ್ ಹಿರೇಮಠ, ಆರ್ ಎನ್ ಮಾಂಡ್ರೆ, ಬಾಬುಸಾಬ ಖವಾಸ್ ಹಾಗೂ ಪತ್ರಕರ್ತ ನಾರಾಯಣ ಹೆಗಡೆ ಪಾಲ್ಗೊಂಡಿದ್ದರು. ಮಹಾಂತೇಶ ಮರಿಗೂಳಪ್ಪನವರ ಸ್ವರಚಿತ ದೇಶ ಭಕ್ತಿ ಗೀತೆಯನ್ನು ಹಾಡಿದರು. ನಾಗರಾಜ ನಡುವಿನಮಠ ಸ್ವಾಗತಿಸಿದರು. ಹಿರಿಯ ಸಾಹಿತಿ ಸತೀಶ ಕುಲಕಣರ್ಿ ಕಾರ್ಯಕ್ರಮ ನಡೆಸಿದರು . ಕೊನೆಯಲ್ಲಿ ಕರಿಯಪ್ಪ ಹಂಚಿನಮನಿ ವಂದಿಸಿದರು.