ಖನ್ನೂರ್ ಕಾಲೇಜು ವಿದ್ಯಾರ್ಥಿನಿ ಕ್ಷಮಾ ಪೂಜಾರ ರಾಜ್ಯಕ್ಕೆ ಮೂರನೆ-ಜಿಲ್ಲೆಗೆ ಪ್ರಥಮ ಸ್ಥಾನ
ರಾಣೇಬೆನ್ನೂರ 15: ಇಲ್ಲಿನ ಪ್ರತಿಷ್ಠಿತ ಖನ್ನೂರ ವಸತಿ ಯುತ ಪಿಯು ಕಾಲೇಜಿನ ವಿದ್ಯಾರ್ಥಿನಿ ಕ್ಷಮಾ ಚಂದ್ರ್ಪ ಪೂಜಾರ ಇವಳು ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ ಬರೋಬ್ಬರಿ 597 ಅಂಕಗಳನ್ನು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ಹಾವೇರಿಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಣೇಬೆನ್ನೂರಿನ ಕೀರ್ತಿ ಪತಾಕೆಯನ್ನು ರಾಜ್ಯ ಮಟ್ಟದಲ್ಲಿ ಹಾರಿಸಿ ವಿಶೇಷ ಸಾಧನೆ ಮೆರೆದಿದ್ದಾಳೆಸೋಮವಾರ ಪ್ರಕಟಗೊಂಡ ಪಿಯು ಫಲಿತಾಂಶದಲ್ಲಿ ಈ ಕ್ಷಮಾ ವಿದ್ಯಾರ್ಥಿಯು ಇಂಗ್ಲಿಷ್ ನಲ್ಲಿ 97 ಅಂಕಗಳನ್ನು ಪಡೆದಿದ್ದು, ಉಳಿದ ಕನ್ನಡ, ರಾಸಾಯನಿಕ ಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯುವುದರ ಮೂಲಕ 99.5 ಸರಾಸರಿಯೊಂದಿಗೆ ವಿಶಿಷ್ಟ ಸಾಧನೆಯ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ಫಲಿತಾಂಶ ಅನಂತರ ಸಂಜೆ ಬಸ್ ನಿಲ್ದಾಣದ ಎದುರು ಕಾಲೇಜಿನ ಅಧ್ಯಕ್ಷ ಡಾ. ಪ್ರವೀಣ ಖನ್ನೂರ, ಕಾರ್ಯದರ್ಶಿ ಶೈಲಶ್ರೀ ಖನ್ನೂರ, ಆಡಳಿತಾಧಿಕಾರಿ ನಾಗೇಶ ಮುರಡಣ್ಣನವರ, ಪ್ರಾಂಶುಪಾಲ ಸುಬ್ಬರಾವ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರುಗಳು ಸೇರಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಭಾರಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ವಿದ್ಯಾರ್ಥಿನಿ ಕ್ಷಮಾ ತಂದೆ ಚಂದ್ರ್ಪ ಪೂಜಾರ ಅವರು ಎಂ.ಎ. ಎಲ್. ಎಲ್. ಬಿ. ಪದವೀಧರರಾಗಿದ್ದು, ರಟ್ಟಿಹಳ್ಳಿಯ ಮೇದೂರಿನ ಗಜಾನನ ಕಲಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದು, ತಾಯಿ ಶೋಭಾ ಬಿ ಎ ಪದವೀಧರೆಯಾಗಿ ಗೃಹಿಣಿಯಾಗಿದ್ದು, ಸಹೋದರಿ ಖುಷಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು ಇವರುಗಳು ರಾಣೆಬೆನ್ನೂರಿನ ಅಂಬೇಡ್ಕರ್ ನಗರದ ನಿವಾಸಿಯಾಗಿದ್ದಾರೆ. ಫಲಿತಾಂಶ ಕುರಿತು ಕ್ಷಮಾ ಮಾತನಾಡಿ ರಾಜ್ಯಕ್ಕೆ ಸ್ಥಾನ ಪಡೆಯುತ್ತೇನೆ ಎಂಬ ಆತ್ಮವಿಶ್ವಾಸ ನನ್ನಲ್ಲಿತ್ತು ಇದು ನೀರೀಕ್ಷಿತ ಫಲಿತಾಂಶ. ಇಂಗ್ಲಿಷನಲ್ಲಿ ಮೂರು ಅಂಕಗಳು ಕಡಿಮೆಯಾಗಿದ್ದು ಬೇಸರವಾದರು ತೃಪ್ತಿ ಇದೆ.
ಆ ಮೂರು ಅಂಕಗಳು ಗ್ರಾಮರ್ ನಲ್ಲಿ ಕಡಿಮೆಯಾಗಿರಬಹುದು ಎಂದು ನನಗನಿಸುತ್ತದೆ. ಆ ಮೂರು ಅಂಕಗಳು ಬಂದಿದ್ದರೆ 600 ಕ್ಕೆ 600 ಅಂಕಗಳನ್ನು ಪಡೆದ ವಿದ್ಯಾರ್ಥಿ ನಾನಾಗುತ್ತಿದ್ದೆ, ಆದರೆ ಈಗ ನನಗೆ ತೃಪ್ತಿ ಇದೆ ಸಂತೃಪ್ತಿಯಾಗಿದೆ. ಮುಂದೆ ಯುಪಿಎಸ್ ಓದುಬೇಕೆನ್ನುವ ಆಸೆ ನನಗಿದೆ. ನನ್ನ ತಂದೆ ತಾಯಿ, ಕಾಲೇಜಿನ ಆಡಳಿತ ಮಂಡಳಿ, ಬೋಧಕ ಸಿಬ್ಬಂದಿಗಳ ಸಹಕಾರ ನನ್ನ ಈ ಸಾಧನೆಗೆ ಸಹಕಾರಿಯಾಗಿದೆ ದಿನನಿತ್ಯ 10 ಗಂಟೆಗಳ ಕಾಲ ಓದಿನಲ್ಲಿ ತೊಡಗುತ್ತಿದ್ದೆ. ತಿಳಿಯದಿದ್ದರೆ ಸಂಬಂಧಿಸಿದ ಉಪನ್ಯಾಸಕರನ್ನು ಕೇಳುತ್ತಿದ್ದೆ . ಸತತ ಪರಿಶ್ರಮದಿಂದಲೇ ಈ ಸಾಧನೆ ಮಾಡಬೇಕಾಯಿತು ಎಂದು ಕ್ಷಮಾ ಹೇಳಿದಳು. ನಾನು ಹಾಗೂ ನನ್ನ ಹೆಂಡತಿ ಮಗಳು ಕ್ಷಮಾಗೆ ಹೆಚ್ಚಿನ ಮಾರ್ಗದರ್ಶನ ಮಾಡಿದ್ದೆವು. ಅವಳ ಬಗ್ಗೆ ನಮಗೆ ನಂಬಿಕೆ ಇತ್ತು .
ರಾಜ್ಯಕ್ಕೆ ಸ್ಥಾನ ಪಡೆಯುತ್ತಾಳೆ ಎಂಬ ವಿಶ್ವಾಸ ನಮ್ಮಲ್ಲಿತ್ತು. ಅವಳಿಗೆ ಓದಲು ನಾವು ಹೆಚ್ಚಿನ ಒತ್ತಡ ಹೇರುತ್ತಿರಲಿಲ್ಲ. ಅವಳ ಸತತ ಪರಿಶ್ರಮದಿಂದ ಇಷ್ಟೆಲ್ಲ ಸಾಧನೆ ಮಾಡಿದ್ದಾಳೆ ಎಂದು ತಂದೆ ಚಂದ್ರ್ಪ ಹೆಮ್ಮೆಯಿಂದ ಹೇಳಿದರು. ಈ ಬಾರಿ ನಾವು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಕ್ಕೆ ಸ್ಥಾನ ಪಡೆಯುತ್ತಾರೆ ಎಂಬ ವಿಶ್ವಾಸ ಬಹಳಷ್ಟು ಇತ್ತು . ನೀರೀಕ್ಷೆಯಂತೆ ಕ್ಷಮಾ ಹಾಗೂ ನವ್ಯಾ(98ಅ) ಸೇರಿದಂತೆ ಇತರ ವಿದ್ಯಾರ್ಥಿಗಳು ಹೆಚ್ಚಿನ ಶ್ರೇಣಿಯಲ್ಲಿ ಪಾಸಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಯಿಂದ ಸಂಸ್ಥೆಗೆ ಒಳ್ಳೆಯ ಹೆಸರು ಬಂದಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಬೋಧಕ ಬೋಧಕೇತರರಿಗೂ ಅಭಿನಂದನೆಗಳು. ಈ ಸಂದರ್ಭದಲ್ಲಿ ನನ್ನ ತಂದೆ ಮಹಾದೇವಪ್ಪ ಖನ್ನೂರವರು ಕಾಲೇಜು ಸ್ಥಾಪಿಸಿ, ಪರಿಶ್ರಮ ಮಾಡಿದ್ದರ ಪರಿಣಾಮ ಈ ಸಾಧನೆಗೆ ಕಾರಣವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಎಂ ಖನ್ನೂರ ಮತ್ತು ಕಾರ್ಯದರ್ಶಿ ಶೈಲಶ್ರೀ ಖನ್ನೂರ ಅಭಿಪ್ರಾಯ ವ್ಯಕ್ತಪಡಿಸಿದರು.ಒಟ್ಟಾರೆ ಕ್ಷಮಾ ಹಾಗೂ ಇತರ ವಿದ್ಯಾರ್ಥಿಗಳು ಮಾಡಿದ ಸಾಧನೆಯಿಂದ ರಾಣಿಬೆನ್ನೂರಿನ ಕೀರ್ತಿ ರಾಜ್ಯ ಮಟ್ಟದಲ್ಲಿ ಹೆಸರಾಗಿ ಹೆಮ್ಮೆ ಪಡುವಂತಾಗಿರುವುದು ಸಂತಸದ ವಿಷಯವಾಗಿದೆ.