ಖಣದಾಳ ಹುಲಕಾಂತೇಶ್ವರ ಜಾತ್ರೆ

ಮುಗಳಖೋಡ 24:  ರಾಯಬಾಗ ತಾಲೂಕಿನ ಸುಕ್ಷೇತ್ರ ಖಣದಾಳ ಗ್ರಾಮದಲ್ಲಿ ದಿ 23 ರಂದು ಹುಲಕಾಂತೇಶ್ವರ ಜಾತ್ರಾ ನಿಮಿತ್ಯ ಮುಂಜಾನೆ ಗದ್ದುಗೆಗೆ ಮಹಾರುಧ್ರಾಭಿಷೇಕ, ಪಂಚಾಮೃತ ಅಭಿಷೇಕ,  ವಿಶೇಷ ಪೂಜೆಯನ್ನು  ಶೇಖರ ಹಿರೇಮಠ ಸ್ವಾಮಿಜಿಯಿಂದ  ನೆರವೇರಿತು.  ಹಾಗೂ ಭಕ್ತರು ತಮ್ಮ ಮನೆಯಿಂದ ಚಕ್ಕಡಿಗಳಲ್ಲಿ ದವಸ, ಧಾನ್ಯ, ಕಾಳು ತರುವ ಸಂದರ್ಭದಲ್ಲಿ ಭವ್ಯ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ಅಪರ್ಿಸಲಾಯಿತು. ನಂತರ ಮನರಂಜನೆಗಾಗಿ ಬೈಕ್ ಸರ್ಕಲನಲ್ಲಿ ಸೂತ್ತುವದು, ಕುದುರೆ ಸವಾರಿ,  ಕೋಲಿನಿಂದ ಕೊಡ ಬಡೆಯುವ ಸ್ಪಧರ್ೆ ಸೇರಿದಂತೆ ವಿವಿಧ ಗ್ರಾಮೀಣ ಸೊಗಡಿನ ಕ್ರೀಡಾ ಕೂಟವನ್ನು ಗ್ರಾಮದ ಯುವಕರು ಸಂಘಟಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

   ಸಂಜೆ ಭಕ್ತರ ಹಷರ್ೋದ್ಗಾರದ ಮದ್ಯ ಕರಡಿಮಜಲು, ಶಹನಾಯಿವಾದನ, ಜಾಂಜಪಥಕ ವಿವಿಧ ಕಲಾತಂಡಗಳ ಮದ್ಯ  ನಂದಿಕೋಲು, ಪಲ್ಲಕ್ಕಿ ಉತ್ಸವದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಊರಿನ ಹುಲಕಾಂತೇಶ್ವರ, ದುಗರ್ಾದೇವಿ, ಹನುಮಾನ ದೇವರ, ಬೀರದೇವರ, ಯಲ್ಲಮ್ಮ ದೇವಿ ಪಲ್ಲಕ್ಕಿಗಳು ಬಾಗಿಯಾಗಿದ್ದು,  ಭಕ್ತರು ತಮ್ಮ ಇಷ್ಟಾರ್ಥಗಳನ್ನು ಕರುಣಿಸಲೆಂದು ಹಾಗೂ ಹರಕೆ ತಿರಿಸಿಕೊಳ್ಳಲು ಹರ ಹರ ಮಹಾದೇವ, ಹುಲಕಾಂತೇಶ್ವರ ಮಹಾರಾಜಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಾ ಬೆಂಡು, ಬೆತ್ತಾಸ, ಕಾರಿಕ, ಹಾರಿಸಿ ಭಕ್ತಿಯ ಪರಾಕಾಷ್ಠೆಗೆ ಸಾಕ್ಷೀ ಕರಿಸಿತ್ತು. ಆಗಮಿಸಿದ ಭಕ್ತಾದಿಗಳು ಅನ್ನ ಪ್ರಸಾದದ ವ್ಯೆವಸ್ಥೆ ಕಲ್ಪಿಸಲಾಗಿತ್ತು.  ರಾತ್ರಿ  10 ಗಂಟೆಗೆ ಹುಲಕಾಂತೇಶ್ವರ ನಾಟ್ಯ ಸಂಘ ಖಣದಾಳ ಇವರಿಂದ "ಹೆತ್ತವರ ಕನಸು" ಅಥರ್ಾರ್ತ ಯುಗಪುರುಷ ಎಂಬ ಸುಂದರ  ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.. ಅನ್ನಪ್ರಸಾದ ನಿಲಯದಲ್ಲಿ ಹಾಗೂ ಜಾತ್ರಾ ಮೇಲುಸ್ತುವಾರಿಯಾಗಿ  ದೇವಸ್ಥಾನದ  ಯುವ ಕಾರ್ಯಕರ್ತರು ಮತ್ತು ಜಾತ್ರಾ ಸಂಘಟಕರು ಸೇರಿದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದರು.

ಈ ಜಾತ್ರಾ ಮಹೊತ್ಸವದಲ್ಲಿ ಅರ್ಚಕರಾದ ಶೇಖರಯ್ಯಾ ಹಿರೇಮಠ. ಶಿವಯ್ಯಾ ಹಿರೇಮಠ, ಕಮೀಟಿ ಅಧ್ಯಕ್ಷ ವಸಂತ ದಳವಾಯಿ, ಉಪಾಧ್ಯಕ್ಷ ಹರೀಶಚಂದ್ರ ಮುತ್ನಾಳ, ಕಾರ್ಯದಶರ್ಿ ಪುರಂದರ ಜೋಡಟ್ಟಿ, ಹಾಗೂ ಸದಸ್ಯರಾದ ಲಕ್ಕಣ್ಣ ಬ್ಯಾಗಿ, ಶಾಸಪ್ಪ ಹೊಸಟ್ಟಿ, ಮಲ್ಲಪ್ಪ ಆಜೂರೆ, ವಿಠ್ಠಲ ನಲವಡೆ, ರವಿ ಚಿಂಚಲಿ, ಭೀಮಪ್ಪ ಚಿಗರಿ, ಆನಂದ ಮಾರಾಪೂರ, ಮಲ್ಲಪ್ಪ ಆಜೂರೆ, ರವಿ ಹಿಡಕಲ್, ಅಜ್ಜಪ್ಪ ಪೂಜೇರಿ, ಗ್ರಾ.ಪಂ. ಸದಸ್ಯ ರಾಮಪ್ಪ ವಡ್ಡರ್, ಶಿವರಾಯ ಬಿರಾಜ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಊರಿನ ಸ್ವಾಮಿಜಿಗಳು, ಹಿರಿಯರು ಸಕಲ ಭಕ್ತಾಧಿಗಳು ಪಾಲ್ಗೊಂಡಿದ್ದರು.