ಖಗರ್ೆ-ಗೋಯಲ್ ಮಾತಿನ ಚಕಮಕಿ


ನವದೆಹಲಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾಜರ್ುನ್ ಖಗರ್ೆ ಹಾಗೂ ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ನಡುವೆ ಲೋಕಸಭೆಯಲ್ಲಿ ಗುರುವಾರ ತೀವ್ರ ಮಾತಿನ ಚಕಮಕಿ ನಡೆದಿದ್ದು, ತಾಕತ್ತಿದ್ದರೆ ಮುಂಬೈನಲ್ಲಿ ನನ್ನ ವಿರುದ್ಧ ಸ್ಪಧರ್ಿಸಿ ಎಂದು ಗೋಯಲ್ ಅವರು ಖಗರ್ೆ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. 

ಇಂದು ಲೋಕಸಭೆಯಲ್ಲಿ ಜಿಎಸ್ ಟಿ ಕಾನೂನು ತಿದ್ದುಪಡಿ ಕುರಿತ ಚಚರ್ೆಯಲ್ಲಿ ಭಾಗವಹಿಸಿ ಮಾತನಾಡಿದ ಗೋಯಲ್, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದರ ಸಂಖ್ಯೆ ನಾಲ್ಕಕ್ಕೆ ಇಳಿಯಲಿದೆ ಎಂದರು. 

ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ನಾಯಕ ಮಲ್ಲಿಕಾಜರ್ುನ್ ಖಗರ್ೆ, 'ಈ ವರೆಗೆ ಯಾವುದೇ ಸ್ಥಳೀಯ ಚುನಾವಣೆಯನ್ನೂ ಗೆಲ್ಲದಿರುವ ಗೋಯಲ್ ಅವರನ್ನು ರಾಜ್ಯಸಭೆಗೆ ತಂದು ಹಣಕಾಸು ಸಚಿವರನ್ನಾಗಿ ಮಾಡಲಾಗಿದೆ' ಎಂದು ಲೇವಡಿ ಮಾಡಿದರು.  

ತಾಕತ್ತಿದ್ದರೆ ಮುಂಬೈನಲ್ಲಿ ನನ್ನ ವಿರುದ್ಧ ಸ್ಪಧರ್ಿಸಿ ಎಂದು ಗೋಯಲ್ ಅವರು ಖಗರ್ೆಗೆ ಸವಾಲಿನ ತಿರುಗೇಟು ನೀಡಿದರು. 

ಇದೇ ವೇಳೆ ರಾಫೆಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಮಲ್ಲಿಕಾಜರ್ುನ್ ಖಗರ್ೆ ಹಾಗೂ ಇತರೆ ಕಾಂಗ್ರೆಸ್ ನಾಯಕರು, ರಾಫೆಲ್ ಡೀಲ್ ಅನ್ನು ಜಂಟಿ ಸದನ ಸಮಿತಿ(ಜೆಪಿಸಿ) ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.