ಸರ್ಕಾರದ ಯೋಜನೆಗಳ ಕುರಿತಾಗಿ ಪ್ರತಿಯೊಬ್ಬರಿಗೂ ಮಾಹಿತಿ ನೀಡಿ: ಗ್ರಾಮದ ಮುಖಂಡರಾದ ಗಂಗಮ್ಮ

ಗದಗ 26: ಸರ್ಕಾರದ ಯೋಜನೆಗಳ ಬಗೆಗೆ ವಿದ್ಯಾರ್ಥಿಗಳು, ಯುವಕರು ತಿಳಿದುಕೊಂಡು ತಮ್ಮ ಮನೆಯ ಸದಸ್ಯರಿಗೆ ಯೋಜನೆಯ ಕುರಿತಾಗಿರುವ ಮಾಹಿತಿಯನ್ನು ನೀಡಬೇಕು ಎಂದು ಗ್ರಾಮದ ಮುಖಂಡರಾದ ಗಂಗಮ್ಮ ನಿಂಗನಾಯಕರ ಹೇಳಿದರು. 

   ಗದಗ ತಾಲೂಕಿನ ಬೆಳವೂಡ ಗ್ರಾಮದ ಮಾರುತಿ ದೇವಸ್ಥಾನದಲ್ಲಿ  ವಾರ್ತಾ  ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ಜಾನಪದ ಸಂಗೀತ ಮತ್ತು ಬೀದಿ ನಾಟಕದ ಮೂಲಕ ಸರ್ಕಾರದ ಯೋಜನೆಯ ಕುರಿತು ಜನ ಜಾಗೃತಿ ಮೂಡಿಸುವ ಕ್ಷೇತ್ರ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

    ಮಲಪ್ರಭಾ ಸಾಂಸ್ಕೃತಿಕ ಕಲಾ ತಂಡ ಕೊಣ್ಣುರು ಬೀದಿ ನಾಟಕ ಮತ್ತು ಗಾನತರಂಗ ಸಾಂಸ್ಕೃತಿಕ ಸಂಸ್ಥೆ ಅಸುಂಡಿ ಜಾನಪದ ಸಂಗೀತ ತಂಡದವರು ರಾಜ್ಯ ಸಕರ್ಾರ ನೇಕಾರ ಮತ್ತು ಮೀನುಗಾರರ ಸಾಲಮನ್ನಾ, ರೈತ ಸಮ್ಮಾನ ಯೋಜನೆಯ ಫಲಾನುಭವಿಗಳಿಗೆ ವಾಷರ್ಿಕ ಹೆಚ್ಚುವರಿ 4 ಸಾವಿರ ರೂ. ನೀಡುತ್ತಿರುವ ಸೌಲಭ್ಯದ ಯೋಜನೆ ಸೇರಿದಂತೆ ಪ್ರತಿಗ್ರಾಮದ ಸ್ವಚ್ಛತೆ ಹಾಗೂ ಸರಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು.

  ಗ್ರಾಮದ ಮುಖಂಡರಾದ ಸಂಗನಗೌಡ ಹೊಂಬಾಳ, ಭೀಮನಗೌಡ ಕಲ್ಲನಗೌಡ್ರ, ಕರಬಸಪ್ಪ ಬಾಗಲಿ, ಶ್ರೀಕಾಂತ ಲಿಂಗನಾಯಕರ, ರೇಣವ್ವ ಬಾರಿಕಾರ ಹಾಗೂ ವಾತರ್ಾ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಮತ್ತು ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು