ಬಳ್ಳಾರಿ,ಮೇ 27: ಹೋಂ ಕ್ವಾರಂಟೈನ್ನಲ್ಲಿರುವವರ ಮೇಲೆ ಜಿಲ್ಲಾಡಳಿತವು ತೀವ್ರ ನಿಗಾವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಆಗಿರುವ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್.ಶ್ರೀಕರ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೊರೊನಾ ಸ್ಥಿತಿಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೋಂ ಕ್ವಾರಂಟೈನ್ನಲ್ಲಿರುವವರ ಚಲನವಲನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಂಟ್ರೋಲ್ ರೂಂ ಮೂಲಕ ಪ್ರತಿನಿತ್ಯ ಫಾಲೋಅಫ್ ಮಾಡುತ್ತಿರಬೇಕು, ಆರ್ಆರ್ಟಿ ತಂಡಗಳು ಸದಾ ನಿಗಾವಹಿಸಬೇಕು ಹಾಗೂ ಹೋಂ ಕ್ವಾರಂಟೈನ್ನಲ್ಲಿರುವವರ ಪರಿಶೀಲನೆಗಾಗಿಯೇ ರೂಪಿಸಲಾಗಿರುವ ಆ್ಯಪ್ ಮೂಲಕವು ಅವರನ್ನು ಗಮನಿಸುತ್ತಿರಬೇಕು. ಕಡ್ಡಾಯವಾಗಿ ಅವರು ಹೋಂ ಕ್ವಾರಂಟೈನ್ನಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.
*ಕೋವಿಡ್-19 ಆಸ್ಪತ್ರೆಗಳಲ್ಲಿ 320 ಬೆಡ್ ವ್ಯವಸ್ಥೆ: ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿಸಿ ಕಾರ್ಯನಿರ್ವಹಿಸಲಾಗುತ್ತಿದ್ದು, 180 ಆಕ್ಸಿಜನ್ ಬೆಡ್, 30 ಐಎಸಿಯು ಬೆಡ್ ಸೇರಿದಂತೆ 210 ಬೆಡ್ ಸಾಮಥ್ರ್ಯ ಹೊಂದಿದೆ ಹಾಗೂ ತೋರಣಗಲ್ಲುವಿನಲ್ಲಿರುವ ಸಂಜೀವಿನಿ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಕಾಯ್ದರಿಸಿಲಾಗಿದ್ದು 94 ನಾರ್ಮಲ್ ಬೆಡ್ ಹಾಗೂ 16 ಐಸಿಯು ಬೆಡ್ ವ್ಯವಸ್ಥೆ ಸೇರಿದಂತೆ 110 ಬೆಡ್ ಸಾಮಥ್ರ್ಯ ಹೊಂದಿದೆ ಎಂದು ಜಿಲ್ಲಾಧಿಕಾರಿ ನಕುಲ್ ಅವರು ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಬಳ್ಳಾರಿಯ ಟಿಬಿ ಸ್ಯಾನಿಟೋರಿಯಂ, ಡೆಂಟಲ್ ಕಾಲೇಜು, ಹಳೆ ವಿಮ್ಸ್ ನಿದರ್ೇಶಕರ ಕಚೇರಿ, ತೋರಣಗಲ್ಲುವಿನ ಒಪಿಜೆ ಜಿಂದಾಲ್ ಕೇಂದ್ರ ಸೇರಿದಂತೆ 4 ಕೋವಿಡ್ ಆರೋಗ್ಯ ಕೇಂದ್ರಗಳನ್ನು ಕಾಯ್ದರಿಸಿಲಾಗಿದ್ದು 457 ಬೆಡ್ಗಳ ವ್ಯವಸ್ಥೆ ಇದೆ ಎಂದು ವಿವರಿಸಿದ ಅವರು ಎನ್ಎಂಡಿಸಿ ನೀಡಲಾದ 75 ಲಕ್ಷ ರೂ. ಹಾಗೂ ಜಿಲ್ಲಾ ಖನಿಜ ನಿಧಿಯಿಂದ ಕೆಲವೊಂದಿಷ್ಟು ಹಣವನ್ನು ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್ನಲ್ಲಿ ಕೋವಿಡ್ ಸಂಬಂಧಿತ ವೈದ್ಯಕೀಯ ಉಪಕರಣಗಳಿಗೆ ಖಚರ್ು ಮಾಡಲಾಗಿದೆ ಎಂದರು.
*7198 ವಲಸೆ ಕಾಮರ್ಿಕರು ತವರೂರಿಗೆ: ಬಳ್ಳಾರಿ ಜಿಲ್ಲೆಯಿಂದ ವಿವಿಧ ರಾಜ್ಯಗಳಿಗೆ 7198 ವಲಸೆ ಕಾಮರ್ಿಕರು/ಇತರೆ ವ್ಯಕ್ತಿಗಳು ಶ್ರಮಿಕ ರೈಲಿನ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ವಿವರಿಸಿದರು.
ಬಿಹಾರ, ಉತ್ತರಪ್ರದೇಶ, ಜಾರ್ಖಂಡ್, ಛತ್ತಿಸಗಡ್, ಮಧ್ಯಪ್ರದೇಶದ ವಲಸೆ ಕಾಮರ್ಿಕರಿಗೆ ನಮ್ಮ ಜಿಲ್ಲೆಯ ಹೊಸಪೇಟೆ ಹಾಗೂ ಬಳ್ಳಾರಿ ರೈಲು ನಿಲ್ದಾಣದ ಮೂಲಕ ಹಾಗೂ ಬಳ್ಳಾರಿಯಿಂದ ಬಸ್ ಮೂಲಕ ಕರೆದಯಕೊಂಡು ಬೆಂಗಳೂರು, ಕಲಬುಗರ್ಿ, ಹುಬ್ಬಳ್ಳಿ ರೈಲು ನಿಲ್ದಾಣದ ಮೂಲಕವೂ ಕೆಲ ವಲಸಿಗರನ್ನು ಕಳುಹಿಸಿಕೊಡಲಾಗಿದೆ ಎಂದು ವಿವರಿಸಿದ ಅವರು, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ ವಲಸೆ ಕಾಮರ್ಿಕರು ನಮ್ಮ ರಾಜ್ಯದಲ್ಲಿದ್ದು, ಅವರನ್ನು ಕಳುಹಿಸಿಕೊಡಬೇಕಿದೆ. ವಲಸೆ ಕಾಮರ್ಿಕರನ್ನು ಕಳುಹಿಸಿಕೊಡುವುದಕ್ಕಿಂತ ಮುಂಚೆ ಅವರ ಆರೋಗ್ಯ ತಪಾಸಣೆ ಮಾಡಿ ಅತ್ಯಂತ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ ಎಂದರು.
*ರ್ಯಾಪಿಡ್ ರೆಸ್ಪಾನ್ಸ್ ತಂಡಗಳಿಂದ ವೈದ್ಯರನ್ನು ಕೈಬಿಟ್ಟು ಪೊಲೀಸ್,ಕಂದಾಯ ಸಿಬ್ಬಂದಿ ನಿಯೋಜನೆ: ಸದ್ಯ ರ್ಯಾಪಿಡ್ ರೆಸ್ಪಾನ್ಸ್ ತಂಡಗಳಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿರುವುದನ್ನು ಜಿಲ್ಲಾಧಿಕಾರಿ ನಕುಲ್ ಅವರು ಗಮನಕ್ಕೆ ತರುತ್ತಲೇ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಎಂ.ಎಸ್.ಶ್ರೀಕರ್ ಅವರು ಆರ್ಆರ್ಟಿಗಳಿಂದ ವೈದ್ಯರನ್ನು ಕೈಬಿಟ್ಟು ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಬೇಕು ಮತ್ತು ಅವರ ಬದಲಿಗೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳು ಸಮ್ಮತಿಸಿ ಗುರುವಾರ ನಡೆಯಲಿರುವ ಜಿಲ್ಲಾ ಟಾಸ್ಕ್ಫೋಸರ್್ ಸಮಿತಿ ಸಭೆಯಲ್ಲಿ ನಿಧರ್ಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿರುವವರನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ(ಎಸ್ಎಂಎಸ್) ಕುರಿತು ಕಡ್ಡಾಯವಾಗಿ ಹಾಗೂ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಎಂ.ಎಸ್.ಶ್ರೀಕರ್ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್, ಪ್ರೊಬೆಷನರಿ ಐಎಎಸ್ ಈಶ್ವರ್ ಕಾಂಡೂ, ವಿಮ್ಸ್ ನಿದರ್ೇಶಕ ಡಾ.ದೇವಾನಂದ, ಡಿಎಚ್ಒ ಡಾ.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ, ವಿಮ್ಸ್ ಅಧೀಕ್ಷಕ ಮರಿರಾಜ್, ಜಿಲ್ಲಾ ಸವರ್ೇಕ್ಷಣಾಧಿಕಾರಿ ಡಾ.ಮರಿಯಂಬಿ ಸೇರಿದಂತೆ ಇನ್ನೀತರರು ಇದ್ದರು.