ಮಾಂಜರಿ, 16: ಸತ್ಯ-ಅಸತ್ಯ, ಧರ್ಮ-ಅಧರ್ಮ, ನ್ಯಾಯ-ಅನ್ಯಾಯ, ಪವಿತ್ರ-ಅಪವಿತ್ರ, ಒಳ್ಳೆಯದು-ಕೆಟ್ಟದ್ದನ್ನು ಬೇರಿ್ಡಸುವುದೇ ಅಧ್ಯಾತ್ಮ. ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವವರು ಪರಮಾತ್ಮನಿಗೆ ಸಮೀಪವಿರುತ್ತಾರೆ. ಅದರಿಂದ ಪರಮಾತ್ಮನ ಪ್ರೀತಿ ಗಳಿಸಲು ಸಾಧ್ಯವಿದೆ ಮಾನವನು ಬದುಕುವಾಗ ಯಾವುದೇ ಸರಕಾರಿ ಸೇವೆಯಲ್ಲಿ ಅಪೇಕ್ಷೆ ಇಟ್ಟು ಮಾಡಿದರೆ ಅದು ಸಾಧ್ಯವಾಗುತ್ತಿಲ್ಲ ಯಾವುದೇ ಮನುಷ್ಯ ತಮ್ಮ ನಿವೃತ್ತಿ ವಯೋಮಾನದವರಿಗೆ ಮಾನವನ ಉದ್ಧಾರಕ್ಕಾಗಿ ಮಾಡದೇ ಕಾರ್ಯ ನಿಜವಾದ ಕಾರ್ಯ ಆದ್ದರಿಂದ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ್ದರೆ ಕೂಡ ಇದು ಗುರು ಭಕ್ತಿ ಆಧ್ಯಾತ್ಮ ಮತ್ತು ಪವಿತ್ರತೆ ಆಗುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳು ಹಾಗೂ ಯಡೂರಿನ ಕಾಡ ಸಿದ್ದೇಶ್ವರ ಸಂಸ್ಥಾನ ಮಠ ಮತ್ತು ವೀರಭದ್ರ ದೇವರ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಡಾ ಚನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳು ಅಭಿಪ್ರಾಯಪಟ್ಟರು.
ಅವರು ಇಂದು ಬುಧವಾರರಂದು ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿಯ ಕೆಎಇ ತಾಂತ್ರಿಕ ವಿಶ್ವವಿದ್ಯಾಲಯದ ಶಿಕ್ಷಕರು ಹಾಗೂ ಶ್ರೀ ವೀರಭದ್ರ ದೇವಸ್ಥಾನ ಮತ್ತು ಕಾಡಸಿದ್ದೇಶ್ವರ ಮಠ ಯಡೂರಿನ ಸೈಟ್ ಇಂಚಾರ್ಜರಾದ್ ಶ್ರೀ ಸುನಿಲ್ ಬಾಬುರಾವ್ ಬಿರದೆ ಇವರ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು ಈ ಸಮಾರಂಭಕ್ಕೆ ದಿವ್ಯ ಸಮ್ಮುಖ್ ಜಮಖಂಡಿಯ ಗೌರಿಶಂಕರ್ ಶಿವಾಚಾರ್ಯ ಸ್ವಾಮೀಜಿಗಳು ಬನಹಟ್ಟಿಯ ಶರಣಬಸವ ಶಿವಾಚಾರ್ಯ ಸ್ವಾಮೀಜಿಗಳು ನೂಲಿನ ಗುರು ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಯ ಅತಿಥಿಯಾಗಿ ಮಾತನಾಡಿ, ವಹಿಸಿದ್ದರು ಮುಖ್ಯ ಅತಿಥಿಯಾಗಿ ಚೀಕೂಡಿಯ ಉಪವಿಭಾಗೀಯ ಅಧಿಕಾರಿಗಳಾದ ಸುಭಾಷ್ ಸಂಪಗಾವಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ಅಧ್ಯಕ್ಷರಾದ ಸದಾನಂದ ದಂಗನ್ನವರ್ ಸಿಬಿ ಕೆ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಜಿತ್ ರಾವ್ ದೇಸಾಯಿ ಶ್ರೀಕಾಂತ್ ಉಮಾರಾಣಿ ದಾದು ಕಾಗವಾಡೆ ಸಂಜಯ್ ಪಾಟೀಲ್ ಅಜಯ್ ಸೂರ್ಯವಂಶಿ ಗಣ್ಣವರ ಗಣ್ಣವರ ಕೆ ವಿ ತಾಂತ್ರಿಕ ವಿಶ್ವವಿದ್ಯಾಲಯ ಶಿಕ್ಷಕರಾದ ಎಂ ಆರ್ ಪಾಟೀಲ್ ಶ್ರೀಮತಿ ರಾಜೇಶ್ವರಿ ಕವಟಿಗಿಮಠ್ ಹಾಜರಿದ್ದರು ಧರ್ಮ ಮತ್ತು ದೇಶ ಉಳಿಯಬೇ ಕಾದರೆ ಜಾಗರೂಕರಾಗಿರಬೇಕು. ಧರ್ಮದಆಚರಣೆ ಮಾಡಿದರೆ ಧರ್ಮ ಕಾಪಾಡುತ್ತದೆ ಕ್ಷೇತ್ರ ಯಡೂರಿನ ಅಭಿವೃದ್ಧಿ ಕಾರ್ಯದಲ್ಲಿ ಹುಬ್ಬಳ್ಳಿಯ ಬಿ ವಿ ಬಿ ತಾಂತ್ರಿಕ ಮಹಾವಿದ್ಯಾಲಯದ
ನಿವೃತ್ತ ಕುಲಪತಿ ಅಶೋಕ್ ಶೆಟ್ಟರ್ ಹಾಗೂ ಯದುರಿನ ಅಭಿವೃದ್ಧಿ ಕಾರ್ಯದ ಇನ್ಸೈಡ್ ಇಂಚರದ ಸುನಿಲ್ ಬೀರದೆ ಮತ್ತು ಇನ್ನಿತರ ಅಭಿಯಂತರ ಕಾರ್ಯ ಶ್ಲಾಘನೀಯ ವಾಗಿದೆ ಎಂದು ಜಗದ್ಗುರುಗಳು ಹೇಳಿದರು
ಈ ವೇಳೆ ಚಿಕ್ಕೋಡಿಯ ಉಪವಿಭಾಗೀಯ ಅಧಿಕಾರಿಗಳಾದ ಸುಭಾಷ್ ಸಂಪಗಾವಿ ಮಾತನಾಡಿ ಜಗದ್ಗುರುಗಳು ಸಂತರು ಮತ್ತು ಮಹಾತ್ಮರು ವೈಭವದಿಂದ ಬದುಕಲಿಲ್ಲ. ಜನಸಾಮಾನ್ಯರ ಹಾಗೆ ಸರಳವಾಗಿ ಜೀವಿಸಿದರು. ತಮ್ಮ ನಡೆ ನುಡಿಗಳಿಂದ ಅವರುಇಂದಿಗೂಭಕ್ತವೃಂದಕ್ಕೆ ಆಶೀರ್ವದಿಸುತ್ತಿರುವುದು ಸಂತಸದ ವಿಷಯ ಎಂದರು. ಭಕ್ತರಿಗೆ ನಿತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆ, ಸಂದೇಹ, ಅನುಮಾನಗಳನ್ನು ಪರಿಹರಿಸಿ, ಅವರನ್ನು ಭಗವದ್ಭಕ್ತಿಯತ್ತ ಸೆಳೆದು, ಅವರನ್ನು ಮುಕ್ತಿ ಮಾರ್ಗದಡೆಗೆ ಕರೆದೊಯ್ಯುವುದೇ ಮಹಾತ್ಮರ ಉದ್ದೇಶವಾಗಿರುತ್ತದೆ ಎಂದರು
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ನಿಗಮದ ಮಾಜಿ ಅಧ್ಯಕ್ಷರಾದ ಸದಾನಂದ ಡಂಗಣವರ್ ಮಾತನಾಡಿ ಸಾಧು ಸಂತರು, ಮಠಾಧೀಶರು, ಮಾತೆಯರು ವ್ಯಾಪಕ ಚಿಂತನ ಮಂಥನ ನಡೆಸಿದರು. ಜಗತ್ತೆಲ್ಲವೂ ಈಶ್ವರಮಯ ಸತ್ಯ ಎಂಬುದನ್ನು ತಿಳಿದು, ನಾನೆಂಬ ಅಹಂಕಾರವನ್ನು ತ್ಯಜಿಸಬೇಕೆಂದು ನೆರೆದ ಭಕ್ತವೃಂದಕ್ಕೆ ಕರೆ ನೀಡಿದರು. ನಾನು, ಇದು ನನ್ನದು, ನನಗೆ ಸೇರಿದ್ದು ಎಂಬ ಪೊಳ್ಳು ಅನಿಸಿಕೆಯನ್ನು ತೊಡೆದು ಹಾಕಿ. ಎಲ್ಲದರಲ್ಲೂ ಭಗವಂತನೇ ಇದ್ದಾನೆ ಎಂಬ ಅರಿವನ್ನು ಪಡೆಯಬೇಕು ಎಂದರು. ಸಾಮಾನ್ಯ ಜನರು ದೋಷಪೂರಿತ ಕನ್ನಡಕ ಧರಿಸಿ ಜಗತ್ತನ್ನು ನೋಡುವುದರಿಂದಲೇ ಈಶ್ವರನು ಎಲ್ಲೆಲ್ಲೂ ಇದ್ದಾನೆ ಎಂಬುದು ಕಾಣುವುದಿಲ್ಲ, ಸಾಧು ಸಂತರು ಜನರಿಗೆ ಸತ್ಯದ ದರ್ಶನ ಮಾಡಿಸುತ್ತಾರೆ, ಹಾಗಾಗಿ ಸುಳ್ಳಿನ ಮಾರ್ಗವನ್ನು ಬಿಟ್ಟು, ಸತ್ಯದ ದಾರಿಯನ್ನು ಹಿಡಿಯಲುಸತ್ಸಂಗಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು' ಹೇಳಿದರು
ಈ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಮಂಜುನಾಥ್ ಸಾಲಿಮಠ ನಿವೃತ್ ನ್ಯಾಯಾಧೀಶರಾದ ಶ್ರೀ ಹಿರೇಮಠ ಈರಗೌಡ ಪಾಟೀಲ್ ನರಸಗೌಡ ಕಮತೆ ನರಸಗೌಡ ಪಾಟೀಲ್ ಚೆನ್ನಪ್ಪ ಹಕಾರೆ ಎಸ್‌ಎಂ ಮಠಪತಿ ಅಳುವಯ್ಯ ಅರಳಿಕಟ್ಟಿಮಠ್ ಮನೋಹರ್ ಪುಟಾಣಿ ಮಲ್ಲಯ್ಯ ಜಡೆ ಮುಕುಂದ ಜಾದವ್ ಸಚಿನ್ ಪಾಟೀಲ್ ಈರಣ್ಣ ಮಠಪತಿ ರಾಹುಲ್ ದೇಸಾಯಿ ಶಿವಾನಂದ ಕರೋಶಿ ಪ್ರಶಾಂತ್ ಉಮರಾನೆ ರಾಜು ಹಕಾರೆ ಈರಣ್ಣ ಮಠಪತಿ ಹಾಗೂ ಇನ್ನಿತರರು ಮತ್ತು ಸುನಿಲ್ ಬಿರದೆ ಅಭಿಮಾನಿ ಬಳಗ ಹಾಜರಿದ್ದರು ಶಿಕ್ಷಕ ಮಲ್ಲಪ್ಪ ಸಿಂಧೂರ್ ಸ್ವಾಗತಿಸಿ ನಿ ಸಿ ಜಿ ಮಠಪತಿ ನಿರೂಪಿಸಿ ವಂದಿಸಿದರು ಇದೆ ವೇಳೆ ನಿವೃತ್ತಿ ಹೊಂದಿರುವ ಸುನಿಲ್ ಬಿರದೆ ಇವರಿಗೆ ಕಾಡಸಿದ್ದೇಶ್ವರ ಸಂಸ್ಥಾನ ಮಠದಿಂದ ಜಗದ್ಗುರುಗಳ ಹಸ್ತದಿಂದ ಕಾಯಕಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು