ಇಂಡಿ 20: ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಕವಿ ಸರ್ವಜ್ಞ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಬೆಳಿಗ್ಗೆ ಹತ್ತು ಗಂಟೆಗೆ ಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಪೂಜೆ ಸಲ್ಲಿಸಿ ಮಾತನಾಡಿ ಕವಿ ಸರ್ವಜ್ಞ ಅವರು ವಾಸ್ತವಾಂಶಗಳನ್ನು ತಮ್ಮ ವಚನಗಳ ಮೂಲಕವೇ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದ ಸರ್ವಜ್ಞರು 16ನೇ ಶತಮಾನದ ಅತ್ಯಂತ ಜನಪ್ರಿಯ ಕನ್ನಡದ ಕವಿ. ಒಟ್ಟು ಸುಮಾರು 1,000 ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು.ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ ಎಂದು ಹೇಳಿದರು.
ಗ್ರೇಡ್ 2 ತಹಶೀಲ್ದಾರ ಧನಪಾಲಶೇಟ್ಟಿ ದೇವೂರ, ಶೀರಸದಾರ ಬಸವರಾಜ ರಾವೂರ, ಎಸ್ ಆರ್ ಮುಜಗೊಂಡ ಬಳ್ಳೊಳ್ಳಿ ಕಂದಾಯ ನೀರೀಕ್ಷಕರಾದ ಬಸವರಾಜ ಅವಜಿ, ಇಂಡಿ ಕಂದಾಯ ನೀರೀಕ್ಷಕರಾದ ಎಚ್ ಎಚ್ ಗುನ್ನಾಪೂರ, ಗ್ರಾಮ ಆಡಳಿತ ಅಧಿಕಾರಿಗಳಾದ ಮಾಹಾತೇಶ ಗುರುಬಟ್ಟಿ ಸಿದ್ದು ಪೂಜಾರಿ ಪ್ರಕಾಶ್ ಚವಡಿಹಾಳ ಮಹೇಶ ರಾಠೋಡ,ಎಂ ಪಿ ಕೊಡತೆ, ಹಾಗೂ ಶಿವಾನಂದ ಕುಂಬಾರ,ದೇವಿಂದ್ರ ಕುಂಬಾರ, ಸೋಮು ನಿಂಬರಿಮಠ, ಹುಚ್ಚಪ್ಪ ತಳವಾರ, ಹಾಗೂ ಕುಂಬಾರ ಸಮಾಜದ ಮುಖಂಡರು. ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.