ಲೋಕದರ್ಶನ ವರದಿ
ಬೆಟಗೇರಿ 11: ಅಭಿವೃದ್ಧಿಗಾಗಿ ಸಂಸ್ಥಾನದ ಸೇವಕರ ಸೇವಕನಾಗಿ ದುಡಿಯುತ್ತೇನೆ. ಈ ನಾಡಿನಲ್ಲಿ ಜನ್ಮ ತಳೆದ ನನಗೂ ಕೌಜಲಗಿ ದೇಸಗತಿಯ ಕುರಿತು ಅಭಿಮಾನವಿದೆ. ಕೌಜಲಗಿ ನಾಡಿನ ಶ್ರೇಯಸ್ಸಿಗೆ ಮತದ ರಾಜಕಾರಣ ಬದಿಗೊತ್ತಿ ನಾಡ ಕಟ್ಟುವ ಕೆಲಸ ಮಾಡಿ ಊರಿನ ಋಣ ತೀರಿಸುವ ಕಾರ್ಯ ಮಾಡೋಣವೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ನಾಡಾಭಿಮಾನಿಗಳಿಗೆ ಕರೆ ನೀಡಿದರು.
ಸಮೀಪದ ಕೌಜಲಗಿ ಪಟ್ಟಣದ ಅಂಬರೀಷ ವರ್ಮ ದೇಸಾಯಿ ರಾಜ್ಯಾಂಗಣದಲ್ಲಿ ಇತ್ತೀಚೆಗೆ ಜರುಗಿದ ಕೌಜಲಗಿ ದೇಸಗತಿ ದೊರೆ ಸರ್ದಾರ ಭೀಮಪ್ಪ ಗಿರಿಯಪ್ಪ ದೇಸಾಯಿ ಅವರ 125 ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮುಖಂಡ ಎಂ.ಆರ್.ಭೋವಿ ಮಾತನಾಡಿ, ಬಿ.ಜಿ.ದೇಸಾಯಿ ಆಧುನಿಕ ಕಾಲದ ಧರ್ಮರಾಯನಾಗಿದ್ದು (ರಮಲ) ಭವಿಷತ್ಕಾಲದ ವಿದ್ಯೆಯನ್ನು ಬಲ್ಲವರಾಗಿದ್ದರು. ಶಿಕ್ಷಣ ಪ್ರೇಮಿಗಳಾಗಿದ್ದ ದೇಸಾಯಿ ಕೌಜಲಗಿಯಲ್ಲಿ 1954 ರಲ್ಲಿ ಪ್ರೌಢ ಶಾಲೆ ಸ್ಥಾಪನೆಗೆ ವಾಡೆಯನ್ನೆ ದಾನವಾಗಿ ನೀಡಿದ ದಾನಶೂರರಾಗಿದ್ದಾರೆಂದು ಬಿ.ಜಿ.ದೇಸಾಯಿ ಅವರ ಸರ್ವ ಕಾರ್ಯಗಳನ್ನು ನೆನೆದರು.
ಮುಖಂಡ ಅರವಿಂದ ದಳವಾಯಿ ಮಾತನಾಡಿ, ಸಂಸ್ಥಾನದ ಜನಪ್ರಿಯ ದೊರೆ ಭೀಮಪ್ಪ ದೇಸಾಯಿಯವರನ್ನು ಪ್ರಜೆಗಳು ಪ್ರೀತಿಯಿಂದ ಗಿಣಿ ಮಹಾರಾಜರೆಂದು ಕರೆಯುತ್ತಿದ್ದರು. ಬೇಡಿದವರಿಗೆ ಬಂಗಾರದ ನಾಣ್ಯಗಳನ್ನೇ ದಾನ ಮಾಡುತ್ತಿದ್ದರು. ಅವರ ಮಗ ಅಂಬರೀಷವರ್ಮ ದೇಸಾಯಿ ಆಧ್ಯಾತ್ಮ ಜೀವಿಗಳಾಗಿದ್ದರೆಂದು ಹೇಳಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ದೇಸಾಯಿ ಕುಟುಂಬಸ್ಥರಾದ ಬೆಂಗಳೂರಿನ ರಾಮಮೂರ್ತಿ ಅವರು ಮಾತನಾಡಿ, ಕೌಜಲಗಿ ದೇಸಾಯಿಣಿ ಶ್ರೀಮತಿ ಸುಶೀಲಬಾಯಿ ದೇಸಾಯಿ ಅವರು ಕೌಜಲಗಿ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಅದು ನನ್ನ ಪೂರ್ವಜರು ಕಟ್ಟಿದ ಸಂಸ್ಥಾನ. ಸ್ಥಳೀಯರು ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆಂದು ತಿಳಿಸಿದರು.
ಕೇಶವ ಭೋವಿ, ಪ್ರೊ. ಎಂ.ಬಿ. ಕುದರಿ, ಶಂಕರ ಜೋತೆನ್ನವರ, ಪ್ರಕಾಶ ಕೋಟಿನತೋಟ ಮಾತನಾಡಿದರು. ಮುಧೋಳದ ಎಸ್.ಸಿ.ತೋಳಿಮಟ್ಟಿ ಆಧ್ಯಾತ್ಮಿಕ ಪ್ರವಚನ ನೀಡಿದರು. ಬಿ.ಜಿ.ದೇಸಾಯಿ ಸ್ಮರಣೋತ್ಸವ ನಿಮಿತ್ತ ಬಡವರಿಗೆ ಬಟ್ಟೆ, ಹಣ್ಣು-ಹಂಪಲಗಳನ್ನು ವಿತರಿಸಲಾಯಿತು. ರಾಜ್ಯಾಂಗಣದಲ್ಲಿ ಸ್ಥಾಪಿಸಿದ ಬಿ.ಜಿ.ದೇಸಾಯಿ ಕಂಚಿನ ಪ್ರತಿಮೆಗೆ ಹಿರಿಯರು ಪೂಜೆ ಸಲ್ಲಿಸಿದರು.
ಶಿವಾನಂದ ಲೋಕನ್ನವರ, ಯಾದವಾಡ ಜಿ.ಪಂ.ಸದಸ್ಯ ಗೋವಿಂದ ಕೊಪ್ಪದ, ನೀಲಪ್ಪ ಕೇವಟಿ, ಅಡಿವೆಪ್ಪ ದಳವಾಯಿ, ಎ.ಎಂ.ಮೋಡಿ, ಗ್ರಾ.ಪಂ.ಅಧ್ಯಕ್ಷ ಜಕೀರಸಾಬ ಜಮಾದಾರ, ಯಲ್ಲಪ್ಪಗೌಡ ನಾಯಿಕ, ಕೃಷ್ಣಶರ್ಮ ಹವಾಲ್ದಾರ, ರಮೇಶ, ಬಸವರಾಜ ಲೋಕನ್ನವರ, ಸುಭಾಸ ಒಂಟಗೋಡಿ, ಬಸವರಾಜ ಜೋಗಿ ಬಸಪ್ಪ ದಳವಾಯಿ ಶಿವಾನಂದ ಕೋಟಿ, ಭೀಮಶೆಪ್ಪ ಪೂಜೇರಿ ಸೇರಿದಂತೆ ಇತರರು ಇದ್ದರು.