ಮುಂಬಯಿ, ಏ 29ಬಾಲಿವುಡ್ ಬಾರ್ಬಿ ಗರ್ಲ್ ಕತ್ರಿನಾ ಕೈಫ್, ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ಜೊತೆ ನರ್ತಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಕತ್ರಿನಾ ಕೈಫ್, ಪ್ರಖ್ಯಾತ ಟಾಕ್ ಶೋವೊಂದರಲ್ಲಿ ಅನಿತಾ ಶ್ರಾಫ್ ಅಡ್ಜಾನಿಯಾ ಜೊತೆ ಮಾತನಾಡಿದ್ದಾರೆ.
ತಾವ ನಟಿಯೊಂದಿಗೆ ಐಟಂ ಸಾಂಗ್ ವೊಂದರಲ್ಲಿ ತೆರೆ ಹಂಚಿಕೊಳ್ಳಲು ಕತ್ರಿನಾ ಇಚ್ಛಿಸುತ್ತಾರೆಂಬ ಅನಿತಾ ಪ್ರಶ್ನೆಗೆ, ನಟಿ ದೀಪಿಕಾ ಪಡುಕೋಣೆ ಎಂದು ಕತ್ರಿನಾ ಉತ್ತರಿಸಿದ್ದಾರೆ.
ದೀಪಿಕಾ ಜೊತೆ ನರ್ತಿಸುವ ಅನುಭವ ಅದ್ಭುತವಾಗಿರಲಿದೆ. ಅವರು ಉತ್ತಮ ನೃತ್ಯಗಾತರ್ಿಯಾಗಿದ್ದಾರೆ. ನರ್ತಿಸುವ ತಮ್ಮದೇ ಆದ ವಿಭಿನ್ನ ಭಂಗಿಯಲ್ಲಿ ಬಹು ಸುಂದರವಾಗಿ ಕಾಣುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ತಾವೂ ಯಾವ ಕಪೂರ್ ತಾರೆಯರ ಜೊತೆ ನಟಿಸಲು ಇಚ್ಛಿಸುತ್ತೀರಾ ಎಂದು ಅನಿತಾ ಪ್ರಶ್ನೆಗೆ ಉತ್ತರಿಸಿದ ಕತ್ರಿನಾ, ಕರೀನಾ ಕಪೂರ್ ಅವರೊಂದಿಗೆ ನಟಿಸುವಾಸೆ ಇದೆ. ಅವರೊಬ್ಬ ಅದ್ಭುತ ನಟಿಯಾಗಿದ್ದಾರೆ. ನೋಡಲು ತುಂಬಾ ಸುಂದರವಾಗಿದ್ದಾರೆ ಎಂದು ತಿಳಿಸಿದ್ದಾರೆ.