ಕಸ್ತೂರಬಾ ವೈದ್ಯಕೀಯ ಸಂಸ್ಥೆ: ಸಾರ್ವಜನಿಕರು ಚಿಕಿತ್ಸೆಯ ಪ್ರಯೋಜನ ಪಡೆದುಕೊಳ್ಳಿ: ಶ್ರೀನಿವಾಸ್

ಬ್ಯಾಡಗಿ: ಮಣಿಪಾಲದಲ್ಲಿರುವ ಕಸ್ತೂರಬಾ ವೈದ್ಯಕೀಯ ಸಂಸ್ಥೆಯು ಚಿಕಿತ್ಸೆಯನ್ನು ನೀಡುವ ವಿಚಾರದಲ್ಲಿ ಜನರ ವಿಶ್ವಾಸ ಗಳಿಸಿದೆ, ಇದೀಗ ಸೇವೆಯನ್ನು ಬಡ ಕುಟುಂಬಗಳಿಗೂ ವಿಸ್ತರಿಸಲು ಮುಂದಾಗಿರುವ ಸಂಸ್ಥೆಯು ಪ್ರತಿ ಕುಟಂಬಕ್ಕೂ ಹೆಲ್ತ ಕಾಡರ್್ಗಳನ್ನು ನೀಡಲು ಮುಂದಾಗಿದ್ದು ತನ್ಮೂಲಕ ವಿಶೇಷ ರಿಯಾಯಿತಿಗಳನ್ನು ನೀಡಲಿದೆ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಡಾ.ಶ್ರೀನಿವಾಸ್ ಕರೆ ನೀಡಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಶೇ.80 ರಷ್ಟು ಬಡವರು ವಾಸಿಸುವಂತಹ ದೇಶ ಹೀಗಾಗಿ ವೈದ್ಯಕೀಯ ಸೇವೆಗಳ ಮೇಲಿನ ವೆಚ್ಚವನ್ನು ಭರಿಸಲಾಗದೇ ಅನಾರೋಗ್ಯದಿಂದ ಬಳಲುತ್ತಿರುವ ಸಾವಿರಾರು ಪ್ರಕರಣಗಳು ಕಾಣ ಸಿಗುತ್ತವೆ ಇವೆಲ್ಲವುಗಳ ದೃಷ್ಟಿಯನ್ನಿಟ್ಟುಕೊಂಡು ಅಂತಹ ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 5 ಆಸ್ಪತ್ರೆಗಳಿಗೆ ಅನ್ವಯವಾಗುವಂತೆ ರಿಯಾಯಿತಿ ದರಗಳನ್ನು ನೀಡಲಾಗಿದೆ ಎಂದರು.

ಸಕರ್ಾರದ ಹೊರೆ ಇಳಿಸುವ ಪ್ರಯತ್ನ: ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಬಡವರಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸುವ ದೃಷ್ಟಿಯಿಂದ, ರಾಷ್ಟ್ರೀಯ ಆರೋಗ್ಯ ಮಿಶನ್ (ಎನ್ಎಚ್ಎಮ್) ಮೂಲಕ ಆರೋಗ್ಯ ಸೇವೆಗಳಿಗೆ ಹಣಕಾಸಿನ ನೆರವು ನೀಡುತ್ತಾ ಬಂದಿದೆ, ಉದ್ದೇಶ ಒಳ್ಳೆಯದೇ ಆಗಿದ್ದರೂ ಸಹ ಸಣ್ಣ ಪ್ರಮಾಣದ ಆರೋಗ್ಯ ಸೇವೆ, ಔಷಧಗಳಿಗೆ ಸಕರ್ಾರದಿಂದ ಹಣ ಪಡೆಯಲು ಸಾಧ್ಯವಿಲ್ಲ ಈ ಹಿನ್ನಲೆಯಲ್ಲಿ ಕಸ್ತೂರಬಾ ಸಂಸ್ಥೆಯು ವಿಶೇಷ ರಿಯಾಯಿತಿಗಳನ್ನು ಪ್ರಕಟಿಸಿದ್ದು ತನ್ಮೂಲಕ ಸಕರ್ಾರದ ಹೊರೆಯನ್ನು ಇಳಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಿದೆ ಎಂದರು.

ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ (ಪೇಡಿಯಾಟ್ರಿಕ್ ಹಾರ್ಟ ಸರ್ಜರಿ) ಸೌಲಭ್ಯವಿದೆ: ಡಾ.ಶೀಕಾಂತ ಮಾತನಾಡಿ, ಕಸ್ತೂರಬಾ ಆಸ್ಪತ್ರೆಯಲ್ಲಿ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಆರಂಭಿಸಿದ್ದು, ರಾಜ್ಯದಲ್ಲಿ ಕೇವಲ ಎರಡನೇ ಆಸ್ತ್ರತ್ರೆಯಾಗಿದೆ, ಅತ್ಯಾಧುನಿಕ (ಹೈಜೆನಿಕ್ ಮಲ್ಟಿ ಸ್ಪೆಷಾಲಿಟಿ) ಚಿಕಿತ್ಸಾ ಸೌಲಭ್ಯಗಳನ್ನು ಆರಂಭಿಸಿರುವ ಕಸ್ತೂರಬಾ ಆಸ್ಪತ್ರೆಯು ಕಡಿಮೆ ದರದಲ್ಲಿ ಬಡವರಿಗೂ ಇದರ ಸೌಲಭ್ಯ ಸಿಗುವಂತೆ ಮಾಡಲಿದೆ ಎಂದರು. 

ಪ್ರಸಕ್ತ ವರ್ಷ 4 ಲಕ್ಷ ಜನರು ಇದರ ವ್ಯಾಪ್ತಿಗೆ: ಕಳೆದ ವರ್ಷದಲ್ಲಿ ಸುಮಾರು ಎರಡೂವರೆ ಲಕ್ಷ ಜನರು ಮಣಿಪಾಲ ಹೆಲ್ತ್ ಮತ್ತು ದಂತ ಆರೋಗ್ಯ ಕಾರ್ಡ ಹೊಂದಿದ್ದು, ಪ್ರಸಕ್ತ ವರ್ಷ 4 ಲಕ್ಷ ಜನರನ್ನು ಇದರ ವ್ಯಾಪ್ತಿಗೆ ತರಲಾಗುವುದು, ಈ ನಿಟ್ಟಿನಲ್ಲಿ ನಮ್ಮೆಲ್ಲ ಡಾಕ್ಟರ್ ಬಳಗವು ರಾಜ್ಯದೆಲ್ಲೆಡೆ ಸಂಚರಿಸಿ ಕಸ್ತೂರಬಾ ಆಸ್ಪತ್ರೆಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಮಾದ್ಯಮಗಳ ಮೂಲಕ ತಿಳಿಸುತ್ತಾ ಬಂದಿದೆ ಎಂದರು.

ಜು.26 ಅಂತಿಮ ದಿನ:ಮಣಿಪಾಲ ಆರೋಗ್ಯ ಕಾರ್ಡ ಮಾಡಿಕೊಳ್ಳಲು ಜು.26 ಅಂತಿಮ ದಿನವಾಗಿದ್ದು ಅಷ್ಟರೊಳಗಾಗಿ ನಿಗದಿತ ಹಣವನ್ನು ತುಂಬಿ ವಿಶೇಷ ರೀಯಾಯಿತಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದ ಅವರು, ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 9731065727 (ಬಿ.ಪಿ.ಚನಗೌಡ್ರ) ಇವರನ್ನು ಸಂಪಕರ್ಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಬಿ.ಪಿ.ಚನ್ನಗೌಡ್ರ, ಮಾಜಿ ಸೈನಿಕ ರಾಜಣ್ಣ ಹೊಸಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.