ನವದೆಹಲಿ 25: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪದೇ ಪದೇ ಸಂಘರ್ಷಗಳು ನಡೆಯುತ್ತಿರುವಾಗಲೇ ಭಾರತ ಮತ್ತು ಪಾಕಿಸ್ತಾನ ಯೋಧರು ಇದೇ ಮೊಟ್ಟಮೊದಲ ಬಾರಿ ಜಂಟಿ ಸಮರಾಭ್ಯಾಸಕ್ಕೆ ಸಜ್ಜಾಗಿದ್ದಾರೆ.
ಕಣಿವೆ ರಾಜ್ಯ ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಹಾಗೂ ಅಂತಾರಾಷ್ಟ್ರೀಯ ಗಡಿ(ಐಬಿ)ಗಳಲ್ಲಿ ಪಾಕಿಸ್ತಾನದಿಂದ ಪುನರಾವತರ್ಿತ ಕದನ ವಿರಾಮಗಳ ಉಲ್ಲಂಘನೆ ಹಾಗೂ ಇಂಥ ಅಪ್ರಚೋದಿತ ದಾಳಿಗಳಿಗೆ ಭಾರತೀಯ ಯೋಧರ ದಿಟ್ಟ ಪ್ರತ್ಯುತ್ತರದ ನಡುವೆಯೇ ಉಭಯ ದೇಶಗಳ ಯೋಧರು ಜಂಟಿಯಾಗಿ ಯುದ್ಧ ತಾಲೀಮು ನಡೆಸಲು ಸಿದ್ದವಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಶಾಂಘೈ ಸಹಕಾರ ಸಂಸ್ಥೆ(ಎಸ್ಸಿಒ) ಆಶ್ರಯದಲ್ಲಿ ರಷ್ಯಾದಲ್ಲಿ ಬಹುರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಸಮರಾಭ್ಯಾಸ ನಡೆಯಲಿದೆ. ಈ ಯುದ್ಧ ತಾಲೀಮು ಕಾಯರ್ಾಚರಣೆಯಲ್ಲಿ ಭಾರತ ಮತ್ತು ಪಾಕಿಸ್ತಾನಿ ಯೋಧರೂ ಸಹ ಭಾಗವಹಿಸಲಿದ್ದಾರೆ. ರಷ್ಯಾದ ಚೆಲಿಯಾಬಿನ್ಕ್ಸ್ ಪ್ರದೇಶದ 255 ಸಂಯುಕ್ತ ಸೇನಾ ವಲಯದಲ್ಲಿ ನಿನ್ನೆ ಈ ಸಮರಾಭ್ಯಾಸಕ್ಕೆ ಅಧಿಕೃತ ಚಾಲನೆ ದೊರೆತಿದೆ.
ಈ ಸಮರಾಭ್ಯಾಸಕ್ಕೆ ಪೀಸ್ ಮಿಷನ್-2018 ಎಂದು ಹೆಸರಿಡಲಾಗಿದೆ. ಭಾರತ ಮತ್ತು ಪಾಕಿಸ್ತಾನವಲ್ಲದೇ, ಚೀನಾ, ರಷ್ಯಾ ಹಾಗೂ ಶಾಂಘೈ ಸಹಕಾರ ಸಂಸ್ಥೆಯ ಇತರ ಸದಸ್ಯ ದೇಶಗಳ ಸೈನಿಕರೂ ಕೂಡ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನಗರ ಪ್ರದೇಶಗಳ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ ಅವರನ್ನು ಸದೆಬಡಿಯಲು ಕೈಗೊಳ್ಳಬೇಕಾದ ಕಾಯರ್ಾಚರಣೆ ತಂತ್ರಗಳ ಬಗ್ಗೆ ಎಸ್ಒಸಿ ಸದಸ್ಯ ದೇಶಗಳ ಸಶಸ್ತ್ರ ಪಡೆಗಳಿಗೆ ಈ ಸಮರಾಭ್ಯಾಸದಲ್ಲಿ ತರಬೇತಿ ನೀಡಲಾಗುವುದು.
ವಿವಿಧ ದೇಶಗಳ ಕಾರ್ಯತಂತ್ರಗಳ ವಿನಿಮಯದೊಂಧಿಗೆ ಜಂಟಿ ಪರಿಸರದಲ್ಲಿ ಈ ವಿಶೇಷ ತರಬೇತಿ ಲಭಿಸಲಿದೆ. ರಷ್ಯಾ ಈ ವಿಶೇಷ ತರಬೇತಿಗಾಗಿ 1,700 ಯೋಧರನ್ನು ನಿಯೋಜಿಸಿದೆ. ಚೀನಾದ 700 ಹಾಗೂ ಭಾರತದ ರಜಪೂತ್ ರೆಜೆಮೆಂಟ್ನ 200 ಸಿಬ್ಬಂದಿ ಇದರಲ್ಲಿ ಭಾಗವಹಿಸಲಿದ್ದಾರೆ.
ಈ ವಿಶೇಷ ತರಬೇತಿಯಲ್ಲಿ ಉಗ್ರರ ದಮನ ಕಾಯರ್ಾಚರಣೆ ವಿಧಾನಗಳ ವಿನಿಮಯ, ನಿಗ್ರಹ ಸಾಮಥ್ರ್ಯ ನಿರ್ವಹಣೆ, ಜಂಟಿ ಕಮಾಂಡ್ ಸ್ಥಾಪನೆ, ಭಯೋತ್ಪಾದಕರನ್ನು ಸದೆ ಬಡಿಯುವ ಅಣಕು ಕಾಯರ್ಾಚರಣೆಗಳು ಹಾಗೂ ಸಂವಾದ-ಪ್ರಾತ್ಯಕ್ಷಿಕೆಗಳು ನಡೆಯಲಿವೆ. ಪೋಟೊ ಇಂಡಿಯಾ ಪಾಕಿಸ್ತಾನ