ಕಾಶ್ಮೀರ: ಬೆಳಗಾವಿ ಯೋಧ ಹುತಾತ್ಮ

ಚಿಕ್ಕೋಡಿ: ಜಮ್ಮು-ಕಾಶ್ಮೀರದ ಗಡಿಯಲ್ಲಿ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಯೋಧ ಚಿಕ್ಕೋಡಿ ತಾಲೂಕಿನ ಬೂದಿಹಾಳ ಗ್ರಾಮದ ಪ್ರಕಾಶ ಪುಂಡಲಿಕ ಜಾಧವ(29) ಹುತಾತ್ಮನಾಗಿದ್ದಾನೆ.

ಜಮ್ಮು-ಕಾಶ್ಮೀರದ ಖುಲಗಾಂವ ಮತ್ತು ಪುಲವಾಮಾ ಗಡಿಯಲ್ಲಿ ಸೋಮವಾರ ರಾತ್ರಿ ಭಾರತೀಯ ಸೇನೆ ಹಾಗೂ ಉಗ್ರರು ನಡುವೆ ಭಾರಿ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಯೋಧ ಬೂದಿಹಾಳದ ಪ್ರಕಾಶ ಜಾಧವ ವೀರಮರಣ ಹೊಂದಿದ್ದಾನೆಂದು ಸೇನೆಯ ಮೂಲಗಳಿಂದ ಪ್ರಕಾಶ ಜಾಧವ ಕುಟುಂಬಕ್ಕೆ ಮಂಗಳವಾರ ಮಧ್ಯಾಹ್ನ ಮಾಹಿತಿ ನೀಡಿದೆ. ಇದರಿಂದ ಕುಟುಂಬದ ಸದಸ್ಯರಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ಪ್ರಕಾಶ ಪುಂಡಲಿಕ ಜಾಧವ ಅವರು ಕಳೆದ 11 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 2007ರಲ್ಲಿ ಬೆಳಗಾವಿ ಮರಾಠಾ ಲೈಟ್ ಇನ್ಪ್ರಂಟ್ದಲ್ಲಿ ಭತರ್ಿ ಹೊಂದಿ ಇದೀಗ ಮೇಜರಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು. ಆದರೆ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿರುವುದು ದುರಂತದ ಸಂಗತಿ. 

ಹುತಾತ್ಮ ಯೋಧ ಪ್ರಕಾಶ ಜಾಧವ ಅವರು ಪತ್ನಿ ನೀತಾ, ತಾಯಿ ಶಾರದಾ, ತಂದೆ ಪುಂಡಲಿಕ ಮತ್ತು ಮೂರು ತಿಂಗಳ ಹಿಂದೆ ಜನಿಸಿರುವ ಮಗಳು ಶ್ರಾವಣಿಯನ್ನು ಅಗಲಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದ ಯೋಧ ಪ್ರಕಾಶ ಇತ್ತಿಚ್ಚೆಗೆ ದೀಪಾವಳಿ ಹಬ್ಬ ಮತ್ತು ಮಗಳನ್ನು ನೋಡಲಿಕ್ಕೆ ಗ್ರಾಮಕ್ಕೆ ಬಂದು ಹದಿನೈದು ದಿನಗಳ ಹಿಂದೆಯಷ್ಟೇ ಮರಳಿ ನೌಕರಿಗೆ ಹಾಜರಾಗಿದ್ದರು. ಕುಟುಂಬದವರ ಜೊತೆ ರವಿವಾರ ರಾತ್ರಿಯಷ್ಟೇ ದೂರವಾಣಿ ಕರೆ ಮಾಡಿ ಎಲ್ಲರ ಯೋಗ ಕ್ಷೇಮ ವಿಚಾರಿಸಿದನು ಎಂದು ಯೋಧನ ಕುಟುಂಬಸ್ಥರು ತಿಳಿಸಿದರು.

ವಿಷಯ ತಿಳಿಯುತ್ತಿದ್ದಂತೆಯೇ ನಿಪ್ಪಾಣಿ ತಹಶೀಲ್ದಾರ ಎಂ.ಎಸ್.ಬಣಸಿ ಬೂದಿಗಾಳ ಗ್ರಾಮಕ್ಕೆ ಭೇಟಿ ನೀಡಿ ಪ್ರಕಾಶ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತ ಯೋಧನ ಪಾಥರ್ಿವ ಶರೀರ ಬುಧವಾರ ಮಧ್ಯಾಹ್ನ ಸ್ವಗ್ರಾಮಕ್ಕೆ ಬರುತ್ತಿದ್ದು, ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ತಹಶೀಲ್ದಾರ ಎಂ.ಎಸ್.ಬಣಸಿ ತಿಳಿಸಿದರು.