ಕಾಶ್ಮೀರ: ಹಲವೆಡೆ ನಿರ್ಬಂಧ ಸಡಿಲ, ಎಲ್ಲೆಡೆ ಖಾಕಿ ಕಣ್ಗಾವಲು

ಸಂಗ್ರಹ ಚಿತ್ರ

ಶ್ರೀನಗರ 20: ಕೇಂದ್ರ ಸಕರ್ಾರ 370ನೇ ವಿಧಿ ಹಾಗೂ 35 ಎ ಪರಿಚ್ಛೇದ ರದ್ದುಗೊಳಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ 5 ರಿಂದ ಹೇರಲಾಗಿರುವ ನಿರ್ಬಂಧಗಳು ಮತ್ತು ಮುಷ್ಕರ ಜನಜೀನವನದ ಮೇಲೆ ಪರಿಣಾಮ ಬೀರಿದೆ ಅಹಿತಕರ ಘಟನೆಗಳ ವರದಿಯಾಗಿಲ್ಲವಾದರೂ,  ಬ್ರಾಡ್ಬ್ಯಾಂಡ್ ಮತ್ತು ಮೊಬೈಲ್ ಸೇವೆಗಳನ್ನು ಸತತ 16 ನೇ ದಿನಕ್ಕೆ ಸ್ಥಗಿತಗೊಳಿಸಲಾಗಿದೆ. 

 ಆಗಸ್ಟ್ 5 ರ ನಂತರ ಮೊದಲ ಬಾರಿಗೆ, ಡೌನ್ಟೌನ್ ಮತ್ತು ಶೆಹರ್-ಎ-ಖಾಸ್ (ಸೆಕೆ) ನಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಯಿತಾದರೂ ವ್ಯಾಪಾರ ಮತ್ತು ಇತರ ಚಟುವಟಿಕೆಗಳು ದುರ್ಬಲಗೊಂಡಿವೆ  ಅಗತ್ಯ ವಸ್ತುಗಳು, ವಿಶೇಷವಾಗಿ ಹಾಲು, ಮಗುವಿನ ಆಹಾರ, ತರಕಾರಿಗಳು ಮತ್ತು ಔಷಧಿಗಳ ಕೊರತೆ ಅವರು ಎದುರಿಸುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ ನಿರ್ಬಂಧಗಳು ಮತ್ತು ಮುಷ್ಕರದಿಂದಾಗಿ ನಗರದ ಹೊರವಲಯದಿಂದ ಹಾಲುಕರೆಯುವವರು ಮತ್ತು ತರಕಾರಿ ಮಾರಾಟಗಾರರು ಈ ಪ್ರದೇಶಗಳಿಗೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ 

 ಐತಿಹಾಸಿಕ ಜಾಮಾ ಮಸೀದಿಯ ಎಲ್ಲಾ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದ್ದು, ಪ್ರತ್ಯೇಕತಾವಾದಿ ಮುಖಂಡರು ನಡೆಸಬಹುದಾದ ಪ್ರತಿಭಟನೆಯನ್ನು ತಡೆಯಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 

 ಯಾವುದೇ ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆ ವಹಿಸಲು ಹೆಚ್ಚಿನ ಸಂಖ್ಯೆಯ ಅರೆಸೇನಾ ಪಡೆಗಳು ಮತ್ತು ರಾಜ್ಯ ಪೊಲೀಸರನ್ನು ನಿಯೋಜಿಸಲಾಗಿದೆ. ಸೋಮವಾರ ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸಲು ಅಧಿಕಾರಿಗಳು ಆದೇಶ ಹೊರಡಿಸಿದರಾದರೂ, ಹೆಚ್ಚಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಥರ್ಿಗಳ ಗೈರುಹಾಜರಿ ಎದ್ದುಕಾಣುತ್ತಿತ್ತು   ಆದರೆ, ಕುಪ್ವಾರಾದ ಗಡಿಭಾಗದಲ್ಲಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ ಗಳು ತರಗತಿಗಳಿಗೆ ಹಾಜರಾಗಿದ್ದರು. 

 ಸೋಮವಾರ ಶಾಲೆಗಳಲ್ಲಿ ಶೂನ್ಯದಿಂದ 40 ರಷ್ಟು ಹಾಜರಾತಿ ದಾಖಲಾಗಿದೆ ಬುಧವಾರದಿಂದ ಮಾಧ್ಯಮಿಕ ಶಾಲೆಗಳು ಮತ್ತೆ ತೆರೆಯಲ್ಪಡುತ್ತವೆ  ಯಾವುದೇ ಸಂವಹನ ಜಾಲ ಲಭ್ಯವಿಲ್ಲದ ಕಾರಣ ಪಾಲಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ ಪರಿಸ್ಥಿತಿ ಇನ್ನೂ ಅನಿಶ್ಚಿತವಾಗಿದೆ ಮತ್ತು ಯಾವಾಗ ಘರ್ಷಣೆಗಳು ಸಂಭವಿಸುತ್ತವೆ ಎಂದು ಯಾರಿಗೂ ತಿಳಿದಿಲ್ಲ ಎಂದು ಕಾಶ್ಮೀರದ ಶಿಕ್ಷಣ ನಿದರ್ೆಶಕರು ತಿಳಿಸಿದ್ದಾರೆ. 

 ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡ ಬಳಿಕ ಸತತ 16 ನೇ ದಿನವಾದ ಮಂಗಳವಾರವೂ ಶ್ರೀನಗರ ಮತ್ತು ಹೊರವಲಯದಲ್ಲಿ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಮುಚ್ಚಿದ್ದವು. ಅಪ್ಟೌನ್ ಮತ್ತು ಸಿವಿಲ್ ಲೈನ್ಸ್ ಪ್ರದೇಶಗಳಲ್ಲಿ, ಖಾಸಗಿ ವಾಹನಗಳು, ಹೆಚ್ಚಾಗಿ ದ್ವಿಚಕ್ರ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು. 

 ಸಿವಿಲ್ ಲೈನ್ಸ್ ಮತ್ತು ಅಪ್ಟೌನ್ನ ಹೆಚ್ಚಿನ ರಸ್ತೆಗಳಿಂದ ರಸ್ತೆ ತಡೆಗಳನ್ನು ತೆಗೆದುಹಾಕಲಾಗಿದ್ದರೂ, ಶಾಂತಿ ಕಾಪಾಡಲು ನೂರಾರು ಭದ್ರತಾ ಪಡೆಗಳು ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದ ಕೇಂದ್ರ ಭಾಗವಾದ ಲಾಲ್ ಚೌಕ್ ನಾಗರಿಕರ ಸಂದರ್ಶನಕ್ಕಾಗಿ ಮತ್ತೆ ತೆರೆಯಲ್ಪಟ್ಟಿದೆ ಆಲಾಲ್ ಚೌಕ್ ಸುತ್ತಮುತ್ತಲಿನ ಮುಳ್ಳುತಂತಿಗಳು ಮತ್ತು ಇತರ ನಿರ್ಬಂಧಗಳನ್ನು ತೆಗೆದು ಹಾಕಿದ್ದರೂ, ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಸಕರ್ಾರಿ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಹೆಚ್ಚಿನ ಉದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗಿದ್ದರು. ನಗರದ ವಿವಿಧ ಭಾಗಗಳಲ್ಲಿ ರಾತ್ರಿಯ ದಾಳಿಯಲ್ಲಿ 24 ಕ್ಕೂ ಹೆಚ್ಚು ಯುವಕರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ