ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ

ರಾಣೇಬೆನ್ನೂರು27: ತಾಲೂಕಿನ ಯಲ್ಲಾಪುರ (ವೈಟಿ ಹೊನ್ನತ್ತಿ) ಗ್ರಾಮದಲ್ಲಿ ಕಾಶಿಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಸೋಮವಾರದಂದು ಅತ್ಯಂತ ವೈಭವವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿತು.  ಶ್ರೀಗಳ ಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಗ್ರಾಮದ ಮನೆಯ ಆವರಣದಲ್ಲಿ ಮಹಿಳೆಯರು ರಂಗೋಲಿ ಚಿತ್ರಿಸಿ ಶ್ರೀಗಳ ಆಗಮನಕ್ಕೆ ಸ್ವಾಗತ ಕೋರಿದ್ದರು.

  ಗ್ರಾಮದ ಪ್ರಮು ಬೀದಿಗಳಲ್ಲಿ ಮಾವಿನ ತೋರಣಗಳಿಂದ ಶೃಂಗರಿಸಿ ಶ್ರೀಗಳ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಆಗಮಿಸುತ್ತಿದ್ದಾಗ ಮಹಿಳೆಯರು ನೀರನ್ನು ಚುಂಬಿಸಿ ಆರತಿ ಮಾಡುವುದರ ಮೂಲಕ ಭವ್ಯವಾಗಿ ಸ್ವಾಗತಿಸಿಕೊಳ್ಳುತ್ತಿದ್ದುದು ಕಂಡು ಬಂದಿತು. ಪಲ್ಲಕ್ಕಿ ಮಹೋತ್ಸವದುದ್ದಕ್ಕೂ ಜಾಂಜ್, ಡೊಳ್ಳು ಸೇರಿದಂತೆ ಸಕಲ ವಾದ್ಯವೃಂದವು ಪಲ್ಲಕ್ಕಿ ಉತ್ಸವದಲ್ಲಿ ಮೆರಗು ತಂದರು. ನಂತರ ಪಲ್ಲಕ್ಕಿ ಮಹೋತ್ಸವವು ಮುಗಿದ ಬಳಿಕ ಧರ್ಮಸಭೆಯು ನಡೆಯಿತು. ಸಹಸ್ರಾರು ಭಕ್ತರು ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ನಂತರ ಮಹಾಪ್ರಸಾದ ನೆರವೇರಿತು