ಕಸಾಪದ 112 ನೇ ಸಂಸ್ಥಾಪನಾ ದಿನಾಚರಣೆ
Kasap's 112th Foundation Day Celebration
ಕೊಲ್ಹಾರ 19: ನಾಲ್ವಡಿ ಕೃಷ್ಣರಾಜ ಒಡೆಯರ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಕನ್ನಡ ಪ್ರಾತಿನಿಧಿಕ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಿದ್ದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಕೊಲ್ಹಾರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ದಯಾನಂದ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ಕಲಗುರ್ಕಿ ಬಾಪೂಜಿ ಸಹಕಾರಿ ಬ್ಯಾಂಕ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 112 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಭಾವಚಿತ್ರಕ್ಕೆ ಪುಷ್ಪ ಅರ್ಿಸಿ ಮಾತನಾಡುತ್ತ ಕನ್ನಡ ಸಾಹಿತ್ಯ ಶ್ರೇಷ್ಠತೆಯ ಸ್ಥಾನ ಪಡೆದುಕೊಂಡಿದೆ. ಮೂವರು ರಾಷ್ಟ್ರ ಕವಿಗಳು ಹಾಗೂ ಎಂಟು ಜನ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕನ್ನಡ ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು. ಕಲಗುರ್ಕಿ ಗ್ರಾಮದ ಹಿರಿಯ ಮುಖಂಡ ಸಂಗಪ್ಪ ದೇಸಾಯಿ ಮಾತನಾಡಿ ಕನ್ನಡ ನಾಡು ನುಡಿ. ನೆಲ-ಜಲ ಹಾಗೂ ಸಂಸ್ಕೃತಿ-ಪರಂಪರೆ ಎರಡುನೂರು ವರ್ಷದ ಇತಿಹಾಸ ಹೊಂದಿರುವ ಕನ್ನಡ ನಾಡು ನಮ್ಮದು. ಕನ್ನಡ ಭಾಷೆಯ ಅಭಿಮಾನ ಮೂಡಿಸುವಂತಹ ವಿಶೇಷ ಕಾರ್ಯಕ್ರಮ ನೀಡಬೇಕು ಎಂದರು.
ಜಾನಪದ ಕಲಾವಿದ ದುಂಡಪ್ಪ ಪಾರಗೊಂಡ ಮಾತನಾಡಿ ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿದೆ. ಹಳೆಗನ್ನಡ. ನಡುಗನ್ನಡ. ಹೊಸಗನ್ನಡ ಕವಿಗಳ. ಲೇಖಕರ ಕುರಿತು ಸಂಶೋಧನೆಗಳು ಜರುಗಬೇಕು. ಭಾಷೆ ಉಳಿದರೆ ಮಾತ್ರ ನಾವೆಲ್ಲರೂ ಕನ್ನಡಿಗರಾಗಲು ಸಾಧ್ಯ ಎಂದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ. ಮಹಾದೇವಪ್ಪ ಘೋರೆ್ಡ. ಶ್ರೀಕಾಂತ ಹಿರೇಮಠ. ಅರವಿಂದ ಬಿರಾದಾರ. ರಾಮು ಬಾಗೇವಾಡಿ. ಮುತ್ತು ಪವಾರ. ಬಸವರಾಜ ಬಿರಾದಾರ. ಜಿ ಎಸ್ ಬಳ್ಳೂರ. ಮಹಾದೇವಿ ತೆಲಗಿ ಮುಂತಾದವರು ಉಪಸ್ಥಿತರಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 