ಬಿಜೆಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಕಾರವಾರದಲ್ಲಿ ಹರಿಪ್ರಸಾದ್ ಪತ್ರಿಕಾಗೋಷ್ಠಿ

ಕೇಂದ್ರದ ರಂಗಾ ಬಿಲ್ಲಾ ದೇಶದ ಆರ್ಥಿಕ ವ್ಯವಸ್ಥೆ ಹದಗೆಡಿಸಿದರು- ಬಿ.ಕೆ.ಹರಿಪ್ರಸಾದ್

ಕಾರವಾರ, ಜುಲೈ 31: ಕೇಂದ್ರದ ರಂಗ ಬಿಲ್ಲಾ ದೇಶದ ಆರ್ಥಿಕ ವ್ಯವಸ್ಥೆ ಹದಗೆಡಿಸಿದರು  .ಅವರಿಗೆ ಕೋವಿಡ್ ಸಂದರ್ಭ ದಲ್ಲಿ ಸಹ ರಾಜಸ್ಥಾನ ಸರ್ಕಾರ ಉರುಳಿಸುವ ಚಿಂತೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು. ಕಾರವಾರದ ಪತ್ರಿಕಾ ಭವನದಲ್ಲಿ ಅವರು ಸುದ್ದಿಗೋಷ್ಠಿ ಮಾಡಿದರು.

ಕೇಂದ್ರದ ಮೋದಿ ಹಾಗೂ  ಅಮಿತ್ ಶಾ  ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದ ಹರಿಪ್ರಸಾದ್ , ಕೇಂದ್ರ ಬಯಸಿದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆ ಪಡೆಯಲಿ ಎಂದರು.

ಬಿಜೆಪಿಯವರು ಹೆಣದ ಮೇಲೆ ಹಣ ಮಾಡುವವರು, ಶವದ ಮೇಲೆ ಕುಳಿತು ಊಟ ಮಾಡುವವರು ಎಂದರು.

 ಬಿಜೆಪಿಗರಿಗೆ ಯಾವುದೇ ನಾಚಿಕೆ, ಮಾನಮರ್ಯಾದೆ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜ್ಯ ಸರ್ಕಾರ ಇಂಥ ಕೊವಿಡ್  ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇದು ಕಾಂಗ್ರೆಸ್ ನ ಆರೋಪವಲ್ಲ‌. ಕೊರೋನಾ ಸಂದರ್ಭದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು (ಎಸ್ಒಪಿ) ಪಾಲಿಸಿಲ್ಲ ಎಂದು ಬೆಂಗಳೂರು ಹೈಕೋರ್ಟ ಸ್ಟ್ರಿಚರ್ ಹೊರಡಿಸಿದ ಬಳಿಕ ಸರ್ಕಾರ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಪೌರಾಯುಕ್ತರನ್ನು ಬದಲಿದೆ ಎಂದು ಆರೋಪಿಸಿದರು.


ಮೂರು ತಿಂಗಳು ಘೋಷಿಸಿದ್ದ ಲಾಕ್ ಡೌನ್ ನ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸಬಹುದಿತ್ತು. ಆದರೆ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಇದರಲ್ಲಿ ವಿಫಲರಾಗಿದ್ದಾರೆ. ಕೇವಲ ಭಾಷಣದಲ್ಲಿ ನಿರತರಾಗಿದ್ದರು. ಕೊವಿಡ್  ಸಂದರ್ಭದಲ್ಲಿ ವಿವಿಧ ಸುರಕ್ಷತಾ ಸಾಮಗ್ರಿಗಳನ್ನು ಖರೀದಿಸುವಾಗ ಸರ್ಕಾರ 2,000 ಕೋಟಿ ಹಗರಣವನ್ನು ಮಾಡಿದೆ. ಬಿಜೆಪಿಯದ್ದೇ ಮಾಜಿ ಶಾಸಕ ಬಗಲಿ ವೆಂಟಿಲೇಟರ್ ಸೆಕೆಂಡ್ ಹ್ಯಾಂಡ್ ಎಂದು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ ಎಂದರು.


ರಾಜ್ಯ ಸರ್ಕಾರದ ಸಚಿವರಲ್ಲೇ‌ ಹೊಂದಾಣಿಕೆ  ಇಲ್ಲವಾಗಿದೆ. ಪ್ರಧಾನಮಂತ್ರಿ ನಾಟಕದಲ್ಲಿ ನಿಸ್ಸೀಮರು‌. ಕೊರೋನಾ ತಡೆಗಟ್ಟಲು ತಟ್ಟೆ, ಪಾತ್ರೆ, ಆರತಿ, ಚಪ್ಪಾಳೆ ತಟ್ಟಿದರು. ಯಾವುದೂ ಫಲ ನೀಡದಾಗ ಕೋವಿಡ್ ಜತೆ ಜನತೆ ಬದುಕಬೇಕು ಎಂದರು. ಅದರ ನಂತರ ಶ್ರೀರಾಮುಲು ಕೂಡ ದೇವರೇ ಗತಿ ಎಂದು ಹೇಳಿದ್ದಾರೆ.  ಕೋವಿಡ್ ನಿಯಂತ್ರಣ ಸಾಮಾಗ್ರಿ ಖರೀದಿಯಲ್ಲಿ ನಾವು ಹೈಕೋರ್ಟ್ ನ್ಯಾಯಾಧೀಶರಿಂದ ಹಗರಣದ ತನಿಖೆಯಾಗಬೇಕೆಂದು ಈಗಾಗಲೇ ಒತ್ತಾಯಿಸಿದ್ದೇವೆ. ಸರ್ಕಾರ ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಭ್ರಷ್ಟಾಚಾರ ಆರೋಪ ಹೊತ್ತವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.


ಬೆಂಗಳೂರಲ್ಲಿ ಹೆರಿಗೆಗಳನ್ನು ನಿಭಾಯಿಸಲು  ಆಸ್ಪತ್ರೆಗಳಿಲ್ಲವಾಗಿದೆ. ವೃದ್ಧರು  ಆಸ್ಪತ್ರೆಗಳೆದುರು ಸತ್ತಿದ್ದಾರೆ. ಉತ್ತರ ಕನ್ನಡದ ಹೆಣ್ಣುಮಗಳೊಬ್ಬಳು ತನ್ನ ಮಗನಿಗೆ ಚಿಕಿತ್ಸೆ ಸಿಗದೆ ಸಿಎಂ ಮನೆ ಎದುರು ಪ್ರತಿಭಟಿಸಿದ್ದಾರೆ. ದಪ್ಪ ಚರ್ಮದ ಬಿಜೆಪಿಯವರಿಗೆ ಇದು ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ

ಭೀಮಣ್ಣ ನಾಯ್ಕ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಸತೀಶ್ ಸೈಲ್ ಇದ್ದರು.